Gold Price : ಚಿನ್ನಾಭರಣ ಪ್ರಿಯರಿಗೆ ಶಾಕ್ : ಏರಿಕೆಯಾಯ್ತು ಚಿನ್ನ, ಇಳಿಕೆಯಾಯ್ತು ಬೆಳ್ಳಿ

ಬೆಂಗಳೂರು : ಕಳೆದ ಕೆಲ ದಿನಗಳಿಂದಲೂ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಏರಿಕೆಯಾಗಿದೆ. ಈ ಮೂಲಕ ಚಿನ್ನಾಭರಣ ಪ್ರಿಯರಿಗೆ ಶಾಕ್ ಕೊಟ್ಟಿದ್ರೆ, ಬೆಳ್ಳಿ‌ ಕೆಜಿಯ‌ ಮೇಲೆ 200 ರೂಪಾಯಿ ಇಳಿಕೆ ಕಂಡಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 200 ರೂಪಾಯಿ ಏರಿಕೆ ಕಂಡಿದೆ. ನಿನ್ನೆ 44 ಸಾವಿರ ರೂಪಾಯಿ ಇದ್ದ ಚಿನ್ನದ ದರ ಇಂದು 42,000 ರೂಪಾಯಿಗೆ ಏರಿಕೆ ಕಂಡಿದೆ. ಆದರೆ ಬೆಳ್ಳಿ ಕೆಜಿಗೆ 68,500 ಕ್ಕೆ ಇಳಿಕೆಯಾಗಿದೆ.

ಇನ್ನು ದೇಶದ ಪ್ರಮುಖ ನಗರಗಳಾದ ಕೇರಳ, ಮುಂಬೈ, ವಿಶಾಖ ಪಟ್ಟಣಂ, ಮಂಗಳೂರು, ವಿಜಯವಾಡ, ಮೈಸೂರು, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಪುಣೆಯಲ್ಲಿ ಬೆಂಗಳೂರಿನಲ್ಲಿರುವ ದರವೇ ಇದೆ. ಆದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢ ದಲ್ಲಿ ಚಿನ್ನದ ಬೆಲೆ 50,000 ರೂಪಾಯಿ ಸಮೀಪ ದಲ್ಲಿ ಇದೆ.

ಚಿನ್ನದ ದರ ಇಳಿಕೆ ಕಂಡು ಇದೀಗ ಏರಿಕೆ ಕಾಣುತ್ತಿದ್ರೆ ಇದೀಗ ಬೆಳ್ಳಿಯ ದರ ಮಾತ್ರ ಇಳಿಕೆಯನ್ನು ಕಂಡಿದೆ. ಬೆಳ್ಳಿ‌ ಕೆಜಿಗೆ 200 ರೂಪಾಯಿ ಕಡಿಮೆ ಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯ ದರ ಕೆ.ಜಿಗೆ 68,500 ರೂಪಾಯಿ ಇದ್ರೆ, ಉಳಿದ ನಗರಗಳಲ್ಲಿ 73,900 ರೂಪಾಯಿ ಆಸುಪಾಸಿನಲ್ಲಿದೆ.

Comments are closed.