ಮಂಗಳವಾರ, ಏಪ್ರಿಲ್ 29, 2025
HomeBreakingಸಿಗರೇಟ್ ಹಿಡಿದ ಸ್ಯಾಂಡಲ್ ವುಡ್ ಬೆಡಗಿ…! ಡಿಂಪಲ್ ಕ್ವೀನ್ ಲುಕ್ ಗೆ ಫ್ಯಾನ್ಸ್ ಫಿದಾ…!!

ಸಿಗರೇಟ್ ಹಿಡಿದ ಸ್ಯಾಂಡಲ್ ವುಡ್ ಬೆಡಗಿ…! ಡಿಂಪಲ್ ಕ್ವೀನ್ ಲುಕ್ ಗೆ ಫ್ಯಾನ್ಸ್ ಫಿದಾ…!!

- Advertisement -

ಸ್ಯಾಂಡಲ್ ವುಡ್ ನ ಲಕ್ಕಿ ಹಿರೋಯಿನ್ ಅಂತನೇ ಕರೆಸಿಕೊಳ್ಳೋ  ರಚಿತಾ ರಾಮ್  ಸಧ್ಯಕ್ಕೆ ಕನ್ನಡದ ಬ್ಯುಸಿ ನಟಿಮಣಿ. ನಟಿಸಿದ ಬಹುತೇಕ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಗೆದ್ದಿರೋದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಇದುವರೆಗೂ ಟ್ರೆಡಿಷನಲ್ ಹಾಗೂ ಕ್ಲಾಸ್ ಲುಕ್ ನಲ್ಲಿ ಕಾಣಿಸಿಕೊಂಡ ರಚಿತಾ ಮಾಸ್ ಲುಕ್ ಪೋಟೋ ರಿವೀಲ್ ಆಗಿದೆ.

ಬೆಳಕಿನ ಹಬ್ಬ ದೀಪಾವಳಿ ಹೊತ್ತಲ್ಲಿ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಖ್ಯಾತಿಯ ನಟಿ ರಚಿತಾ ರಾಮ್,  ಒಂದು ಕೈಯಲ್ಲಿ ಉರಿಯುವ ಸಿಗರೇಟ್, ಮತ್ತೊಂದು ಕೈಯಲ್ಲಿ ಗನ್ ಹಿಡಿದು ಸಖತ್ ರಗಡ್ ಲುಕ್ ನಲ್ಲಿ ಪೋಸು ಕೊಟ್ಟು ಅಭಿಮಾನಿಗಳಿಗೆ ಸಖತ್ ಸಪ್ರೈಸ್ ನೀಡಿದ್ದಾರೆ.

ಏಕ್ ಲವ್ ಯಾ ಚಿತ್ರದಲ್ಲಿ ರಚ್ಚು ಈ ಮೊದಲು ಸಿಗರೇಟ್ ಹಿಡಿದು ಕಾಣಿಸಿಕೊಂಡಿದ್ದರು. ಆಗಲೇ ರಚ್ಚು ಹೊಸ ಲುಕ್ ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೇ ಮುಂದೇ ಸಾಗುತ್ತಿರುವ ರಚ್ಚು ಮತ್ತೊಮ್ಮೆ ಸಖತ್ ಸ್ಟೈಲಿಷ್ ಲುಕ್ ನಲ್ಲಿ ಪೋಸು ನೀಡಿ ಗಮನಸೆಳೆದಿದ್ದಾರೆ.

ಸಿಗರೇಟ್ ಹಾಗೂ ಗನ್ ಹಿಡಿದಿರುವ ಪೋಟೋ ಜೊತೆ ಕ್ಯಾಪ್ಸನ್ ಕೂಡ ಬರೆದಿರುವ ರಚಿತಾ ರಾಮ್, ನನ್ನಲ್ಲಿ ನೀವು ಅಪರಾಧ ಹುಡುಕಿದರೆ, ನಾನು ನಿಮಗೆ ನನ್ನನ್ನು ಹುಡುಕಬೇಡಿ ಎಂದು ಸಲಹೆ ನೀಡುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

RELATED ARTICLES

Most Popular