ಭಾನುವಾರ, ಏಪ್ರಿಲ್ 27, 2025
HomeBreakingDivtva Movie: ಸೆಟ್ಟೇರುವ ಮುನ್ನವೆ ದ್ವಿತ್ವ ವಿವಾದ…! ಕದ್ದ ಡಿಸೈನ್ ನಿಂದ ಪೋಸ್ಟರ್ ಮಾಡಿದ್ರಾ ಡಿಸೈನರ್…?!

Divtva Movie: ಸೆಟ್ಟೇರುವ ಮುನ್ನವೆ ದ್ವಿತ್ವ ವಿವಾದ…! ಕದ್ದ ಡಿಸೈನ್ ನಿಂದ ಪೋಸ್ಟರ್ ಮಾಡಿದ್ರಾ ಡಿಸೈನರ್…?!

- Advertisement -

ಜುಲೈ 1 ರಂದು ಹೊಂಬಾಳೆ ಫಿಲ್ಸ್ಮ್ ಅನೌನ್ಸ್ ಮಾಡಿದ್ದ ಪುನೀತ್ ರಾಜಕುಮಾರ್ ಹೊಸ ಚಿತ್ರದ ಪೋಸ್ಟರ್ ಹಾಗೂ ಟೈಟಲ್ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದ ಹಾಟ್ ಸಬ್ಜೆಕ್ಟ್. ಆದರೆ ಈ ಪೋಸ್ಟರ್ ಇದೀಗ ವಿವಾದಕ್ಕೊಳಗಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ದ್ವಿತ್ವ ವಿಭಿನ್ನ ಪೋಸ್ಟರ್ ಪುನೀತ್ ಅಭಿಮಾನಿಗಳಿ ಖುಷಿಗೆ ಕಾರಣವಾಗಿತ್ತು. ಆದರೆ ರಿಲೀಸ್ ಆಗುತ್ತಿದ್ದಂತೆ ದ್ವಿತ್ವ ಡಿಸೈನ್ ಹೋಲುವ ಪೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದೇ ಡಿಸೈನ್ ಬಳಸಿ ದ್ವಿತ್ವ ಪೋಸ್ಟರ್ ರಿಲೀಸ್ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಆದರೆ ಈ ಆರೋಪಕ್ಕೆ ಪೋಸ್ಟರ್ ಡಿಸೈನ್ ಮಾಡಿದ ಆದರ್ಶ್ ಈ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದು, ಹೇಳಿಕೆಯೊಂದನ್ನು ರಿಲೀಸ್ ಮಾಡಿದ್ದಾರೆ. ‘ದ್ವಿತ್ವಕ್ಕೆ ಸಿದ್ಧಪಡಿಸಿರುವ ಪೋಸ್ಟರ್ ಕೃತಿಚೌರ್ಯವಲ್ಲ. ಬದಲಾಗಿ ಷಟರ್ ಸ್ಟಾಕ್ ಎಂಬ ಚಿತ್ರಗಳನ್ನು ಮಾರುವ ವೆಬ್ ಸೈಟ್ ನಿಂದ ಖರೀದಿಸಿದ್ದು ಎಂದಿದ್ದಾರೆ.

ಅಷ್ಟೇ ಅಲ್ಲ ಷಟರ್ ಸ್ಟಾಕ್ ನಿಂದ ಈ ಇಮೇಜ್ ಖರೀದಿಸಿ ಅದನ್ನು ದ್ವಿತ್ವ ಕಾನ್ಸೆಪ್ಟ್ ಅನುಗುಣವಾಗಿ ಬದಲಾಯಿಸಿಕೊಳ್ಳಲಾಗಿದೆ. ಆದರೆ ಈ ವಿಚಾರ ನಿರ್ದೇಶಕ ಪವನ್ ಕುಮಾರ್ ಹಾಗೂ ಹೊಂಬಾಳೆ ಫಿಲ್ಸ್ಮಗೆ ಈ ವಿಚಾರ ಗೊತ್ತಿಲ್ಲ ಎಂದು ಆದರ್ಶ್ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಲಾಕ್ ಡೌನ್ ನಿಂದಾಗಿ ಪುನೀತ್ ರಾಜಕುಮಾರ ಪೋಟೋಶೂಟ್ ನಡೆಸಲು ಸಾಧ್ಯವಾಗಲಿಲ್ಲ.ಹೀಗಾಗಿ ಈ ಪೋಸ್ಟರ್ ಬಳಸಿಕೊಂಡು ಅದಕ್ಕೆ ಪುನೀತ್ ಮುಖ ಬಳಸಿ ಪೋಸ್ಟರ್ ಮಾಡಲಾಗಿದೆ ಎಂದು ಆದರ್ಶ್ ಹೇಳಿದ್ದಾರೆ.

ಇದಕ್ಕೂ ಮುನ್ನ ದ್ವಿತ್ವ ಚಿತ್ರಕಥೆಗೆ ಸರಿಹೊಂದುವ ಪೋಸ್ಟರ್ ರಿಲೀಸ್ ಮಾಡಿದ ಆದರ್ಶ ಬಗ್ಗೆ ಪವನ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಬಳಿಕ  ಈ ಪೋಸ್ಟರ್ ಕೃತಿ ಚೌರ್ಯದ್ದು ಎಂಬ ಆರೋಪ ಕೇಳಿಬಂದಿತ್ತು.

RELATED ARTICLES

Most Popular