ಕೊರೋನಾ ಎಫೆಕ್ಟ್ ನಡುವೆಯೇ ಯುವರತ್ನ ರಿಲೀಸ್ ಗೂ ಧೈರ್ಯ ತೋರಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಟೆಂಪಲ್ ರನ್ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಶಾಂತಿಕಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಪುನೀತ್ ರಾಜಕುಮಾರ್ ಪೂಜೆ ಸಲ್ಲಿಸಿದರು.

ಬಳಿಕ ಇತಿಹಾಸ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಪುನೀತ್ ರಾಜಕುಮಾರ್ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ.

ದೇವಾಲಯದ ಆಡಳಿತ ಮಂಡಳಿ ಪುನೀತ್ ಪೂಜೆಗೆ ವ್ಯವಸ್ಥೆ ಕಲ್ಪಿಸಿದೆ. ಇದೇ ವೇಳೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

ಏಪ್ರಿಲ್ ೧ ರಂದು ಗುರುವಾರ ಪುನೀತ್ ರಾಜಕುಮಾರ್ ನಟನೆಯ ಬಹುನೀರಿಕ್ಷಿತ ಯುವರತ್ನ ಸಿನಿಮಾ ತೆರೆಗೆ ಬರಲಿದೆ.