ಮೇಘನಾ ರಾಜ್…. ಪ್ರೀತಿಯ ಪತಿಯ ಅಗಲಿಕೆಯ ನೋವಿನ ನಡುವೆಯೂ ತಮ್ಮ ಕರ್ತವ್ಯಗಳನ್ನು ಮರೆಯದೇ ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ.

ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ಜೊತೆ ನೆರಳಂತೆ ನಿಂತವರು ಮೈದುನ ಧ್ರುವ್ ಸರ್ಜಾ ಹಾಗೂ ಆತನ ಪತ್ನಿ ಪ್ರೇರಣಾ ಧ್ರುವ್. ಪ್ರೇರಣಾ ಮೇಘನಾ ಜೊತೆ ಸ್ವಂತ ತಂಗಿಯಂತೆ ನಿಂತು ದುಃಖದಲ್ಲಿ ಸಂತೈಸಿದ್ದರು.

ಹೀಗೆ ಪ್ರೀತಿಯಿಂದ ತನ್ನನ್ನು ನೋಡಿಕೊಂಡ ಪ್ರೇರಣಾ ಹುಟ್ಟುಹಬ್ಬಕ್ಕೆ ಮೇಘನಾ ಮನತುಂಬಿ ಹಾರೈಸಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಪ್ರೇರಣಾ ಜೊತೆಗಿನ ಪೋಟೋ ಹಂಚಿಕೊಂಡ ಮೇಘನಾ, ಹ್ಯಾಪಿ ಬರ್ತಡೇ ಸಿಲ್, ಅದ್ಭುತವಾಗಿರು.ನಿನ್ನದು ಸುಂದರ ಮನಸ್ಸು ಎಂದು ಬರೆದು ವಿಶ್ ಮಾಡಿದ್ದಾರೆ.
https://www.instagram.com/p/CI7ncuqr7vL/?utm_source=ig_web_copy_link
ಇನ್ನು ಮೇಘನಾ ರಾಜ್ ಶುಭಾಶಯಕ್ಕೆ ಪ್ರತಿಕ್ರಿಯಿಸಿರುವ ಪ್ರೇರಣಾ ಧ್ರುವ್ , ಥ್ಯಾಂಕ್ ಯೂ ಸೋ ಮಚ್ ಸಿಲ್‌ಮಾ ಎಂದಿದ್ದಾರೆ.
https://www.instagram.com/tv/CI7cQxpH2aF/?utm_source=ig_web_copy_link
ಪ್ರತಿವರ್ಷ ಚಿರು,ಮೇಘನಾರಾಜ್, ಧ್ರುವ್ ಹಾಗೂ ಪ್ರೇರಣಾ ಸೇರಿ ಅದ್ದೂರಿಯಾಗಿ ಪ್ರತಿಯೊಬ್ಬರ ಹುಟ್ಟುಹಬ್ಬ ಆಚರಿಸುತ್ತಾರೆ. ಆದರೆ ಈ ಭಾರಿ ಚಿರು ಇಲ್ಲದ ನೋವಿನಲ್ಲಿ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿರುವ ಧ್ರುವ್ ಖಾಸಗಿಯಾಗಿ ಸಮುದ್ರ ತೀರವೊಂದರಲ್ಲಿ ಪತ್ನಿಯ ಹುಟ್ಟುಹಬ್ಬವನ್ನು ರೋಮ್ಯಾಂಟಿಕ್ ಆಗಿ ಆಚರಿಸಿದ್ದಾರೆ.

ಅಷ್ಟೇ ಅಲ್ಲ ಪತ್ನಿ ಹುಟ್ಟುಹಬ್ಬದ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಧ್ಯ ಮೇಘನಾರಾಜ್ ಹಾಗೂ ಜ್ಯೂನಿಯರ್ ಚಿರು ಕೊರೋನಾ ಪೀಡಿತರಾಗಿದ್ದು ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ.