59 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಹ್ಯಾಟ್ರಿಕ್ ಹಿರೋ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೊರೋನಾ ