ಎಂಆರ್ ಚಿತ್ರಕ್ಕೆ ಎದುರಾಯ್ತು ಸಂಕಟ…! ಮುತ್ತಪ್ಪರೈ ಸಿನಿಮಾಕ್ಕೆ ಬೇಕು ಮಕ್ಕಳ ಒಪ್ಪಿಗೆ…!!

ಭೂಗತಲೋಕದ ಡಾನ್ ಮುತ್ತಪ್ಪ ರೈ ಬದುಕಿನ ಕತೆಯನ್ನು ತೆರೆಗೆ ತರೋ ನಿರ್ದೇಶಕರ ಕನಸಿಗೆ ಆರಂಭದಲ್ಲೇ‌ ಮತ್ತೊಂದು ವಿಘ್ನ ಎದುರಾಗಿದೆ.

ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಜೀವನಕತೆ ಆಧರಿಸಿ ಎಂಆರ್ ಹೆಸರಿನಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಈಗಾಗಲೇ ಚಿತ್ರದ ನಾಯಕ-ನಾಯಕಿ ಆಯ್ಕೆ ಹಾಗೂ ಮುಹೂರ್ತವೂ ನಡೆದಿತ್ತು.

ಆದರೆ ಈಗ ಮುತ್ತಪ್ಪರೈ ತಮ್ಮ ವಿಲ್‌ನಲ್ಲಿ ನಮೂದಿಸಿದ್ದ ಸಂಗತಿಯೊಂದು ಬೆಳಕಿಗೆ ಬಂದಿದೆ. ಮುತ್ತಪ್ಪ ರೈ ತಮ್ಮ ವೀಲ್ ನಲ್ಲಿ ತಮ್ಮ ಕುರಿತು ಸಿನಿಮಾ ನಿರ್ಮಾಣಕ್ಕೆ ಮಕ್ಕಳ ಅನುಮತಿ ಅಗತ್ಯ ಎಂದು ನಮೂದಿಸಿದ್ದಾರೆ ಎಂದು ರೈ ಪರ ವಕೀಲರು ಮಾಹಿತಿ ನೀಡಿದ್ದಾರೆ.


ರವಿ ಶ್ರೀವತ್ಸ ನಿರ್ಮಿಸಲು ಹೊರಟಿದ್ದ ಸಿನಿಮಾಗೆ ಮುತ್ತಪ್ಪ ರೈ ಆಪ್ತ ಮತ್ತು ನಿರ್ಮಾಪಕ ಪದ್ಮನಾಭ ಗೌಡ ಈಗಾಗಲೇ ವಿರೋಧ ವ್ಯಕ್ತ ಪಡಿಸಿದ್ದರು.

ತಾವು ಚಿತ್ರ ನಿರ್ಮಿಸಲು ರೈಯಿಂದ ಅನುಮತಿ ಪಡೆದಿದ್ದು ಶ್ರೀವತ್ಸ ಚಿತ್ರ‌ನಿರ್ಮಾಣ ಕೈಬಿಡಬೇಕೆಂದು ಆಗ್ರಹಿಸಿದ್ದರು. ಇದೀಗ‌ಚಿತ್ರ ನಿರ್ಮಾಣಕ್ಕೆ ರೈ‌ಮಕ್ಕಳ ಅನುಮತಿ ಅಗತ್ಯ ಎಂಬ ಸಂಗತಿ ಬಯಲಾಗಿದೆ.

ನಿರ್ಮಾಪಕ ಪದ್ಮನಾಭ್ ಚಿತ್ರ ನಿಲ್ಲಿಸುವಂತೆ ಸೂಚಿಸಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ನಿರ್ದೆಶಕ ರವಿಶ್ರೀವತ್ಸ ತಾವು ಈ ಕತೆಯಲ್ಲಿ ರೈ ಬಗ್ಗೆ ಯಾವುದೇ ಅವಹೇಳನ ತೋರಿಸುತ್ತಿಲ್ಲ. ಅವರು ಹೇಳಿದ ಸತ್ಯವನ್ನೇ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಈ ಹಿಂದೆಯೂ ಒಬ್ಬ ವ್ಯಕ್ತಿಯ ಬಗ್ಗೆ ಮೂರು ನಾಲ್ಕು ಚಿತ್ರ ಬಂದಿದೆ. ಪದ್ಮನಾಭ್ ಅವರು ಬೇಕಿದ್ದರೇ ಬೇರೆ ಚಿತ್ರ ನಿರ್ಮಿಸಲಿ ಎಂದಿದ್ದರು.

ಆದರೇ ಈಗ ಮಕ್ಕಳಾದ ರಿಕಿ ರೈ ಮತ್ತು ರಾಕಿ ರೈ ಅನುಮತಿ ಪಡೆಯದೇ ಸಿನಿಮಾ‌ ನಿರ್ಮಿಸುವಂತಿಲ್ಲ ಎನ್ನಲಾಗಿದ್ದು ರವಿಶ್ರೀವತ್ಸ್ ಮಕ್ಕಳ ಅನುಮತಿ ಪಡೆಯಬೇಕು ಇಲ್ಲವೇ ಚಿತ್ರ ನಿರ್ಮಾಣ ಕೈಬಿಡಬೇಕು ಎಂಬ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.ಇತ್ತೀಚಿಗಷ್ಟೇ ರವಿಶ್ರೀವತ್ಸ್ ಅದ್ದೂರಿಯಾಗಿ ಎಂಆರ್ ಸಿನಿಮಾದ ಮುಹೂರ್ತ ನೆರವೇರಿಸಿದ್ದರು.

Comments are closed.