ಭಾನುವಾರ, ಏಪ್ರಿಲ್ 27, 2025
HomeBreakingI Love You ಪ್ಲೀಸ್ ಹಿಂತಿರುಗಿ ಬಾ….! ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ ಮೇಘನಾ...

I Love You ಪ್ಲೀಸ್ ಹಿಂತಿರುಗಿ ಬಾ….! ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ ಮೇಘನಾ ಪೋಸ್ಟ್…!!

- Advertisement -

ಸ್ಯಾಂಡಲ್ ವುಡ್ ನ ಲವ್ಲಿ ಜೋಡಿಯಾಗಿದ್ದ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಗೆ ಎರಡು ವರ್ಷ ತುಂಬುವಷ್ಟರಲ್ಲೇ ವಿಧಿಯಾಟಕ್ಕೆ ಬಲಿಯಾದ ಚಿರು ಇಹಲೋಕ ತ್ಯಜಿಸಿದ್ದಾರೆ. ಆದರೆ ಅಗಲಿದ ಪತಿಯನ್ನು ಮರೆಯಲಾಗದೇ ಕೊರಗುತ್ತಿರುವ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ವೊಂದನ್ನು ಹಾಕಿದ್ದು, ನಾನು ನಿನ್ನನ್ನು ಪ್ರೀತಿಸುತ್ತೇನೆ. ಪ್ಲೀಸ್ ಹಿಂತಿರುಗಿ ಬಾ ಎಂದಿದ್ದಾರೆ.

ಮೇಘನಾ ರಾಜ್ ಹಾಗೂ ಚಿರು 10 ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಹೆತ್ತವರ ಒಪ್ಪಿಗೆ ಪಡೆದು  2018 ರಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಆದರೆ ಮದುವೆಗೆ ಎರಡು ವರ್ಷ ತುಂಬುವಷ್ಟರಲ್ಲೇ ಮೇಘನಾ ಐದು ತಿಂಗಳ ಗರ್ಭಿಣಿಯಾಗಿದ್ದಾಗಲೇ ಚಿರು ತೀವ್ರ ಹೃದಯಾಘಾತಕ್ಕೆ ಬಲಿಯಾಗಿದ್ದರು. ಚಿರು ತೀರಿಕೊಂಡ ನಾಲ್ಕು ತಿಂಗಳ ಬಳಿಕ ಮೇಘನಾ ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದ್ದರು.

ಮಗುವನ್ನು ಜ್ಯೂನಿಯರ್ ಚಿರು ಎಂದೇ ಕರೆದ ಮೇಘನಾ ಮಗನ ಮುಖ ನೋಡಿ ಎಲ್ಲ ದುಃಖ ಮರೆಯುವುದಾಗಿ ಹೇಳಿದ್ದರು. ಆದರೆ ಮೇಘನಾಗೆ ಪ್ರತಿನಿತ್ಯವೂ ಚಿರು ನೆನಪು ಕಾಡುತ್ತಲೇ ಇದೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಳೆಯ ಪೋಟೋಗಳನ್ನು ಶೇರ್ ಮಾಡಿಕೊಂಡು ನೆನಪುಗಳನ್ನು ತಾಜಾಗೊಳಿಸುತ್ತಿದ್ದ ಮೇಘನಾ ಇದೀಗ ಭಾವುಕ ಪೋಸ್ಟ್ ವೊಂದನ್ನು ಬರೆದು ಪತಿಯನ್ನು ನೆನಪಿಸಿಕೊಂಡಿದ್ದಾರೆ.

ಐಫೆಲ್ ಟವರ್ ಬಳಿಯಲ್ಲಿ ಚಿರು ಹಾಗೂ ಮೇಘನಾ ಜೊತೆಯಾಗಿ ತೆಗೆಸಿಕೊಂಡ ಪೋಟೋವನ್ನು ಹಂಚಿಕೊಂಡಿರುವ ಮೇಘನಾ, ಹಾರ್ಟ್ ಇಮೋಜಿ ಹಾಕಿದ್ದು, ಆಯ್ ಲವ್ ಯೂ . ಕಮ್ ಬ್ಯಾಕ್ ಎಂದು ರಿಕ್ವೆಸ್ಟ್ ಮಾಡಿದ್ದಾರೆ. ಮೇಘನಾ ಈ ಭಾವುಕ್ ಪೋಸ್ಟ್ ಗೆ ಅಭಿಮಾನಿಗಳು ಅಷ್ಟೇ  ಎಮೋಶನಲ್ ಕಮೆಂಟ್ ಮಾಡಿದ್ದು, ದುಃಖವನ್ನು ಸಹಿಸಿಕೊಳ್ಳಿ ಎಂದಿದ್ದಾರೆ.

https://www.instagram.com/p/COQD589riYo/?igshid=cvu0pz25hcyw

ಇತ್ತೀಚಿಗಷ್ಟೇ ಮೇಘನಾ ರಾಜ್ ಮಗನಿಗೆ 6 ತಿಂಗಳು ತುಂಬಿದಕ್ಕೆ ಪೋಟೋಶೂಟ್ ಮಾಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಟೋಸ್ ಹಂಚಿಕೊಂಡು ಸಂಭ್ರಮಿಸಿದ್ದರು.

RELATED ARTICLES

Most Popular