ಉದಯ ಹೆಗಡೆ ಕಡಬಾಳ ನಾಪತ್ತೆ ಪ್ರಕರಣ….! ಯಕ್ಷಕಲಾವಿದ ಹೋಗಿದ್ದೆಲ್ಲಿ? ಅವರೇ ನೀಡಿದ್ರು ವಿವರಣೆ…!!

ಕೋಟ : ಬಡಗು ತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರ ನಾಪತ್ತೆ ಪ್ರಕರಣ ಕಲಾಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ನಂತರದಲ್ಲಿ ಅವರು‌ ಬೆಂಗಳೂರಿನಲ್ಲಿರುವುದು ತಿಳಿದುಬಂದಿತ್ತು. ಇದೀಗ ಈ ಕುರಿತು ಖುದ್ದು ಉದಯ ಕಡಬಾಳ ಅವರೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

h

ಎಪ್ರಿಲ್ 21‌ರಂದು ತನ್ನೂರಾಗಿರುವ ಕಡಬಾಳಕ್ಕೆ ತೆರಳಿದ್ದೆ, ಅನಿವಾರ್ಯ ಕಾರಣಗಳಿಂದಾಗಿ ತನ್ನ ಸ್ನೇಹಿತರ ಮನೆಗೆ ಹೋಗಿದ್ದೆ. ಈ ವೇಳೆಯಲ್ಲಿ ಮೊಬೈಲ್ ನೆಟ್ ವರ್ಕ್‌ ಸಮಸ್ಯೆಯಿಂದಾಗಿ ಯಾರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ನಾನು ನೆಟ್ ವರ್ಕ್ ಇರುವ ಸ್ಥಳಕ್ಕೆ ಬಂದಾಗ ತನ್ನ ತಮ್ಮನಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ವಿಚಾರ ತಿಳಿದಿದೆ. ಹೀಗಾಗಿ ನಾನು ಪತ್ನಿಗೆ ತಿಳಿಸಿ ಬೆಂಗಳೂರಿಗೆ ತೆರಳಿದ್ದೇನೆ.

ನಾನು ಮೊಬೈಲ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಭಯಗೊಂಡ ಪತ್ನಿ ಅಶ್ಬಿನಿ ಕೊಂಡದಕುಳಿ ಅವರು ಕೋಟ ಠಾಣೆಯ‌ ಪೊಲೀಸರಿಗೆ ದೂರು ನೀಡಿದ್ದರು. ಆದರೆ ತದನಂತರದಲ್ಲಿ ನಾಪತ್ತೆ ಪ್ರಕರಣದ ಸುದ್ದಿ ಎಲ್ಲೆಡೆ ಹರಿದಾಡಿದೆ. ಹೀಗಾಗಿ ಯಾರೂ ಕೂಡ ಇದಕ್ಕೆ ಬೇಡವಾದ ಕಥೆ ಸೃಷ್ಟಿಯಾಗುವುದು ಬೇಡ ಎನ್ನುವ ಕಾರಣಕ್ಕೆ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಸಮಸ್ಯೆಗಳು ಇಲ್ಲ, ಯಾವುದೇ ಊಹಾಪೋಹಗಳಿಗೆ ಕಿವಿ ಗೊಡುವುದು ಬೇಡ ಎಂದು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ‌ ಮನವಿ‌ ಮಾಡಿಕೊಂಡಿದ್ದಾರೆ.


ತನ್ನ ಮೇಲೆ ಪ್ರೀತಿ ಇಟ್ಟ ಪ್ರತಿಯೊಬ್ಬರಿಗೂ ಕೂಡ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಉದಯ ಹೆಗಡೆ ಕಡಬಾಳ ಅವರು ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಶುಭ ಹಾರೈಸಿ,  ಸಂಭ್ರಮಿಸುತ್ತಿ ದ್ದಾರೆ. ಅಷ್ಟಕ್ಕೂ ಉದಯ ಹೆಗಡೆ ಕಡಬಾಳ ಅವರು ಹೇಳಿದ್ದೇನು. ಈ ವೀಡಿಯೋ ನೋಡಿ.

https://youtu.be/0F4Xg2kKFmE
https://kannada.newsnext.live/dont-miss/a-surprise-for-doctors-who-do-not-have-lemon-juice-in-their-nose/

Comments are closed.