ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ನಟಿ ಪ್ರಣೀತಾ ಕೊವೀಡ್ ಎರಡನೆ ಅಲೆಯ ವೇಳೆಯಲ್ಲೂ ಜನರಿಗೆ ನೆರವಾಗಿದ್ದಾರೆ. ತಮ್ಮ ಫೌಂಡೇಶನ್ ವತಿಯಿಂದ ಲಸಿಕೆ ಅಭಿಯಾನ ನಡೆಸಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ರಾಷ್ಟ್ರೀತ್ಥಾನ ಪರಿಷತ್ ಜೊತೆ ಕೈಜೋಡಿಸಿದ ನಟಿ ಪ್ರಣೀತಾ, ತಮ್ಮ ಫೌಂಡೇಶನ್ ಸಹಯೋಗದೊಂದಿಗೆ ಜನರಿಗೆ ಉಚಿತವಾಗಿ ಲಸಿಕೆ ವಿತರಿಸಿದ್ದಾರೆ. ಜಯನಗರದಲ್ಲಿ ಪ್ರಣೀತಾ ಪೌಂಡೇಶನ್ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಉಚಿತವಾಗಿ ಲಸಿಕೆ ವಿತರಣೆ ಹಮ್ಮಿಕೊಂಡಿದೆ.

ಹಲವರು ಈ ಅಭಿಯಾನದಲ್ಲಿ ಲಸಿಕೆ ಪಡೆದುಕೊಂಡಿದ್ದು, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ಪ್ರಣೀತಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿಮಾನಿಗಳು ಪೋಟೋ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

ಜೂನ್ 2 ರಂದು ಸರಳವಾಗಿ ನಟಿ ಪ್ರಣೀತಾ ತಮ್ಮ ಬಹುಕಾಲದ ಸ್ನೇಹಿತ ಹಾಗೂ ಉದ್ಯಮಿ ನಿತಿನ್ ರಾಜ್ ಜೊತೆ ಕನಕಪುರ ರೆಸಾರ್ಟ್ ನಲ್ಲಿ ವಿವಾಹವಾಗಿದ್ದರು. ಮದುವೆಯಾದ 15 ದಿನದಲ್ಲೇ ಮತ್ತೆ ಪ್ರಣೀತಾ ಸಾಮಾಜಿಕ ಸೇವೆಗೆ ಮರಳಿದ್ದಾರೆ.

ಈ ಹಿಂದೆ ವಿಷ್ಣುವರ್ಧನ್ ಓದಿದ ಶಾಲೆ ಶಾಶ್ವತವಾಗಿ ಮುಚ್ಚಿಹೋಗುವ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪ್ರಣೀತಾ ಶಾಲೆ ಉಳಿಸಲು ನೆರವಾಗಿದ್ದರು.

2019 ರಲ್ಲಿ ತೆರೆಕಂಡಿದ್ದ ಎನ್ಟಿಆರ್ ಕಥಾನಾಯಕಡು ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದು, ಸಧ್ಯ ಕನ್ನಡದ ರಾಮನಅವತಾರ ಹಾಗೂ ಹಿಂದಿಯ ಹಂಗಾಮಾ ಸಿನಿಮಾದಲ್ಲಿ ನಟಿಸಿದ್ದಾರೆ.