ನಿಗದಿತ ಸಮಯಕ್ಕಿಂತ ಮೊದಲೇ ರಿಲೀಸ್ ಆಗಿದ್ದರೂ ಕೆಜಿಎಫ್-2 ಜನಪ್ರಿಯತೆಗೆ ಯಾವುದೇ ಕುಂದು ಉಂಟಾಗಿಲ್ಲ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ನಲ್ಲಿ ತನ್ನ ನಾಗಾಲೋಟ ಮುಂದುವರೆಸಿರುವ ಕೆಜಿಎಫ್-2 ಟೀಸರ್ ಹಾಲಿವುಡ್ ಸಿನಿಮಾ ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದೆ.

ಶುಕ್ರವಾರ ಬೆಳಗ್ಗೆ 10.18 ಕ್ಕೆ ರಿಲೀಸ್ ಆಗಬೇಕಿದ್ದ ಕೆಜಿಎಫ್-2 ಸಿನಿಮಾ ಟೀಸರ್ ಕಿಡಿಗೇಡಿಗಳ ಕೃತ್ಯದಿಂದ ಗುರುವಾರ ರಾತ್ರಿ 9.29 ಕ್ಕೆ ರಿಲೀಸ್ ಆಗಿದೆ. ಆದರೂ ಟೀಸರ್ ವೀಕ್ಷಣೆಗೆ ಯಾವ ತೊಂದರೆಯೂ ಆಗಿಲ್ಲ. ಜನರು ಸಾಕಷ್ಟು ಕುತೂಹಲ ಮೂಡಿಸಿದ್ದ ಟೀಸರ್ ವೀಕ್ಷಣೆಗೆ ಮುಂದಾಗಿದ್ದು, ಹಾಲಿವುಡ್,ಬಾಲಿವುಡ್,ಟಾಲಿವುಡ್,ಕಾಲಿವುಡ್ ನಟರು ಟೀಸರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಟೀಸರ್ ವಿಶ್ವದಾಖಲೆ ಬರೆದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಟೀಸರ್ ಎಂಬ ಖ್ಯಾತಿಗೆ ಕೆಜಿಎಫ್-2 ಭಾಜನವಾಗಿದ್ದು, ವಿಶ್ವದಾಖಲೆ ಬರೆದಿದೆ. ಕೆವಲ 11.30 ಗಂಟೆಗಳಲ್ಲಿ 2.3 ಮಿಲಿಯನ್ ಅಂದ್ರೇ 23 ಲಕ್ಷ ಲೈಕ್ ಗಳನ್ನು ಪಡೆದುಕೊಂಡ ಕೆಜಿಎಫ್-2 ದಾಖಲೆ ನಿರ್ಮಿಸಿದೆ.

ವಿಜಯ ನಟನೆಯ ಮಾಸ್ಟರ್ ಚಿತ್ರದ ಟೀಸರ್ ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದು, ಈ ಚಿತ್ರದ ಟೀಸರ್ 16 ಗಂಟೆಗಳಲ್ಲಿ 16 ಲಕ್ಷ ಲೈಕ್ಸ್ ಪಡೆದು ದಾಖಲೆ ಬರೆದಿತ್ತು. ಆದರೆ ಈಗ ಈ ದಾಖಲೆಯನ್ನು ಕೆಜಿಎಫ್-2 ಉಡೀಸ್ ಮಾಡಿದ್ದು, ಹೊಸ ದಾಖಲೆ ಬರೆದಿದೆ.

2018 ರಲ್ಲಿ ರಿಲೀಸ್ ಆದ ಅವೇಂರ್ಜಸ್ ದಿ ಎಂಡ್ ಗೇಮ್ ಸಿನಿಮಾದ ಹೆಸರಿನಲ್ಲಿ ಟೀಸರ್ ನ ಅತ್ಯುನ್ನತ ವೀಕ್ಷಣೆಯ ವಿಶ್ವದಾಖಲೆ ಇದ್ದು, ಈ ಚಿತ್ರದ ಟೀಸರ್ ಬರೋಬ್ಬರಿ 32 ಲಕ್ಷ ಲೈಕ್ಸ್ ಪಡೆದಿತ್ತು.

ಈ ದಾಖಲೆಯನ್ನು ಕೆಜಿಎಫ್-2 ಮುರಿಯುವ ಸಾಧ್ಯತೆ ಇದೆ. 24 ಗಂಟೆಯೊಳಗೆ ಈ ದಾಖಲೆಯನ್ನು ಸರಿಗಟ್ಟಿ ಕೆಜಿಎಫ್-2 ಟೀಸರ್ ಹೊಸ ವಿಶ್ವದಾಖಲೆ ಬರೆಯುವತ್ತ ದಾಪುಗಾಲಿಕ್ಕಿದೆ.