ಬಾಲಿವುಡ್ ಬೆಡಗಿಯರಿಗೆ ಟಕ್ಕರ್ ಕೊಟ್ಟ ಕನ್ನಡತಿ….! ಮೋಡಿ‌ ಮಾಡ್ತಿದೆ ಮ್ಯೂಸಿಕ್ ವಿಡಿಯೋ ಟೀಸರ್….!!

ಅಪ್ಪಟ ಕನ್ನಡತಿ ಹಾಗೂ ಬಹುಭಾಷಾ ನಟಿ ರಶ್ಮಿಕಾ‌ಮಂದಣ್ಣ ಬಾಲಿವುಡ್ ಗೆ ಬಿಗ್ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾಗೂ ಮುನ್ನವೇ ವಿಡಿಯೋ ಸಾಂಗ್ ಗೆ ಹೆಜ್ಜೆ ಹಾಕಿರುವ ಕೊಡಗಿನ ಕುವರಿಯ ಅಲ್ಬಂಸಾಂಗ್ ಟೀಸರ್ ಸಖತ್ ಮೋಡಿ ಮಾಡ್ತಿದೆ.

ತೆಲುಗು,ತಮಿಳು,ಹಿಂದಿ ಹೀಗೆ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ‌ ಮಂದಣ್ಣ ಬಾಲಿವುಡ್ ಬೆಡಗಿಯರಿಗೆ ಸಖತ್ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ.

ರಶ್ಮಿಕಾ ಮಂದಣ್ಣ ಹಿಂದಿಯ ರ್ಯಾಪರ್ ಬಾದ್ ಶಾರ ಟಾಪ್ ಟಕ್ಕರ್ ವಿಡಿಯೋ ಸಾಂಗ್ ಗೆ ಜೊತೆಯಾಗಿದ್ದು ಹಿಂದೆಂದೂ ಕಾಣಿಸಿಕೊಳ್ಳದ ವಿಭಿನ್ನ ಗೆಟಪ್ ನಲ್ಲಿ ಮನಸೆಳೆದಿದ್ದಾರೆ.

ಅಪ್ಪಟ ಪಂಜಾಬಿ ಕುಡಿಯಂತೆ ಕಾಣ್ತಿರೋ ಕೊಡಗಿನ ಕಿತ್ತಳೆ ಕಂಡು ಕನ್ನಡಿಗರು ಬಾಯಿ ಬಾಯಿ ಬಿಡ್ತಿದ್ದಾರೆ. ಟಾಪ್ ಟಕ್ಕರ್ ವಿಡಿಯೋ ಸಾಂಗ್ ಸಧ್ಯದಲ್ಲೇ ತೆರೆಗೆ ಬರಲಿದ್ದು 15 ಸೆಕೆಂಡ್ ಗಳ ಟೀಸರ್ ರಿಲೀಸ್ ಆಗಿದೆ.

ಟೀಸರ್ ನಲ್ಲಿ ರಶ್ಮಿಕಾ ಹೊಸ ಅವತಾರ ಬಯಲಾಗಿದ್ದು ಟ್ವೀಟರ್ ನಲ್ಲಿ ಟೀಸರ್ ಹಂಚಿಕೊಂಡಿರೋ ರಶ್ಮಿಕಾ ಇದೇ ಮೊದಲ ಬಾರಿಗೆ ಈ ರೀತಿಯ ಗೆಟ್ ಅಪ್ ನಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ತುಂಬ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ.

ಟೀಸರ್ ಸಖತ್ ಓಡ್ತಿದ್ದು ವಿಡಿಯೋ ಸಾಂಗ್ ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಟಾಪ್ ಟಕ್ಕರ್ ಬಾದ್ ಶಾ ಹಾಗೂ ವಿಘ್ನೇಶ ಶಿವನ್ ಸಾಹಿತ್ಯ ಬರೆದಿದ್ದು, ಬಾದ್ ಶಾ,ಜೋನಿತಾ ಗಾಂಧಿ ಹಾಗೂ ಯವನ್ ಶಂಕರ್ ಧ್ವನಿಯಾಗಿದ್ದಾರೆ. ಸುಮಿತ್ ಸಿಂಗ್ ನಿರ್ಮಾಣದ ಈ ವಿಡಿಯೋ ಸಾಂಗ್ ನಲ್ಲಿ ರಶ್ಮಿಕಾ ವಿಭಿನ್ನ ಗೆಟಪ್ ನಲ್ಲಿ ಮಿಂಚಿದ್ದಾರೆ.


ಹಿಂದಿಯ ಮಿಷನ್ ಮಜ್ನು ಚಿತ್ರದಲ್ಲಿ ರಶ್ಮಿಕಾ‌ ನಟಿಸಲಿದ್ದು ಸಧ್ಯದಲ್ಲೇ ರಶ್ಮಿಕಾ ತಮ್ಮ ಚೊಚ್ಚಲ ಹಿಂದಿ ಸಿನಿಮಾದ ಸೆಟ್ ಕೂಡ ಸೇರಿಕೊಳ್ಳಲಿದ್ದು ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

Comments are closed.