ಕನ್ನಡದಲ್ಲಿ ಬಂದ ಸಿನಿಮಾಗಳು ಬೇರೆ ಭಾಷೆಯಲ್ಲಿ ರಿಮೇಕ್ ಆಗೋದು ಸ್ವಲ್ಪ ಕಡಿಮೆ. ಹೆಚ್ಚು ಅಂದ್ರೆ ತಮಿಳು,ತೆಲುಗು,ಹಿಂದಿಯಲ್ಲಿ ರಿಮೇಕ್ ಆದ್ರೆ ಅದೇ ದೊಡ್ಡ ವಿಚಾರ. ಆದರೆ ಅಪರೂಪಕ್ಕೆ ಕನ್ನಡದ ಸಿನಿಮಾವೊಂದು ಬರೋಬ್ಬರಿ 8 ಭಾಷೆಗಳಲ್ಲಿ ರಿಮೇಕ್ ಆಗೋ ಮೂಲಕ ಹೊಸದಾಖಲೆ ಬರೆದಿದೆ.

2016 ರಲ್ಲಿ ತೆರೆ ಕಂಡ ಎಕ್ಸಿಡೆಂಟ್ ಮಿಸ್ಟ್ರಿಯ ಸಿನಿಮಾ ಯೂಟರ್ನ್ ಬಾಕ್ಸಾಫೀಸ್ ನಲ್ಲಿ ಅಂತಹ ಯಶಸ್ಸೇನು ಕಾಣಲಿಲ್ಲ. ಆದರೆ ಈಗ ಬರೋಬ್ಬರಿ 8 ಭಾಷೆಗಳಲ್ಲಿ ರಿಮೇಕ್ ಆಗೋ ಮೂಲಕ ಹೊಸ ದಾಖಲೆ ಬರೆದಿದ್ದು, ಅಣ್ಣಾವ್ರ ಸಿನಿಮಾದ ಬಳಿಕ ಹೆಚ್ಚು ಭಾಷೆಗೆ ರಿಮೇಕ್ ಗೊಂಡ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ, ತೆಲುಗು,ಮಲೆಯಾಳಂ.ತಮಿಳು,ಹಿಂದಿ,ಸಿಂಹಿಳಿ,ಫಿಲಿಪಿನಫ,ಬಂಗಾಳಿ ಸೇರಿದಂತೆ ಒಟ್ಟು 8 ಭಾಷೆಯಲ್ಲಿ ಯೂ ಟರ್ನ್ ಪ್ರೇಕ್ಷಕರ ಮನಗೆದ್ದಿದೆ.

ಈ ವಿಚಾರವನ್ನು ಸ್ವತಃ ನಿರ್ದೇಶಕ ಪವನ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, 2016 ರಲ್ಲಿ ತೆರೆಕಂಡ ಯೂ ಟರ್ನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಾಮಾನ್ಯ ಯಶಸ್ಸು ಕಂಡಿತ್ತು. ಆದರೆ ಹಲವು ಭಾಷೆಗಳಲ್ಲಿ ರಿಮೇಕ್ ಆಗಿದೆ ಎಂದಿದ್ದಾರೆ. ಈ ಕತೆ ಕತೆಗಾರನೊಂದಿಗೆ ಹೆಚ್ಚು ಸಂರ್ಪಕ ಹೊಂದಿದ್ದು, ಇದಕ್ಕಿಂತ ಹೆಚ್ಚಿನ ಲಾಭ ಬರಹಗಾರನಿಗೆ ಬೇರೆ ಇಲ್ಲ ಎಂದಿದ್ದಾರೆ.
https://m.facebook.com/story.php?story_fbid=292553502238000&id=100044500566736
ಯೂ ಟರ್ನ್ ಗೂ ಮೊದಲು ಡಾ.ರಾಜಕುಮಾರ್ ಅನುರಾಗ ಅರಳಿತು ಸಿನಿಮಾ, ತಮಿಳು,ತೆಲುಗು,ಹಿಂದಿ,ಒಡಿಯಾ,ಬೆಂಗಾಳಿ ಹಾಗೂ ಬಾಂಗ್ಲಾದೇಶಿ ಬೆಂಗಾಳಿಗೂ ರಿಮೇಕ್ ಆಗಿತ್ತು.ಯೂ ಟರ್ನ್ ಸಿನಿಮಾದಲ್ಲಿ ಶೃದ್ಧಾ ಶ್ರೀನಾಥ್,ದಿಲೀಪ್ ರಾಜ್ ಸೇರಿದಂತೆ ಹಲವರು ನಟಿಸಿದ್ದು, ಚಿತ್ರ ಫಿಲ್ಮಫೇರ್ ಉತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿತ್ತು.