ಇಲ್ಲಿ ಮಾಸ್ಕ್‌ ಹಂಗಿಲ್ಲ…,ಸ್ಯಾನಿಟೈಸರ್ ಕಡ್ಡಾಯವಲ್ಲ…! ಯಾಕಂದ್ರೇ ಇಲ್ಲಿಗೆ ಇನ್ನೂ ಕೊರೋನಾ ಕಾಲಿಟ್ಟಿಲ್ಲ…!!

ಲಕ್ಷದ್ವೀಪ: ವಿಶ್ವದೆಲ್ಲೆಡೆ ತನ್ನ ಕಪಿಮುಷ್ಠಿ ಚಾಚಿ ಜಗತ್ತನ್ನೇ ತಲ್ಲಣಗೊಳಿಸಿದ ಕೊರೋನಾ ಭಾರತದ ಇದೊಂದು ಪ್ರದೇಶಕ್ಕೆ ಕಾಲಿಟ್ಟಿಲ್ಲ. ಇಲ್ಲಿ ಸ್ಯಾನಿಟೈಸರ್,ಮಾಸ್ಕ್‌ ಹಂಗೂ ಇಲ್ಲ.

ಭಾರತದ ಕೇಂದ್ರಾಢಳಿತ ಪ್ರದೇಶ ಲಕ್ಷದ್ವೀಪ ಹೀಗೆ ಕೊರೋನಾ ಕಾಲಿಡದೇ ಉಳಿದ ವಿಶ್ವದ ಕೆಲವೇ ಕೆಲವು ಪ್ರದೇಶದಲ್ಲಿ ಒಂದಾಗಿದೆ. ಈ ದ್ವೀಪದಲ್ಲಿ ಇದುವರೆಗೂ ಒಂದೇ ಒಂದು ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ.

ಇಲ್ಲಿನ‌ ಜನ ಮಾಸ್ಕ್ ಹಾಕದೇ, ಸ್ಯಾನಿಟೈಶರ್ ಬಳದೇ ಆರೋಗ್ಯವಾಗಿದ್ದಾರೆ. ಅಷ್ಟೇ ಅಲ್ಲ ಇಲ್ಲಿ ಇನ್ನೂ ಕೊವೀಡ್ ಮಾರ್ಗಸೂಚಿ ಕೂಡ ಜಾರಿಯಾಗಿಲ್ಲ.

ಮಾಸ್ಕ ಧರಿಸದೇ ಇರೋದು ಮಾತ್ರವಲ್ಲದೇ ಇಲ್ಲಿನ ಜನ-ಜೀವನವೂ ಮೊದಲಿನಂತೆ ಸಹಜವಾಗಿಯೇ ನಡೆಯುತ್ತಿದ್ದು, ಮದುವೆ, ಧಾರ್ಮಿಕ, ಸಾಮಾಜಿಕ ಸಮಾರಂಭಗಳು ಕೂಡ ಕೊರೋನಾ ಪೂರ್ವದಂತೆ ಜನನಿಬಿಡವಾಗಿ ನಡೆಯುತ್ತಿದೆ.

ಲಕ್ಷದ್ವೀಪ ಹೀಗೆ ಕೊರೋನಾ ಮುಕ್ತವಾಗಲು ಕಾರಣ ಕೊರೋನಾ ನಿಯಮಗಳೇ ಎಂಬುದು ಕುತೂಹಲದ ಸಂಗತಿ. ಕೋವಿಡ್-೧೯ ಮಾರ್ಗಸೂಚಿಯನ್ನು ಕಠಿಣವಾಗಿ ಪಾಲಿಸಿ ಲಕ್ಷ ದ್ವೀಪ ಪ್ರವೇಶಕ್ಕೆ ಅವಕಾಶ ನೀಡಿದ್ದರಿಂದ ಯಾವುದೇ ಸೋಂಕಿತರು, ಶಂಕಿತರಿಗೆ ದ್ವೀಪದ ಒಳಗೆ ಪ್ರವೇಶ ಸಿಕ್ಕಿಲ್ಲ. ಹೀಗಾಗಿ ಲಕ್ಷದ್ವೀಪ ವನ್ನು ಕೊರೋನಾ ಮುಕ್ತವಾಗಿಸಲು ಸಾಧ್ಯವಾಯಿತು ಎಂಬುದು ಅಲ್ಲಿನ ಜನಪ್ರತಿನಿಧಿಗಳ ಅಭಿಪ್ರಾಯ.

ಲಕ್ಷದ್ವೀಪವನ್ನು ಪ್ರವೇಶಿಸಲು ಕೊಚ್ಚಿಯಿಂದ ಹಡಗು ಹಾಗೂ ಹೆಲಿಕ್ಯಾಪ್ಟರ್ ಸೌಲಭ್ಯವಿದೆ. ಹೀಗಾಗಿ ಅಧಿಕಾರಿ, ಸಾರ್ವಜನಿಕರು, ಪ್ರವಾಸಿ ಗರು ಸೇರಿದಂತೆ ಯಾರೇ ಲಕ್ಷದ್ವೀಪಕ್ಕೆ ಬರೋಮೊದಲು ಕೊಚ್ಚಿಯಲ್ಲಿ 7 ದಿನ ಕ್ವಾರಂಟೈನ್ ಸೇರಿದಂತೆ ಎಲ್ಲ ಕೊವೀಡ್ ಮಾರ್ಗಸೂಚಿ ಪಾಲಿಸಬೇಕೆಂಬ ನಿಯಮ ರೂಪಿಸಲಾಗಿದೆ.

ಇಲ್ಲಿ ಸಪ್ಟೆಂಬರ್ ನಿಂದಲೇ ಶಾಲೆಗಳು ಪುನರಾರಂಭವಾಗಿದ್ದು, ಜನಜೀವನ ಕೂಡ ಎಂದಿನಂತೆ ಸಾಗಿದೆ‌. ಕೇರಳದಲ್ಲಿ ಕೊರೋನಾ ಪ್ರಕರಣಗಳು ಉಲ್ಬಣಿಸುತ್ತಿದ್ದಂತೆ ಲಕ್ಷದ್ವೀಪ ಪ್ರವೇಶದ ಮೇಲೆ ನಿರ್ಭಂದ ಹೇರಿದ್ದು ಕೊವೀಡ್-೧೯ ನಿಯಂತ್ರಣಕ್ಕೆ ಹಾಗೂ ಲಕ್ಷದ್ವೀಪ ಕ್ಕೆ ಹರಡದಂತೆ ತಡೆಯಲು ಸಹಕಾರಿ ಅಯ್ತು ಅಂತಾರೆ ಅಲ್ಲಿ ಸಂಸದ ಪಿ.ಪಿ.ಮೊಹ್ಮದ್.

Comments are closed.