ಸೋಮವಾರ, ಏಪ್ರಿಲ್ 28, 2025
HomeBreakingPuneeth rajkumar: ದ್ವಿತ್ವದಲ್ಲಿ ಪುನೀತ್ ರಾಜಕುಮಾರ್….! ವಿಭಿನ್ನ ಟೈಟಲ್ ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಮ್ಸ್…!!

Puneeth rajkumar: ದ್ವಿತ್ವದಲ್ಲಿ ಪುನೀತ್ ರಾಜಕುಮಾರ್….! ವಿಭಿನ್ನ ಟೈಟಲ್ ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಮ್ಸ್…!!

- Advertisement -

ಇದುವರೆಗೂ ಕಾಣಿಸಿಕೊಳ್ಳದ ವಿಭಿನ್ನ ಪಾತ್ರವೊಂದರಲ್ಲಿ ಪುನೀತ್ ರಾಜಕುಮಾರ್ ಕಾಣಿಸಿಕೊಳ್ಳುವ ಸುದ್ದಿಯೊಂದಿಗೆ ಹೊಂಬಾಳೆ ಫಿಲ್ಸ್ಮ್ ಟೈಟಲ್ ಅನೌನ್ಸ್ ಮಾಡಿದೆ. ದ್ವಿತ್ವ ಎಂಬ ಟೈಟಲ್ ನಲ್ಲಿ ಪುನೀತ್ ಗೆ ಪವನ್ ಕುಮಾರ್ ಆಕ್ಷ್ಯನ್ ಕಟ್ ಹೇಳಲಿದ್ದಾರೆ.

ಟೈಟಲ್ ಸೂಚಿಸುವಂತೆ ಇದೊಂದು ದ್ವಿಪಾತ್ರ ಅಥವಾ ಒಂದೇ ವ್ಯಕ್ತಿಯಲ್ಲಿನ ಎರಡು ವ್ಯಕ್ತಿತ್ವದ ಕತೆ ಹೇಳುವಂತ ಚಿತ್ರವಾಗಿದ್ದು, ಹೊಂಬಾಳೆ ಫಿಲ್ಸ್ಮ್ ಇದನ್ನು ಅ ಯೂನಿಕ್ ಸೈಕಾಲಾಜಿಕಲ್  ಡ್ರಾಮಾ ಎಂದು ಹೇಳಿದೆ.

ದ್ವಿತ್ವದ ಪೋಸ್ಟರ್ ಕೂಡ ರಿವೀಲ್ ಮಾಡಿದ್ದು, ಪೋಸ್ಟರ್ ನಲ್ಲೂ ಪುನೀತ್ ಎರಡು ವ್ಯಕ್ತಿತ್ವದ ವ್ಯಕ್ತಿಯಾಗಿ ಕಾಣುವಂತೆ ಚಿತ್ರಿಸಲಾಗಿದೆ. ಚಿತ್ರವನ್ನು ವಿಜಯ್ ಕಿರಂಗದೂರು ನಿರ್ಮಿಸುತ್ತಿದ್ದು, ಇದಕ್ಕೂ ಮೊದಲು ಯುವರತ್ನವನ್ನು ವಿಜಯ್ ಪುನೀತ್ ಗಾಗಿ ನಿರ್ಮಿಸಿದ್ದರು.

ಪ್ರೀತಾ ಜಯರಾಮನ್ ಛಾಯಾಗ್ರಹಣದಲ್ಲಿ ಮೂಡಿಬರಲಿರೋ ಚಿತ್ರಕ್ಕೆ ಲೂಸಿಯಾ, ಯುಟರ್ನ್ ಖ್ಯಾತಿಯ ಪವನ್ ಕುಮಾರ್ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಲಿದ್ದಾರೆ.

ಜುಲೈ 1 ರಂದು ಬೆಳಗ್ಗೆ 11.46 ಕ್ಕೆ ಚಿತ್ರದ ಟೈಟಲ್ ಘೋಷಿಸುವುದಾಗಿ ಹೊಂಬಾಳೆ ಫಿಲ್ಸ್ಮ ಘೋಷಿಸಿದ್ದು, ಅದರಂತೆ ಪೋಸ್ಟರ್ ಹಾಗೂ ಟೈಟಲ್ ರಿಲೀಸ್ ಮಾಡಿದೆ. ಸ್ವತಃ ವಿಜಯ್ ಕಿರಂಗದೂರು ಪೋಸ್ಟ್ ಹಾಕಿದ್ದಾರೆ.

ಸದ್ಯ ಕೊರೋನಾದಿಂದ ಹೊರಾಂಗಣ ಚಿತ್ರೀಕರಣ ಸ್ಥಗಿತಗೊಂಡಿರೋದರಿಂದ ಹಾಗೂ ಕೊರೋನಾ ಸೋಂಕಿನ ಪ್ರಭಾವ ಹೆಚ್ಚಿರೋದರಿಂದ ಸಪ್ಟೆಂಬರ್ ನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ನಿರ್ಧರಿಸಿದ್ದು, ಮುಂದಿನ ವರ್ಷ ಚಿತ್ರ ತೆರೆಕಾಣುವ ಸಾಧ್ಯತೆ ಇದೆ.

ಮಾಸ್ ಹಾಗೂ ಕ್ಲಾಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪುನೀತ್ ರಾಜಕುಮಾರ್ ಇದೇ ಮೊದಲ ಬಾರಿಗೆ ಸೈಕೋಲಾಜಿಕಲ್ ಇಫೆಕ್ಟ್ ಇರೋ ಕತೆಯ ಪಾತ್ರದಲ್ಲಿ ನಟಿಸಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

RELATED ARTICLES

Most Popular