ಸ್ಯಾಂಡಲ್ ವುಡ್ ನಲ್ಲಿ ನಾಯಕಿ ಪ್ರಧಾನ ಹಾಗೂ ಸಸ್ಪೆನ್ಸ್ ಸಿನಿಮಾಗಳ ಮೂಲಕ ಹೊಸಶಕೆ ಆರಂಭಿಸಿದ ಪ್ರಿಯಾಂಕಾ ಸಧ್ಯ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಆದರೆ ಇದೆಲ್ಲದರ ಮಧ್ಯೆ ಕನ್ನಡದ ಗಡಿ ದಾಟಿ ಹೊರಟಿರುವ ಪ್ರಿಯಾಂಕಾ ೮ ವರ್ಷಗಳ ಬಳಿಕ ತವರಿಗೆ ಮರಳುತ್ತಿದ್ದಾರೆ.ಹಾಗಿದ್ದರೇ ಇಷ್ಟು ವರ್ಷ ಪ್ರಿಯಾಂಕಾ ತವರು ಮನೆಗೆ ಹೋಗಿರಲಿಲ್ಲವಾ ಅಂದ್ರಾ ? ಈಗ ಅವರು ತವರಿಗೆ ಮರಳ್ತಾ ಇರೋದು ಬಂಗಾಳಿ ಸಿನಿಮಾಗೆ.

ಹೌದು ಪ್ರಿಯಾಂಕಾ ಉಪೇಂದ್ರ ಬಂಗಾಳಿ ಸಿನಿಮಾಗೆ ಬಣ್ಣ ಹಚ್ಚುತ್ತಿದ್ದು ಸಾಗ್ನಿಕ್ ಚಟರ್ಜಿ ನಿರ್ದೆಶನದ ಸಿನಿಮಾದಲ್ಲಿ ನಟಿಸಲು ಸಖತ್ ಎಕ್ಸೈಟ್ ಆಗಿದ್ದಾರಂತೆ.

ಬಂಗಾಳಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಪ್ರಿಯಾಂಕಾ ಈಗಾಗಲೇ ಲುಕ್ ಟೆಸ್ಟ್ ಕೂಡ ಕೊಟ್ಟಿದ್ದಾರೆ. ಸತ್ಯಜಿತ್ ರೇ ಕಾದಂಬರಿ ಆಧಾರಿತ ಮಾಸ್ಟರ್ ಅನ್ಸ್ಯುಮಾನ್ ಚಿತ್ರದ ಲೀಡ್ ರೋಲ್ ನಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ.

ಹಲವು ವರ್ಷಗಳ ಬಳಿಕ ಪ್ರಿಯಾಂಕಾ ಬಂಗಾಳಿ ಸಿನಿಮಾದಲ್ಲಿ ನಟಿಸುತ್ತಿದ್ದು ಮಧಾಬಿಸೇನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
ಸಿನಿಮಾದ ಚಿತ್ರೀಕರಣ ಡಾರ್ಲಿಂಜಿಂಗ್ ಹಾಗೂ ಕೋಲ್ಕತ್ತಾದಲ್ಲಿ ನಡೆಯಲಿದ್ದು ಪ್ರಿಯಾಂಕಾ ತಮ್ಮ ತವರಿನ ಸ್ಥಳಗಳನ್ನು ನೋಡಲು ಉತ್ಸುಕರಾಗಿದ್ದಾರಂತೆ.

ಇದರ ಜೊತೆ ಪ್ರಿಯಾಂಕಾ ತನ್ನ ತಾಯಿ,ಸಹೋದರ ಹಾಗೂ ಸಂಬಂಧಿಕರ ಜೊತೆಗೂ ಸಮಯ ಕಳೆಯಲು ಅವಕಾಶ ಸಿಕ್ತಿರೋದರಿಂದ ಖುಷಿಯಾಗಿರೋದಾಗಿ ಹೇಳಿಕೊಂಡಿದ್ದಾರೆ.