ಪುಟ್ಟಗೌರಿ ಖ್ಯಾತಿಯ ನಟಿ ರಂಜನಿ ರಾಘವನ್ ಸಧ್ಯ ಕಿರು ತೆರೆ ಹಾಗೂ ಹಿರಿ ತೆರೆ ಎರಡರಲ್ಲೂ ಬ್ಯುಸಿಯಾಗಿರೋ ಬೆಡಗಿ. ಇವೆಲ್ಲದರ ಮಧ್ಯೆ ರಂಜನಿ ರಾಘವನ್ ಗ್ರಾ.ಪಂ ಚುನಾವಣಾ ಕಣಕ್ಕಿಳಿದಿದ್ದಾರೆ.

ಇಷ್ಟೆಲ್ಲ ಬ್ಯುಸಿ ಲೈಫ್ ಮಧ್ಯೆ ರಂಜನಿ ಗ್ರಾಮ ಪಂಚಾಯತ್ ಚುನಾವಣೆ ಗೂ ನಿಂತ್ರಾ…? ಅಯ್ಯೋ ಬಣ್ಣದ ಲೋಕದ ಹುಡುಗಿಗೆ ಗ್ರಾಮ ಪಂಚಾಯತ್ ಬಗ್ಗೆ ಏನು ಗೊತ್ತು ಅಂತ ನೀವು ತಲೆಕೆಡಿಸಿಕೊಂಡ್ರಾ…? ಇಷ್ಟಕ್ಕೂ ರಂಜನಿ ರಾಘವನ್ ಚುನಾವಣೆ ಕಣಕ್ಕಿಳಿದಿದ್ದುನಿಜ. ಬಟ್ ಸ್ಪರ್ಧೆ ಮಾಡ್ತಿಲ್ಲ. ಬದಲಾಗಿ ಸ್ಪರ್ಧೆ ಮಾಡಿರೋರ ಪರ ಪ್ರಚಾರ ಮಾಡ್ತಿದ್ದಾರೆ.

ಶನಿವಾರ ಬಾಗಲಕೋಟೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮಕ್ಕೆ ತೆರಳಿರೋ ರಂಜನಿ ರಾಘವನ್, ತಮ್ಮ ಆಪ್ತರಾಗಿರೋ ಮೂವರು ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತಿದ್ದಾರೆ.ಸ್ಥಳೀಯ ಗ್ರಾಮ ಪಂಚಾಯತಿಗೆ ಸ್ಪರ್ಧಿಸಿರುವ ವಿಜಯಲಕ್ಷ್ಮಿ ಹೂಗಾರ್, ಯೆಂಕಪ್ಪನುಚ್ಚಿನ್, ಬಿಎನ್ ಮೇತ್ರಿ ಪರ ರಂಜನಿ ಪ್ರಚಾರ ಮಾಡಲಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಹಾಕಿರುವ ರಂಜನಿ, ಗ್ರಾಮದ ಅಭಿವೃದ್ಧಿ ಪರವಾಗಿ ದುಡಿಯುವ ನನ್ನ ಗೆಳೆಯರ ಪರವಾಗಿ ನಾನು ಮತಯಾಚಿಸುತ್ತೇನೆ ಎಂದಿದ್ದಾರೆ.

ಪುಟ್ಟ ಗೌರಿಮೂಲಕ ಪ್ರಸಿದ್ಧಿ ಪಡೆದ ರಂಜನಿ ರಾಘವನ್ ಸಧ್ಯ ಕನ್ನಡತಿ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿದ್ದು, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಐಂದ್ರೀತಾ ರೈ ಜೊತೆ ತೆರೆ ಹಂಚಿಕೊಂಡಿದ್ದಾರೆ.