ಟೈಟಲ್ ವಿವಾದ ಸ್ಯಾಂಡಲ್ ವುಡ್ ಗೆ ಹೊಸದೇನಲ್ಲ. ಮೊನ್ನೆಮೊನ್ನೆ ಸೆಟ್ಟೇರಿದ ಲವ್ ಮೀ or ಹೇಟ್ ಮೀ ಸಿನಿಮಾ ಕೂಡ ವಿವಾದಕ್ಕೆ ಸಿಲುಕಿದ್ದು ರಚಿತಾರಾಮ್ ಹಾಗೂ ಡಾರ್ಲಿಂಗ್ ಕೃಷ್ಣ ಮೊದಲಸಿನಿಮಾಕ್ಕೆ ವಿಘ್ನ ಎದುರಾಗಿದೆ.

ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾರಾಮ್ ಮೊದಲ ಬಾರಿಗೆ ಒಂದಾಗಿ ಲವ್ ಮೀ or ಹೇಟ್ ಮೀ ಸಿನಿಮಾಕ್ಕೆ ಒಂದಾಗಿದ್ದಾರೆ.

ಆದರೆ ಈ ಜೋಡಿ ಚಿತ್ರ ಅನೌನ್ಸ್ ಮಾಡುತ್ತಿದ್ದಂತೆ ನಿರ್ದೇಶಕ ವಿ.ದೇವ ದತ್ ಅಸಮಧಾನ ಹೊರಹಾಕಿದ್ದು, ನಾವು ರಿಜಿಸ್ಟರ್ ಮಾಡಿದ ಟೈಟಲ್ ಹೇಗೆ ಬಳಸಿಕೊಳ್ಳುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆಕ್ಷ್ಯನ್ ಕಟ್ ಎಂಟಟೈನಮೆಂಟ್ ಬ್ಯಾನರ್ ಅಡಿಯಲ್ಲಿ ಲವ್ ಮೀ or ಹೇಟ್ ಮೀ ಸಿನಿಮಾ ಸೆಟ್ಟೇರುತ್ತಿದೆ. ಆದರೆ ಈ ಟೈಟಲ್ ಈಗಾಗಲೇ, ಸೈಕೋ ಸಿನಿಮಾ ನಿರ್ದೇಶಿಸಿರುವ ದೇವ್ ದತ್ ಈ ಟೈಟಲ್ ನ್ನು ವೆಂಕಟೇಶ್ವರ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ರಜಿಸ್ಟರ್ ಮಾಡಲಾಗಿದೆ.

ಈಗಾಗಲೇ ಕಥೆ ಕೂಡ ಸಿದ್ಧವಿದ್ದು ಶೂಟಿಂಗ್ ಗೂ ಸಿದ್ಧವಾಗಿದ್ದೆವು. ಆಗ ಲಾಕ್ ಡೌನ್ ಜಾರಿಯಾಗಿದ್ದರಿಂದ ಸಿನಿಮಾ ಶೂಟಿಂಗ್ ಆರಂಭವಾಗಿರಲಿಲ್ಲ. ಈಗ ಡಾರ್ಲಿಂಗ್ ಕೃಷ್ಣ ಇದೇ ಶೂಟಿಂಗ್ ಆರಂಭಿಸಿದರೆ ಹೇಗೆ? ಇದನ್ನು ನಾವು ಚಲನಚಿತ್ರ ವಾಣಿಜ್ಯ ಮಂಡಳಿ ಗಮನಕ್ಕೆ ತರುತ್ತೇವೆ ಎಂದು ದೇವದತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ರಚಿತಾ ರಾಮ್ ಸಹಿಮಾಡಿದ್ದ ಕಸ್ತೂರಿನಿವಾಸ ಸಿನಿಮಾ ಟೈಟಲ್ ವಿವಾದಕ್ಕೆ ಕಾರಣವಾಗಿತ್ತು.ಬಳಿಕ ಸಿನಿಮಾಕ್ಕೆ ಕಸ್ತೂರಿ ಮಹಲ್‌ಎಂದು ಹೆಸರಿಡಲಾಗಿತ್ತಾದರೂ ಬಳಿಕ ಆ ಸಿನಿಮಾದಿಂದ ರಚಿತಾರಾಮ್ ಹೊರಬಂದಿದ್ದರು.

ಇದೀಗ ಮತ್ತೊಮ್ಮೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸಿನಿಮಾ ವಿವಾದಕ್ಕೆ ಕಾರಣವಾಗಿದೆ.