ದುನಿಯಾದ ಲೂಸ್ ಮಾದ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತನಾದ ನಟ ಯೋಗೇಶ್ ಬರ್ತಡೇ ಸಂಭ್ರಮದಲ್ಲಿದ್ದಾರೆ. ಇದರೊಂದಿಗೆ ಯೋಗಿ ತಮ್ಮ ಹೊಸ ಚಿತ್ರ ಲಂಕೆಯ ಪೋಸ್ಟರ್ ಜೊತೆ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದಾರೆ.

ಬಹುದಿನಗಳ ಬಳಿಕ ಲೂಸ್ ಮಾದ ಯೋಗಿ ನಟಿಸಿರುವ ಚಿತ್ರ ಲಂಕೆ. ಈ ಚಿತ್ರ ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿದ್ದು, ಲಾಕ್ ಡೌನ್ ಸಂಪೂರ್ಣ ತೆರವಾಗಿ ಚಿತ್ರಮಂದಿರಗಳ ಬಾಗಿಲು ತೆರೆದ ಬಳಿಕ ಸಿನಿಮಾ ರಿಲೀಸ್ ಆಗಲಿದೆ.

ಯೋಗಿ ಬರ್ತಡೇ ಹಿನ್ನೆಲೆಯಲ್ಲಿ ಚಿತ್ರತಂಡ ಲಂಕೆಯ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.

ಸಾಹಸ ಪ್ರಧಾನವಾದ ಈ ಸಿನಿಮಾವನ್ನು ರಾಮ್ ಪ್ರಸಾದ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ರಾಮ್ ಪ್ರಸಾದ ಹಾಗೂ ಗುರುರಾಜ್ ದೇಸಾಯಿ ಸಂಭಾಷಣೆ ಬರೆದಿದ್ದಾರೆ.

ಬೈಕ್ ಅಪಘಾತದಲ್ಲಿ ನಿಧನರಾದ ಸಂಚಾರಿ ವಿಜಯ್ ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಕಾರ್ತಿಕ ಶರ್ಮಾ ಸಂಗೀತ ನೀಡಿದ್ದಾರೆ.

ದಿ ಗ್ರೇಟ್ ಎಂಟರಟೇನರ್ ಲಾಂಛನದಲ್ಲಿ ತೆರೆಗೆ ಬರುತ್ತಿರುವ ಈ ಸಿನಿಮಾಗೆ ಪಟೇಲ್ ಶ್ರೀನಿವಾಸ್ ಹಾಗೂ ಸುರೇಕಾ ರಾಮಪ್ರಸಾದ್ ಬಂಡವಾಳ ಹೂಡಿದ್ದಾರೆ.

ಕೃಷಿತಾಪಂಡ, ಶರತ್ ಲೋಹಿತಾಶ್ವ್, ಶೋಭರಾಜ್, ಡ್ಯಾನಿಕುಟ್ಟಪ್ಪ,ಕಾವ್ಯಶೆಟ್ಟಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದು, ಸಾಹಸಮಯ ಕತೆಯ ಈ ಚಿತ್ರ ಸಖತ್ ಕುತೂಹಲ ಮೂಡಿಸಿದೆ.