Covishield: ಕೊರೋನಾ ಲಸಿಕೆಯಿಂದ ವೃದ್ಧೆ ಬದುಕು ಬಂಗಾರ….! ಕಳೆದುಕೊಂಡ ದೃಷ್ಟಿ ಮರಳಿ ಪಡೆದ ಮಥುರಾಬಾಯಿ…!!

ಮಹಾರಾಷ್ಟ್ರ: ಕೊರೋನಾ ಲಸಿಕೆಯಿಂದ ಅಡ್ಡ ಪರಿಣಾಮಗಳು ಉಂಟಾಗುತ್ತಿವೆ ಎಂಬ ಆರೋಪಗಳ ನಡುವೆ ಆಶಾದಾಯಕ ಘಟನೆಯೊಂದು ನಡೆದಿದೆ. ಕಣ್ಣು ಕಳೆದುಕೊಂಡಿದ್ದ ವೃದ್ಧೆಯೊಬ್ಬಳು ಕೋವಿಶಿಲ್ಡ್ ಲಸಿಕೆ ಬಳಿಕ ದೃಷ್ಟಿ ಮರಳಿ ಪಡೆದಿದ್ದಾಳೆ.

ಮಹಾರಾಷ್ಟ್ರದ  ವಾಷಿಂ ಜಿಲ್ಲೆಯ ನಿವಾಸಿ 9 ವರ್ಷದ ಹಿಂದೆ ಕಣ್ಣಿನ ಪೊರೆ ಸಮಸ್ಯೆಯಿಂದ ದೃಷ್ಟಿ ಕಳೆದುಕೊಂಡಿದ್ದರು. ಕೊರೋನಾಕ್ಕೆ ಕೆಲ ದಿನಗಳ ಹಿಂದೆ ಮಥುರಾಬಾಯಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದಾರೆ.

ಕೋವಿಶೀಲ್ಡ್ ಲಸಿಕೆ ಪಡೆಯುತ್ತಿದ್ದಂತೆ ಮಥುರಾಬಾಯಿ ದೃಷ್ಟಿದೋಷದ ಸಮಸ್ಯೆ ಪರಿಹಾರವಾಗಿದ್ದು, ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಜೂನ್ 26 ರಂದು ಮಥುರಾಬಾಯಿ ಕೋವಿಶೀಲ್ಡ್ ಲಸಿಕೆ ಪಡೆದಿದ್ದು, ಮಾರನೇ ದಿನದಿಂದಲೇ ಮಥುರಾ ಬಾಯಿ ಕಣ್ಣು ಶೇಕಡಾ 40 ರಷ್ಟು ದೃಷ್ಟಿ ಪಡೆದುಕೊಂಡಿದೆಯಂತೆ. ಈ ಬೆಳವಣಿಗೆ ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸಿದೆ.

ಕೇವಲ ಮಥುರಾಬಾಯಿ ಮಾತ್ರವಲ್ಲದೇ ದೇಶದ ಹಲವೆಡೆ ಕೊರೋನಾ ಲಸಿಕೆ ಪಡೆದ ಹಲವರಿಗೆ ಬಹುವರ್ಷಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ಮಾಯವಾಗಿದ್ದು, ಇದಕ್ಕೆ ವೈಜ್ಞಾನಿಕ ಅಥವಾ ವೈದ್ಯಕೀಯ ಕ್ಷೇತ್ರದಿಂದ ಯಾವುದೇ ಅಪ್ಡೇಟ್ ಸಿಕ್ಕಿಲ್ಲ.

ಒಟ್ಟಿನಲ್ಲಿ ಕೊರೋನಾ ಲಸಿಕೆಯಿಂದ ಅಡ್ಡ ಪರಿಹಾರಗಳು ಮಾತ್ರ ಎಂಬ ಗಾಸಿಪ್ ಗಳ ನಡುವೆ ಲಸಿಕೆ ರೋಗಿಗಳಿಗೂ ರಾಮಬಾಣವಾಗುತ್ತಿರುವ ಸಂಗತಿ ಜನರ ಸಮಾಧಾನಕ್ಕೆ ಕಾರಣವಾಗಿದೆ.

Comments are closed.