ರಾಜಧಾನಿಯಲ್ಲೇ ಬಾಗಿಲು ಮುಚ್ಚುತ್ತಿದೆ ಕನ್ನಡಶಾಲೆ…! ವಿಷ್ಣುವರ್ಧನ್ ಓದಿದ ಶಾಲೆ ಉಳಿಸಿ ಎಂದ ಸ್ಯಾಂಡಲವುಡ್ ನಟಿಮಣಿ..!!

ರಾಜ್ಯ ರಾಜಧಾನಿಯಲ್ಲಿ ಹಲವು ಸೆಲೆಬ್ರೆಟಿಗಳ ಓದಿನ ಅಂಗಳವಾಗಿದ್ದ, ನಟ ವಿಷ್ಣುವರ್ಧನ್ ಓದಿದ ಕನ್ನಡ ಶಾಲೆಯೊಂದು ಶಾಶ್ವತವಾಗಿ ಬಾಗಿಲು ಮುಚ್ಚುತ್ತಿದೆ. ಈ ವಿಚಾರ ತಿಳಿದ ನಟಿ ಪ್ರಣೀತಾ ಬೇಸರ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣ ಇತ್ತ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಾಡೆಲ್ ಹೈಸ್ಕೂಲ್ ವಿದ್ಯಾರ್ಥಿಗಳ ಕೊರತೆಯಿಂದ ಶಾಶ್ವತವಾಗಿ ಬಾಗಿಲು ಮುಚ್ಚಲು ಸಿದ್ಧವಾಗಿದೆ. 150 ವರ್ಷಗಳ ಇತಿಹಾಸ ಹೊಂದಿರುವ  ಈ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳು ದಾಖಲಾಗಿಲ್ಲ. ಹೀಗಾಗಿ ಶಾಲೆಯನ್ನು ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿದೆ.

ಈ ವಿಚಾರ ತಿಳಿದ ನಟಿ ಪ್ರಣೀತಾ ಸರ್ಕಾರ ಇತ್ತ ಗಮನ ಹರಿಸಿ ಸಂಸ್ಥೆಯ ಸಹಾಯಕ್ಕೆ ನಿಲ್ಲಬೇಕು. ನಮ್ಮ ಚ್ಯಾರಿಟೇಬಲ್ ಪೌಂಡೇಶನ್ ನಿಂದಲೂ ಅಗತ್ಯ ಸಹಾಯ ನೀಡಲು ನಾನು ಸಿದ್ಧ ಎಂದಿದ್ದಾರೆ.

ಕ್ರಿಕೆಟ್ ನ ದಂತಕತೆ ಗುಂಡಪ್ಪ ವಿಶ್ವನಾಥ್, ನಟ ವಿಷ್ಣುವರ್ಧನ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಓದಿದ  ಈ ಶಾಲೆಗೆ ಸರ್ಕಾರದ ಸಹಾಯದ ಅಗತ್ಯವಿದೆ. ಇತಿಹಾಸದ ದ್ಯೋತಕದಂತಿರುವ  ಈ ಶಾಲೆ ಉಳಿಸಬೇಕೆಂಬ ಆಗ್ರಹ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ನಟಿ ಪ್ರಣೀತಾ ಪೌಂಡೇಶನ್ ಸಾಕಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇತ್ತೀಚಿಗಷ್ಟೇ ರಾಮಮಂದಿರ ನಿರ್ಮಾಣಕ್ಕೂ ಪ್ರಣೀತಾ ದೇಣಿಗೆ ನೀಡಿದ್ದರು. ಲಾಕ್ ಡೌನ್ ವೇಳೆ ಜನಕ್ಕೂ ನೆರವಾಗಿದ್ದರು. ಈಗ ಕನ್ನಡ ಶಾಲೆ ಉಳಿಸಿ ಅಭಿಯಾನಕ್ಕೆ ಪ್ರಣೀತಾ ಧ್ವನಿಯಾಗಿದ್ದಾರೆ.

Comments are closed.