ಮಂಗಳವಾರ, ಜೂನ್ 17, 2025
HomeBreakingಜ್ಯೂನಿಯರ್ ಚಿರು ಸ್ಯಾಂಡಲ್ ವುಡ್ ನಿಂದ ಉಡುಗೊರೆಗಳ ಸುರಿಮಳೆ…! ನಟಿ ತಾರಾ ಕೊಟ್ರು ಭರ್ಜರಿ ಗಿಫ್ಟ್…!!

ಜ್ಯೂನಿಯರ್ ಚಿರು ಸ್ಯಾಂಡಲ್ ವುಡ್ ನಿಂದ ಉಡುಗೊರೆಗಳ ಸುರಿಮಳೆ…! ನಟಿ ತಾರಾ ಕೊಟ್ರು ಭರ್ಜರಿ ಗಿಫ್ಟ್…!!

- Advertisement -

ಜ್ಯೂನಿಯರ್ ಚಿರು….ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಸರ್ಜಾ ಮಗ. ಪುಟ್ಟ ಕಂದ  ಭೂಮಿಗೆ ಬರೋ ಮೊದಲೆ ತಂದೆಯನ್ನು ಕಳೆದುಕೊಂಡಿದ್ದರೂ ಚಂದನವನದ ಎಲ್ಲರ ಪ್ರೀತಿ-ಮಮತೆಯನ್ನು ಹೊತ್ತುಕೊಂಡೇ ಬಂದಿದೆ. ಪುಟ್ಟ ಕಂದ ಮೇಘನಾ ಮಡಿಲೇರಿದಾಗಿನಿಂದ ಸ್ಯಾಂಡಲ್ ವುಡ್ ನ ಎಲ್ಲ ಸ್ಟಾರ್ ಗಳು ಜ್ಯೂನಿಯರ್ ಚಿರುಗೆ ತಮ್ಮ ಪ್ರೀತಿಯನ್ನು ಗಿಫ್ಟ್ ಮೂಲಕ ತೋರುತ್ತಲೇ ಇದ್ದಾರೆ. ಸುದೀಪ್,ಧ್ರುವ್,ದರ್ಶನ್ ಬಳಿಕ ಈಗ ತಾರಾ ಸರದಿ.

Alvas1

ನಟಿ ತಾರಾ ಎಲ್ಲರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿರುವ ನಟಿ. ಅದರಲ್ಲೂ ಸುಂದರ್ ರಾಜ್, ಪ್ರಮೀಳಾ ಜೋಷಾಯ್ ಹಾಗೂ ಮೇಘನಾ ರಾಜ್ ಪಾಲಿಗಂತೂ ಆಕೆ ಆಪ್ತೆ ಮತ್ತು ಮನೆಯ ಹತ್ತಿರದವರೇ ಆಗಿರೋದರಿಂದ ಮತ್ತಷ್ಟು ಆತ್ಮೀಯತೆ. ಚಿರು ನಿಧನರಾದಾಗ ಓಡೋಡಿ ಬಂದ ತಾರಾ ಕಣ್ಣಿರಿಟ್ಟಿದ್ದಲ್ಲದೇ ಮೇಘನಾ ರಾಜ್ ಹೊಟ್ಟೆಯಲ್ಲಿ ಮತ್ತೆ ಚಿರು ಹುಟ್ಟಿ ಬರಲಿ ಎಂದು ಹಾರೈಸಿದ್ದರು.

Meghanaraj 2 E1606542833103

ಈ ಹಾರೈಕೆ ನಿಜವಾಗಿದ್ದು, ಜ್ಯೂನಿಯರ್ ಚಿರು ಸರ್ಜಾ ಕುಟುಂಬದ ಬೆಳಕಾಗಿ ಬಂದಿದೆ. ಮಗು ಹುಟ್ಟಿದಾಗ ಮೇಘನಾಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಂಡು ಧೈರ್ಯ ತುಂಬಿದ್ದ ತಾರಾ ಈಗ ಮುದ್ದು ಮಗುವಿಗೆ ಮುದ್ದಾದ ಗಿಫ್ಟ್ ಕಳುಹಿಸಿ ತಮ್ಮ ಪ್ರೀತಿ-ವಾತ್ಸಲ್ಯ ತೋರಿದ್ದಾರೆ.

