ಸೋಮವಾರ, ಏಪ್ರಿಲ್ 28, 2025
HomeBreakingಕೊರೋನಾ ಸಂಕಷ್ಟದ ನಡುವೆಯೂ ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ….! ವಿಕ್ರಾಂತ್ ರೋಣ ತೆರೆಗೆ ಮುಹೂರ್ತ ಫಿಕ್ಸ್…!!

ಕೊರೋನಾ ಸಂಕಷ್ಟದ ನಡುವೆಯೂ ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ….! ವಿಕ್ರಾಂತ್ ರೋಣ ತೆರೆಗೆ ಮುಹೂರ್ತ ಫಿಕ್ಸ್…!!

- Advertisement -

ಕೊರೋನಾ ಎರಡನೇ ಅಲೆಯ ನಡುವೆ ಸಿನಿಮಾ ಮಂದಿರಗಳು ಚಿತ್ರಪ್ರದರ್ಶನಕ್ಕೆ ಜನವಿಲ್ಲದೇ ಆತಂಕದಲ್ಲಿವೆ. ಹೀಗಾಗಿ ಸದ್ಯ  ತೆರೆಗೆ ಯಾವುದೇ ಬಿಗ್ ಬಜೆಟ್ ಸಿನಿಮಾ ಬರೋದು ಡೌಟ್. ಈ ಮಧ್ಯೆಯೇ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣ ತೆರೆಗೆ ಬರೋ ಮುಹೂರ್ತ ಫಿಕ್ಸ್ ಆಗಿದ್ದು, ಅಗಸ್ಟ್ 19 ರಂದು ತೆರೆಗೆ ಬರಲಿದೆ.

ಅಗಸ್ಟ್ 19 ರಂದು ವಿಕ್ರಾಂತ್ ರೋಣಾ ತೆರೆಗೆ ಬರಲಿರೋ ಸಂಗತಿಯನ್ನು ಅನೂಪ್ ಭಂಡಾರಿ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನಲ್ಲಿ ಸಾರ್ಥಕ 25 ವರ್ಷಗಳನ್ನು ಪೊರೈಸಿದ ಹಿನ್ನೆಲೆಯಲ್ಲಿ ದುಬೈನ ಬುರ್ಜಾ ಖಲೀಫಾದ ಮೇಲೆ ವಿಕ್ರಾಂತ್ ರೋಣ ಲೋಗೋ ಲಾಂಚ್ ನಡೆದಿತ್ತು.

ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಸಿನಿಮಾ ಯಾವ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾದಿದ್ದರು. ಈಗ ಚಿತ್ರತಂಡ ಸರಿಯಾಗಿ ಪ್ಲ್ಯಾನ್ ಮಾಡಿ ಯಾವುದೇ ಸಮಸ್ಯೆಗಳಿಲ್ಲದೇ ಅಭಿಮಾನಿಗಳು ಸಿನಿಮಾ ನೋಡುವಂತಾಗಲಿ ಎಂದು ಅಗಸ್ಟ್ ನಲ್ಲಿ ಸಿನಿಮಾ ರಿಲೀಸ್ ಗೆ ಮುಂದಾಗಿದೆ.

ಈಗಾಗಲೇ ಕರ್ನಾಟಕ,ಮಹಾರಾಷ್ಟ್ರ ಸೇರಿದಂತೆ ಭಾರತದ ಹಲವೆಡೆಗಳಲ್ಲಿ ಕೊರೋನಾ ಎರಡನೇ ಅಲೆ ತೀವ್ರಗೊಂಡಿದ್ದು, ಮನೋರಂಜನಾ ಕ್ಷೇತ್ರದ ಮೇಲೆ ಹೊಡೆತ ಬಿದ್ದಿದೆ. ಹೀಗಾಗಿ ಈಗ ಸಿನಿಮಾ ರಿಲೀಸ್ ಮಾಡಿದರೇ ನಷ್ಟ ಕಟ್ಟಿಟ್ಟ ಬುತ್ತಿ. ಜೂನ್ ವೇಳೆ ಕೊರೋನಾ ಅಲೆ ತಗ್ಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಸಂಗತಿಗಳನ್ನು ವಿಚಾರ ಮಾಡಿಯೇ ಚಿತ್ರತಂಡ ರಿಲೀಸ್ ಗೆ ಅಗಸ್ಟ್ ತಿಂಗಳು ಆಯ್ದುಕೊಂಡಿದೆ ಎನ್ನಲಾಗುತ್ತಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ನಟನೆಯ ಫ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್-2 ಕೂಡ ಜುಲೈನಲ್ಲಿ ರಿಲೀಸ್ ಆಗಲಿದೆ.

https://m.facebook.com/story.php?story_fbid=300301208133663&id=100044613588971

ಅನೂಪ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಮೊದಲು ಫ್ಯಾಂಟಮ್ ಹೆಸರಿನಲ್ಲಿ ಸೆಟ್ಟೇರಿತ್ತಾದರೂ ಸಿನಿಮಾದಲ್ಲಿ ಸುದೀಪ್ ಕ್ಯಾರೆಕ್ಟರ್ ವಿಕ್ರಾಂತ್ ರೋಣಾಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿದ್ದರಿಂದ ಸಿನಿಮಾ ಟೈಟಲ್ ಬದಲಾಯಿಸಲಾಗಿತ್ತು.  

RELATED ARTICLES

Most Popular