4 ಬಗೆಯಲ್ಲಿ ರೂಪಾಂತರಗೊಳ್ಳುತ್ತಿದೆ ಕೊರೊನಾ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ಮಾಹಿತಿ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ದೊರತಿದೆ. ಈ ನಡುವಲ್ಲೇ ಕೊರೊನಾ ರೂಪಾಂತರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಶಾಕಿಂಗ್ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.

ಹೌದು, ವಿಶ್ವವನ್ನೇ ನಡುಗಿಸಿರುವ ಕೊರೊನಾ ವೈರಸ್ ಅನ್ನೋ ಹೆಮ್ಮಾರಿಯ ಅಬ್ಬರ ಕೊಂಚ ಕಡಿಮೆಯಾಯ್ತು ಅಂತಾ ಭಾರತೀಯರು ನಿಟ್ಟುಸಿರು ಬಿಟ್ಟಿದ್ದರು. ಅಲ್ಲದೇ ಕೊರೊನಾ ಲಸಿಕೆ ನೀಡಲು ಕೇಂದ್ರ ಸರಕಾರ ಮುಂದಾಗುತ್ತಿದ್ದಂತೆಯೇ ವಿಶ್ವ ಆರೋಗ್ಯ ಸಂಸ್ಥೆ ನಿಜಕ್ಕೂ ಶಾಕ್ ಕೊಟ್ಟಿದೆ.

ಕಳೆದ ಕೆಲ ತಿಂಗಳಿನಿಂದಲೂ ಕೊರೊನಾ ರೂಪಾಂತರ ಗೊಂಡಿರುವ ವಿಚಾರ ಬಹಿರಂಗವಾಗಿತ್ತು. ಅಲ್ಲದೇ 4 ಬಗೆಯ ಕೊರೊನಾ ವೈರಸ್ ವಿಶ್ವಾದ್ಯಂತ ರೂಪಾಂತರಗೊಂಡು ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವುಹಾನ್ ನಲ್ಲಿ ಆರಂಭಗೊಂಡಿದ್ದ ಸೋಂಕು ಇಂದು ಇಡೀ ವಿಶ್ವಕ್ಕೆ ವ್ಯಾಪಿಸಿತ್ತು. ಅಲ್ಲದೇ ಸಾಕಷ್ಟು ಅನಾಹುತವನ್ನು ಸೃಷ್ಟಿಸಿತ್ತು. ಇದೀಗ ಕೊರೊನಾ ಸೋಂಕು ರೂಪಾಂತಗೊಂಡಿದೆ.

ಅಲ್ಲದೇ ಸಾರ್ಸ್-ಕೋವಿ-2 ನಿಂದ ವೈರಸ್ ಬಗ್ಗೆಯೂ ವಿಶ್ವ ಆರೋಗ್ಯ ಸಂಸ್ಥೆ ಹಲವು ವರದಿ ಬಿಡುಗಡೆ ಮಾಡಿದ್ದು, ಸಾರ್ಸ್-ಕೋವಿ-2 ಜಾಗದಲ್ಲಿ D614G ಮ್ಯುಟೆಂಟ್ ಆವರಿಸಿದೆ. ಆದರೆ ರೂಪಾಂತರ ಕೊರೊನಾ ವೇಗವಾಗಿ ಹರಡಲಿದೆ ಹೊರತು ತೀವ್ರವಾದ ಕಾಯಿಲೆಯಾಗಿ ಪರಿಣಮಿಸುವುದಿಲ್ಲ ಎಂದು ತಿಳಿಸಿದೆ.

Comments are closed.