ಸೋಮವಾರ, ಏಪ್ರಿಲ್ 28, 2025
HomeBreakingನಟನೆಗೆ ಮರಳಿದ ಸ್ಯಾಂಡಲ್ ವುಡ್ ಸುಂದರಿ…! ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ವಂಶಿ ಬೆಡಗಿ…!!

ನಟನೆಗೆ ಮರಳಿದ ಸ್ಯಾಂಡಲ್ ವುಡ್ ಸುಂದರಿ…! ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ವಂಶಿ ಬೆಡಗಿ…!!

- Advertisement -

ಸ್ಯಾಂಡಲ್ ವುಡ್ ಸೇರಿದಂತೆ ಬಹುಭಾಷೆಗಳಲ್ಲಿ ಮಿಂಚಿದ್ದ ಚೆಂದುಳ್ಳಿ ಚೆಲುವೆ ನಿಖಿತ ತುಕ್ರಾಲ್  ಬಹುತೇಕ ಸಿನಿಮಾ ರಂಗದಿಂದಲೇ ದೂರಾಗಿದ್ದರು. ಮದುವೆ,ಮಗು ಅಂತೆಲ್ಲ ಸಂಸಾರದಲ್ಲಿ ಬ್ಯುಸಿಯಾಗಿದ್ದ ನಿಖಿತ ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದು, ಭರ್ಜರಿ ಎಂಟ್ರಿಯ ಸುಳಿವು ನೀಡಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿಯಾಗಿ ತೆರೆ ಮೇರೆ ಎಲ್ಲ ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿಸಿ ಮನಸೆಳೆದಿದ್ದ ನಿಖಿತ ತುಕ್ರಾಲ್ 2017 ರಲ್ಲಿ ಉದ್ಯಮಿ ಜೊತೆ ಸಪ್ತಪದಿ ತುಳಿದು ನಟನೆಗೆ ವಿದಾಯ ಹೇಳಿದ್ದರು. ಬಳಿಕ ಹೆಣ್ಣುಮಗುವಿನ ತಾಯಿಯಾಗಿದ್ದ ನಿಖಿತ ಬಹುತೇಕ ಚಿತ್ರರಂಗವನ್ನೇ ಮರೆತಿದ್ದರು. ಆದರೆ ಈಗ ಮತ್ತೆ ಬಣ್ಣ ಹಚ್ಚಲು ಸಿದ್ಧವಾಗಿದ್ದು, ತೆಲುಗು ವೆಬ್ ಸೀರಿಸ್ ಮೂಲಕ ಎರಡನೇ ಅಧ್ಯಾಯ ಆರಂಭಿಸಲಿದ್ದಾರಂತೆ.

10 ವರ್ಷಗಳ ಕಾಲ ವಿವಿಧ ಭಾಷೆಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಿಖಿತಾ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತ್ತು. ಆದರೆ ಈಗ ಮತ್ತೆ ನಿಖಿತ ಎರಡನೇ ಇನ್ನಿಂಗ್ಸ್ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ.

ನಿಖಿತಾ ತಾವು ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಸುಳಿವು ನೀಡಿದ್ದು, ಪ್ರಸ್ತುತ ತೆಲುಗು ವೆಬ್ ಸೀರಿಸ್ ಮೂಲಕ ಆರಂಭಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಎಲ್ಲೂ ಕೂಡ ವೆಬ್ ಸೀರಿಸ್ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಕನ್ನಡದಲ್ಲಿ ಕಿಚ್ಚ ಸುದೀಪ್, ದರ್ಶನ್, ಪುನೀತ್ ರಾಜಕುಮಾರ್ ಸೇರಿದಂತೆ ವಿವಿಧ ಸ್ಟಾರ್ ಗಳ ಜೊತೆ ನಾಯಕಿಯಾಗಿ ನಟಿಸಿದ್ದ ನಿಖಿತಾ ರಿಯಾಲಿಟಿ ಬಿಗ್ ಬಾಸ್ ನಲ್ಲೂ ಕಾಣಿಸಿಕೊಂಡಿದ್ದರು. ಮೂಲಗಳ ಪ್ರಕಾರ ನಿಖಿತ ಚಿತ್ರದಲ್ಲೂ ನಟಿಸಲು ಸೈ ಎಂದಿದ್ದು, ಬಿಗ್ ಬಜೆಟ್ ಚಿತ್ರದ ಮೂಲಕ ರೀ ಎಂಟ್ರಿ ಕೊಡಲಿದ್ದಾರಂತೆ.  

RELATED ARTICLES

Most Popular