ಮೇಘನಾ ರಾಜ್ ಹಾಗೂ ಚಿರು ಸರ್ಜಾ ಕುಟುಂಬದಲ್ಲಿ ಬದುಕಿನ ಹೊಸ ಆಸೆ ತಂದ ಕಂದ ಜ್ಯೂನಿಯರ್ ಚಿರು. ಸಧ್ಯ ೫ ತಿಂಗಳು ಮುಗಿಸಿ ಆರನೇ ತಿಂಗಳಿಗೆ ಕಾಲಿಟ್ಟ ಜ್ಯೂನಿಯರ್ ಚಿರುಗೆ ಸಪ್ರೈಸ್‌ಕೇಕ್ ಜೊತೆ ಸಣ್ಣ ಸೆಲಿಬ್ರೇಶನ್ ಕೂಡ ಸಿಕ್ಕಿದೆ.

೬ ನೇ ತಿಂಗಳಿಗೆ ಕಾಲಿರಿಸುತ್ತಿರುವ ಜ್ಯೂನಿಯರ್ ಚಿರು ಗೆ ಮೇಘನಾ ಸ್ನೇಹಿತೆ ಸಪ್ರೈಸ್ ಲಯನ್ ಕಿಂಗ್ ಕೇಕ್ ನ್ನು ಗಿಫ್ಟ್ ಆಗಿಕಳುಹಿಸಿದ್ದಾರೆ. ಕ್ಯೂಟ್ ಕೇಕ್ ಜೊತೆ ಜ್ಯೂನಿಯರ್ ಚಿರು ೫ ತಿಂಗಳು ಪೂರ್ತಿಗೊಳಿಸಿದ ಖುಷಿ ಯನ್ನು ಸೆಲಿಬ್ರೇಟ್ ಮಾಡಲಾಗಿದೆ.

ಮೇಘನಾ ರಾಜ್ ಈ ಗಿಫ್ಟ್‌ಕೇಕ್ ಜೊತೆ ತನ್ನ ಸ್ನೇಹಿತೆಯರಿಗೆ ಧನ್ಯವಾದ ಹೇಳಿದ್ದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಮನಸೆಳೆಯುವ ಕೇಕ್ ವಿನ್ಯಾಸ ಮಾಡಿದ ಆಡಿಲೈಟ್ ಸ್ಟುಡಿಯೋ ಹಾಗೂ ಜ್ಯೂನಿಯರ್ ಚಿರುಗಾಗಿಇದನ್ನು ತಂದ ಸ್ನೇಹಿತೆಯರಾದ ವಿದ್ಯಾಶ್ರೀ ರಾವ್ ಹಾಗೂ ಶಾರದಾರಮೇಶ್ ಗೆ ಧನ್ಯವಾದ ಹೇಳಿದ್ದಾರೆ.
https://www.instagram.com/p/CMt5t9IlVi1/?igshid=saq907oqvw6
ವಿದ್ಯಾಶ್ರೀ ರಾವ್ ಕೂಡ ಸ್ಪೆಶಲ್ ಕೇಕ್,ಸೆಲಿಬ್ರೇಶನ್ ಹಾಗೂ ಮೇಘನಾ ಜ್ಯೂನಿಯರ್ ಚಿರು ಭೇಟಿಯನ್ನು ಉಲ್ಲೆಖಿಸಿ ಪೋಸ್ಟ್ ಹಾಕಿದ್ದಾರೆ.
https://www.instagram.com/p/CMt4v7VFIVr/?igshid=5lz9bgx9p5b9
ಲಯನ್ ಕಿಂಗ್ ಚಿರುಗೆ ತುಂಬ ಇಷ್ಟವಾಗಿತ್ತಂತೆ. ಮೇಘನಾಚೆಕ್ ಅಪ್ ಗಾಗಿ ಹಾಸ್ಪಿಟಲ್ ಹೋಗುತ್ತಿದ್ದಾಗ ಅಲ್ಲಿನ ಒಂದು ಬಾಲ್ಕನಿಯನ್ನು ಸೆಲೆಕ್ಟ್‌ಮಾಡಿದ್ದಚಿರು ಮಗುಜನಿಸಿದ ಕೂಡಲೇ ಆ ಬಾಲ್ಕನಿಯಲ್ಲಿ ನಿಂತು ಜಗತ್ತನ್ನು ತೋರಿಸುತ್ತೇನೆ ಎಂದಿದ್ದರಂತೆ. ಅಷ್ಟೇ ಅಲ್ಲ ಮಗ ಮತ್ತು ನಾನು ಲಯನ್ ಕಿಂಗ್ ಪೋಸ್ ರಿಕ್ರಿಯೇಟ್ ಮಾಡುತ್ತೇನೆ ಎಂದು ಕೂಡ ಹೇಳುತ್ತಿದ್ದರಂತೆ.

ಈ ಸಂಗತಿಗಳನ್ನು ಚಿರು ನಿಧನದ ಬಳಿಕ ಮೊದಲ ಬಾರಿಗೆ ಮೀಡಿಯಾ ಎದುರು ಬಂದ ಮೇಘನಾ ಹೇಳಿಕೊಂಡಿದ್ದರು. ಈಗ ಮಾರ್ಚ್ ೨೨ ರಂದು ೫ ತಿಂಗಳುಮುಗಿಸಿದ ಜ್ಯೂನಿಯರ್ ಚಿರುಗೆ ಲಯನ್‌ಕಿಂಗ್ ಕೇಕ್ ಕತ್ತರಿಸಿ ಶುಭಹಾರೈಸಿದಮೇಘನಾ ಪೋಟೋ ಹಂಚಿಕೊಂಡಿದ್ದಾರೆ.