ಸೋಮವಾರ, ಏಪ್ರಿಲ್ 28, 2025
HomeBreakingಕೊರೋನಾ ಗೆದ್ದ ಮೇಘನಾರಾಜ್....! ಹೊಸ ಪೋಟೋದ ಜೊತೆ ಹೇಳಿದ್ದೇನು!?

ಕೊರೋನಾ ಗೆದ್ದ ಮೇಘನಾರಾಜ್….! ಹೊಸ ಪೋಟೋದ ಜೊತೆ ಹೇಳಿದ್ದೇನು!?

- Advertisement -

ಒಂದೊಂದೆ ಕಷ್ಟಗಳನ್ನು ಧೈರ್ಯ ದಿಂದ ಎದುರಿಸುತ್ತ ಬಂದ ಗಟ್ಟಿಗಿತ್ತಿ ನಟಿ ಮೇಘನಾ ರಾಜ್ ಸರ್ಜಾ ತಮಗೆ ಒಕ್ಕರಿಸಿದ ಕೊರೋನಾ ಮಹಾಮಾರಿಯಿಂದಲೂ ಯಶಸ್ವಿಯಾಗಿ ಹೊರಬಂದಿದ್ದಾರೆ.

ಕಳೆದ ಡಿಸೆಂಬರ್ 8 ರಂದು ಮೇಘನಾ ರಾಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮಗೆ,ತಂದೆ ಸುಂದರ ರಾಜ್,ತಾಯಿ‌ಪ್ರಮೀಳಾ‌ಜೋಷಾಯ್ ಹಾಗೂ ಪುಟಾಣಿ ಜ್ಯೂನಿಯರ್ ಚಿರುಗೆ ಕೊರೋನಾ ಕಾಣಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದರು.

ನಟಿ ಪ್ರಮೀಳಾ ಜೋಷಾಯ್ ಮತ್ತು ಸುಂದರ ರಾಜ್ ಆಸ್ಪತ್ರೆಗೆ ದಾಖಲಾಗಿದ್ದರೇ, ಮೇಘನಾ ಮತ್ತು ಜ್ಯೂನಿಯರ್ ಚಿರು ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದರು.

ಪುಟ್ಟ ಕಂದನಿಗೆ ಕೊರೋನಾ ಕಾಣಿಸಿಕೊಂಡಾಗಲೂ ಹೆದರದ ಮೇಘನಾ ಬದಲಾಗಿ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದರು. ನನ್ನ ಮತ್ತು ಚಿರು ಅಭಿಮಾನಿಗಳಲ್ಲಿ‌ ಮನವಿ ಯಾರು ಟೆನ್ಸನ್ ಮಾಡಿಕೊಳ್ಳಬೇಡಿ. ನಾವು ಈ ಹೋರಾಟವನ್ನು ಗೆದ್ದು ಬರುತ್ತೇವೆ ಎಂದಿದ್ದರು.

ಇದೀಗ ಕೊರೋನಾದಿಂದ ತಾಯಿ‌ ಮಗು ಚೇತರಿಸಿಕೊಂಡಿದ್ದು ಮೇಘನಾ ಹೊಸವರ್ಷದ ದಿನ ತಾವು ತಮ್ಮ ಸ್ನೇಹಿತೆಯನ್ನು‌ ಮೀಟ್ ಮಾಡಿದ ಪೋಟೋ ಹಾಕಿರೋದು ಅವರು ಚೇತರಿಸಿಕೊಂಡಿರೋದಿಕ್ಕೆ ಸಾಕ್ಷಿ ಒದಗಿಸಿದೆ.

ಗೋ ಲಕ್ಕಿ ಡೈರಿಸ್ ಓನರ್ ಹಾಗೂ ಅವಾರ್ಡ್ ವಿನ್ನಿಂಗ್ ಪೋಟೋಗ್ರಾಫರ್ ಭಾರ್ಗವಿಯವರನ್ನು ಮೇಘನಾ ಮೀಟ್ ಮಾಡಿದ್ದು ಈ ವಿಚಾರವನ್ನು ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಭಾರ್ಗವಿ ಜೊತೆಗಿನ ಪೋಟೋ ಹಾಕಿರುವ ಮೇಘನಾ ರಾಜ್, ಇಂಥ ಟ್ಯಾಲೆಂಟೆಡ್ ಮತ್ತು ಸ್ವೀಟ್ ಪೀಪಲ್ ಮೀಟ್ ಮಾಡಲು ಖುಷಿಯಾಗುತ್ತದೆ ಎಂದಿದ್ದರೇ, ಮೇಘನಾ ಜೊತೆಗಿನ ಪೋಟೋ ಶೇರ್ ಮಾಡಿರುವ ಭಾರ್ಗವಿ, ಈ ವರ್ಷದ ಕೊನೆದಿನ ಸ್ಟ್ರಾಂಗ್ ಮತ್ತು ಬ್ಯೂಟಿಫುಲ್ ಮಹಿಳೆಯನ್ನು ಮೀಟ್ ಮಾಡುವ ಮೂಲಕ ಮುಗಿಯಿತು ಎಂದಿದ್ದಾರೆ.


ಹೀಗಾಗಿ ಮೇಘನಾ ಕೊರೋನಾ ನೆಗೆಟಿವ್ ಆಗಿದ್ದು ಹೀಗಾಗಿ ಕ್ವಾರಂಟೈನ್ ಬದುಕಿ ನಿಂದ ಹೊರಬಂದು ಜನರನ್ನು ಭೇಟಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES

Most Popular