Taramkmm

ಸಧ್ಯ ಎರಡು ತಿಂಗಳಿನ  ಆ ಕಂದಮ್ಮನಿಗೆ ತಾರಾ ಬೆಚ್ಚಗಿನ ಉಡುಪು ಹಾಗೂ ಒಂದಷ್ಟು ಆಟಿಕೆಗಳನ್ನು ಕಳುಹಿಸಿಕೊಟ್ಟಿದ್ದಾರಂತೆ. ಅದರಲ್ಲೂ ವಿಶೇಷವಾಗಿ ಒಂದು ದೊಡ್ಡದಾದ ಕಾರನ್ನು ಕಳುಹಿಸಿ ಪುಟಾಣಿಗೆ ಶುಭ ಹಾರೈಸಿದ್ದಾರಂತೆ. ಇತ್ತೀಚಿಗಷ್ಟೇ ನಟ ಸುದೀಪ್ ಮಗುವಿಗೆ ವಜ್ರವನ್ನು ಉಡುಗೊರೆಯಾಗಿ ನೀಡಿದ್ದರೇ, ಚಿಕ್ಕಪ್ಪ ಧ್ರುವ್ ಸರ್ಜಾ ಬೆಳ್ಳಿಯ ತೊಟ್ಟಿಲನ್ನೇ ನೀಡಿದ್ದರು.

Meghana Raj Son Cradle Ceremony 1

ಸಧ್ಯ ಮೇಘನಾ ರಾಜ್ ತವರಿನ ತೊಟ್ಟಿಲ ಶಾಸ್ತ್ರ ಮುಗಿಸಿಕೊಂಡು ಜೆಪಿನಗರದ ತಮ್ಮ ತಂದೆ ನಿವಾಸದಲ್ಲೇ ಇದ್ದು, ಸಧ್ಯದಲ್ಲೇ ಸರ್ಜಾ ಮನೆಯಲ್ಲಿ ನಾಮಕರಣ ನಡೆಸಿ ಅವರನ್ನು ಅಲ್ಲಿಗೆ ಕರೆತರಲಾಗುತ್ತದೆ. ಸ್ಯಾಂಡಲ್ ವುಡ್ ಎಲ್ಲ ಸೆಲೆಬ್ರೆಟಿಗಳು ಮೇಘನಾ,ಚಿರು,ಸುಂದರ ರಾಜ್ ದಂಪತಿಗಳಿಗೆ ಆತ್ಮೀಯರಾಗಿರೋದರಿಂದ ಎಲ್ಲರೂ ಕೂಡ ಒಂದಿಲ್ಲೊಂದು ಗಿಫ್ಟ್ ಜೊತೆ ಜ್ಯೂನಿಯರ್ ಚಿರುಗೆ ಆಶೀರ್ವಾದ ಮಾಡ್ತಿದ್ದಾರಂತೆ.

Tvvgg

ತನ್ನ ಚಿರುನೇ ಮತ್ತೆ ಬಂದಿದ್ದಾನೆ ಅಂತ ನಂಬಿರೋ ಮೇಘನಾ ರಾಜ್ ಕೂಡ ಪುಟ್ಟ ಮಗುವಿಗೆ ಸಿಕ್ತಿರೋ ಪ್ರೀತಿ-ವಾತ್ಸಲ್ಯ,ಹಾರೈಕೆ ನೋಡಿ ತುಂಬ ಖುಷಿಯಾಗಿದ್ದು, ನನ್ನ ಮಗ ತುಂಬ ಸ್ಪೆಶಲ್ ಅಂತ ಸಂಭ್ರಮಿಸಿ ತಮ್ಮ ಮನಸ್ಸಿನ ದುಃಖ ಮರೆಯೋ ಪ್ರಯತ್ನದಲ್ಲಿದ್ದಾರೆ.

RELATED ARTICLES

Most Popular