ಅಭಿಮಾನಿಗಳಿಗೆ ಸದಾ ಪ್ರೋತ್ಸಾಹ ಹಾಗೂ ವಿಶೇಷ ಪ್ರೀತಿ ತೋರುವ ಮೇಘನಾರಾಜ್ ಅವರ ಪ್ರೀತಿಯ ಕೊಡುಗೆಗಳನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಅಂತಹುದೇ ಅಭಿಮಾನಿಯ ಫ್ಯಾಮಿಲಿ ಪೋಟೋ ಪ್ರೇಮ್ ಮೇಘನಾ ಮನಸೆಳೆದಿದೆ.

ಮೇಘನಾ ರಾಜ್ ಹಾಗೂ ಚಿರು ಸರ್ಜಾ ರನ್ನು ಪ್ರೀತಿಸುವ ಲಕ್ಷಾಂತರ ಹೃದಯಗಳು ಇಂದಿಗೂ ಈ ಜೋಡಿಯನ್ನು ಪ್ರೀತಿಸುತ್ತಲೇ ಇದೆ. ಚಿರುವನ್ನು ಮೇಘನಾರಂತೆಸದಾ ಸ್ಮರಿಸುವ ಅಭಿಮಾನಿಗಳು ಒಂದಿಲ್ಲೊಂದು ರೀತಿ ಚಿರುವನ್ನು ನೆನಪಿಸುತ್ತಾರೆ.

ಇತ್ತೀಚೆಗಷ್ಟೇ ಅಭಿಮಾನಿಯೊಬ್ಬರು ಜ್ಯೂನಿಯರ್ ಚಿರುವನ್ನು ಎತ್ತಿಕೊಂಡು ಸಂಭ್ರಮಿಸುತ್ತಿರುವ ಚಿರು ಹಾಗೂ ಮೇಘನಾ ಪೋಟೋವನ್ನು ಸ್ಕೆಚ್‌ನಲ್ಲಿ ಬಿಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಈ ಪೋಟೋವನ್ನು ಮೇಘನಾ ರಾಜ್ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದು ಅಭಿಮಾನಿಯ ಅಭಿಮಾನವನ್ನು ಮೆಚ್ಚಿಕೊಂಡಿದ್ದಾರೆ.

ಮೇಘನಾ ಹಂಚಿಕೊಂಡ ಪೋಟೋ ನೋಡಿ ಕೆಲ ಅಭಿಮಾನಿಗಳು ಖುಷಿಯಿಂದ ಹರಸಿದ್ದರೇ ಇನ್ನು ಕೆಲವರು ಚಿರು ನೆನೆದು ಕಣ್ಣೀರಾಗಿದ್ದಾರೆ.

ಮೊನ್ನೆಯಷ್ಟೇ ಚಿರು ಹಾಗೂ ಮೇಘನಾರಿಗೆ ಆಪ್ತವಾಗಿದ್ದ ಮನೆಯ ಸದಸ್ಯನಂತಿದ್ದ ನಾಯಿ ಬ್ರುನೋ ಅಗಲಿದ್ದು ಆ ವೇಳೆ ಮೇಘನಾ ಕೊಂಚ ಭಾವುಕರಾಗಿ ಪೋಸ್ಟ್ ಹಾಕಿದ್ದರು.ಮುಂದಿನ ತಿಂಗಳು ಚಿರು ಮೊದಲ ಪುಣ್ಯತಿಥಿ ನಡೆಯಲಿದ್ದು, ಮೇಘನಾ ರಾಜ್ ಐದು ತಿಂಗಳ ಗರ್ಭಿಣಿಯಾಗಿದ್ದಾಗ ಚಿರು ಹೃದಯಾಘಾತಕ್ಕೆ ಬಲಿ ಯಾಗಿದ್ದರು.

ಪತಿ ನಿಧನದ ನಾಲ್ಕು ತಿಂಗಳ ಬಳಿಕ ಅಕ್ಟೋಬರ್ ೨೨ ರಂದು ಮೇಘನಾರಾಜ್ ಗಂಡುಮಗುವಿಗೆ ಜನ್ಮ ನೀಡಿದ್ದು ಈಗ ಜ್ಯೂನಿಯರ್ ಚಿರುಗೆ ೭ ತಿಂಗಳು ತುಂಬಿದೆ.