ರಶ್ಮಿಕಾ ಮಂದಣ್ಣ…! ಕೊಡಗಿನ ಕಿತ್ತಳೆಯಂತ ಬೆಡಗಿ ಸಿನಿಪಯಣದಲ್ಲಿ ಉತ್ತುಂಗಕ್ಕೇರಿದ್ದು ಸದ್ಯ ಬಾಲಿವುಡ್ ಅಂಗಳದಲ್ಲಿದ್ದಾರೆ. ಆದರೂ ಈ ಬೆಡಗಿಗೆ ಇನ್ನೂ ಭಯ ಹೋಗಿಲ್ಲವಂತೆ.

ಇಷ್ಟಕ್ಕೂ ಸ್ಟಾರ್ ಆಕ್ಟ್ರೆಸ್ ಅನ್ನಿಸಿಕೊಂಡಿರೋ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ಗಡಿ ದಾಟಿ ಈಗಾಗಲೇ ತೆಲುಗು, ತಮಿಳಿನಲ್ಲಿ ಸೈ ಎನ್ನಿಸಿಕೊಂಡು ಬಾಲಿವುಡ್ ಗೂ ಎಂಟ್ರಿ ಕೊಟ್ಟಾಗಿದೆ.

ಇಷ್ಟೆಲ್ಲ ಸಾಧನೆ ಮಾಡಿ ಬಹುಭಾಷಾ ನಟಿ ಎನ್ನಿಸಿಕೊಂಡಿರೋ ರಶ್ಮಿಕಾಗೆ ಯಾವ ಭಯ ಎಂದ್ರಾ…? ರಶ್ಮಿಕಾ ಹೆದರೋದು ಮನುಷ್ಯರು ಅಥವಾ ವಸ್ತುವಿಗಲ್ಲವಂತೆ.ಬದಲಾಗಿ ಹಲ್ಲಿಗೆ ಹೆದರುತ್ತಾರಂತೆ.

ಈ ವಿಚಾರವನ್ನು ಸ್ವತಃ ರಶ್ಮಿಕಾ ಮಂದಣ್ಣ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಗಾಗ ಅಭಿಮಾನಿಗಳ ಜೊತೆ ಪ್ರಶ್ನೋತ್ತರಕ್ಕೆ ಮುಂದಾಗೋ ರಶ್ಮಿಕಾ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡ್ತಾರೆ.

ಇಂತಹುದೇ ಕ್ವಶ್ಚನಿಂಗ್ ವೇಳೆ ಅಭಿಮಾನಿಯೊಬ್ಬರು ನೀವು ಯಾವುದಕ್ಕೆ ತುಂಬಾ ಭಯ ಪಡ್ತಿರಾ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ರಶ್ಮಿಕಾ, ನಾನು ತುಂಬ ಭಯಪಡಬೇಕಾದ ಘಟನೆಗಳೆಲ್ಲ ನನ್ನಜೀವನದಲ್ಲಿ ಈಗಾಗಲೇ ನಡೆದು ಹೋಗಿದೆ. ಈಗ ನಾನು ಹಲ್ಲಿ ಮತ್ತು ಕತ್ತಲಿನಿಂದ ಕೂಡಿದ ಆಳವಾದ ಸ್ಥಳ ನೋಡಲು ಭಯಪಡುತ್ತೇನೆ ಎಂದಿದ್ದಾರೆ.

ರಶ್ಮಿಕಾ ಈ ಉತ್ತರಕ್ಕೆ ಹಲವರು ನಗುವ ಇಮೋಜಿ ಬಳಸಿದ್ರೆ ಇನ್ನು ಕೆಲವರು ಕಾಲೆಳೆದಿದ್ದಾರೆ. ಸದ್ಯ ತೆಲುಗಿನ ಪುಷ್ಪಾದಲ್ಲಿ ನಟಿಸುತ್ತಿರುವ ರಶ್ಮಿಕಾ ಅದಾದ ಬಳಿಕ ಬಾಲಿವುಡ್ ನಲ್ಲಿ ಬಿಗ್ ಬೀ ಗೆ ಮಗಳಾಗಿ ಬಣ್ಣ ಹಚ್ಚಲಿದ್ದಾರೆ.