ಸೋಮವಾರ, ಏಪ್ರಿಲ್ 28, 2025
HomeBreakingಬಣ್ಣ‌ ಹಚ್ಚಿದ ಸಚಿವರು....! ರಾಜಕಾರಣ ಬಿಟ್ಟು ನಟನೆಗೆ ಜೈ ಎಂದವರ್ಯಾರು ಗೊತ್ತಾ....!?

ಬಣ್ಣ‌ ಹಚ್ಚಿದ ಸಚಿವರು….! ರಾಜಕಾರಣ ಬಿಟ್ಟು ನಟನೆಗೆ ಜೈ ಎಂದವರ್ಯಾರು ಗೊತ್ತಾ….!?

- Advertisement -

ಸಿನಿಮಾಕ್ಕೂ ರಾಜಕೀಯಕ್ಕೂ ಹಳೆಯದಾದ ನಂಟಿದೆ. ಒಮ್ಮೆಯಾದ್ರೂ ರಾಜಕಾರಣಿಗಳು ನಟನೆಗೆ ಸೈ ಎಂದ್ರೇ ಬಹುತೇಕ ಸಿನಿಮಾ ನಟರು ಒಮ್ಮೆ ರಾಜಕೀಉಕ್ಕತ ಜೈ ಅನ್ನೋ ಮನಸ್ಸು ಮಾಡ್ತಾರೆ. ಈಗ ಸ್ಯಾಂಡಲ್ ವುಡ್ ಗೆ ಸಚಿವರೊಬ್ಬರ ಎಂಟ್ರಿಯಾಗಿದೆ.

ನೈಜ ಘಟನೆ ಆಧಾರಿತ ಸಿನಿಮಾವೊಂದರಲ್ಲಿ ಸಚಿವ ಡಾ.ಕೆ.ಸುಧಾಕರ್‌ಬಣ್ಣ ಹಚ್ಚಲಿದ್ದಾರೆ. ಇದೇ ಮೊದಲ ಬಾರಿಗೆ ಡಾ.ಸುಧಾಕರ್ ಕ್ಯಾಮರಾ ಎದುರಿಸಲಿದ್ದು, ಸಿನಿಮಾದ ಪೋಸ್ಟರ್ ನ್ನು ಸಿಎಂ ಬಿಎಸ್ವೈ ಅನಾವರಣಗೊಳಿಸಿದ್ದಾರೆ.

ಕೊರೋನಾ ಕಾರಣದಿಂದ‌ ನೀಟ್ ಪರೀಕ್ಷೆ ವಂಚಿತಳಾದ ಮಲೆನಾಡು ಶಿವಮೊಗ್ಗದ ಶಿಕಾರಿಪುರ ತಾಲೂಕಿನ‌ಮಲ್ಲೇನಹಳ್ಳಿಯ ತನುಜಾ ಸಿಎಂ ಬಿಎಸ್ವೈ, ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ್, ಪತ್ರಕರ್ತ ವಿಶ್ವೇಶ್ವರ್ ಭಟ್ ಹಾಗೂ ಹಲವರ ಪ್ರಯತ್ನದಿಂದ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಪಡೆದು ಎಂಬಿಬಿಎಸ್ ಸೀಟ್ ಗಳಿಸಿದ‌ ಪ್ರತಿಭಾನ್ವಿತ ವಿದ್ಯಾರ್ಥಿನಿ ತನುಜಾ ಸ್ಟೋರಿ ತೆರೆಗೆ ಬರಲಿದ್ದು.

ಸಿನಿಮಾಗೆ‌ ತನುಜಾ ಎಂದೇ ಹೆಸರಿಡಲಾಗಿದೆ. ತನುಜಾ ವೈದ್ಯಕೀಯ ಸೀಟು ಗಿಟ್ಟಿಸಿಕೊಳ್ಳಲು ನೆರವಾದ ಎಲ್ಲರೂ ಈ‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಸುಧಾಕರ್ ಉನ್ನತ ಶಿಕ್ಷಣ ಸಚಿವರಾಗಿಯೇ ನಟಿಸಲಿದ್ದಾರೆ ಎನ್ನಲಾಗಿದೆ.

ಈ ಹಿಂದೆಯೂ ಮಾಜಿ ಸ್ಪೀಕರ್ ರಮೇಶ್ ಕುಮಾರ್, ‌ಮಾಜಿಸಿಎಂ ಸಿದ್ಧು ಸೇರಿದಂತೆ ಹಲವು ರಾಜಕೀಯ‌ ನಾಯಕರು ಸಿನಿಮಾಗಳಲ್ಲಿ‌ ಮಿಂಚಿದ್ದು ಈಗ ಈ ಸಾಲಿಗೆ ಡಾ.ಸುಧಾಕರ್ ಹೊಸ ಸೇರ್ಪಡೆ.

RELATED ARTICLES

Most Popular