ಜೈಲಿನಿಂದ ಹೊರಬರುತ್ತಿದ್ದಂತೆ ತಮ್ಮ ವೃತ್ತಿ ಬದುಕಿಗೆ ಹಾಗೂ ಸಾಮಾಜಿಕ ಬದುಕಿಗೆ ಮರಳಿದ ನಟಿ ರಾಗಿಣಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ವಿಡಿಯೋ ಅಲ್ಬಂವೊಂದಕ್ಕೆ ನಟಿ ರಾಗಿಣಿ ಹೆಜ್ಜೆ ಹಾಕಿದ್ದಾರೆ.

ಕನ್ನಡದ ಜೊತೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗಲಿರುವ ವಿಡಿಯೋ ಅಲ್ಬಂಗೆ ಬಾಲಾಜಿ ಮೋಹನ್ ಕೊರಿಯೋಗ್ರಫಿ ಮಾಡಿದ್ದಾರೆ. ವಿ. ಮನೋಹರ್ ಸಂಗೀತ ನೀಡಿದ್ದು, ಹಾಡುಗಳಿಗೆ ಚರಿತ್ರಾ ಧ್ವನಿಯಾಗಿದ್ದಾರೆ.

ನಟಿ ರಾಗಿಣಿ ಇದೇ ಮೊದಲ ಬಾರಿಗೆ ಒರಿಜನಲ್ ಮ್ಯೂಸಿಕ್ ವಿಡಿಯೋ ಅಲ್ಬಂನಲ್ಲಿ ನಟಿಸಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ ಅಲ್ಬಂ.

ಬಾಲಿವುಡ್ ನಲ್ಲಿ ಬರೋ ಹಾಡುಗಳನ್ನು ಆಧರಿಸಿದ ವಿಡಿಯೋ ಅಲ್ಬಂ ಮಾದರಿಯಲ್ಲಿ ಕನ್ನಡದಲ್ಲೂ ಅಲ್ಬಂ ಸಿದ್ಧಪಡಿಸಲು ಯೋಚಿಸಿ ಈ ಅಲ್ಬಂ ಸಿದ್ಧಪಡಿಸಲಾಗಿದೆಯಂತೆ.

ಮಾಸ್ ಹಾಗೂ ಕ್ಲಾಸ್ ಗ್ಲಾಮಸರ್ ಹಾಡುಗಳಿರೋ ಈ ಅಲ್ಬಂನಲ್ಲಿ ನಟಿ ರಾಗಿಣಿ ಮೂರು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ.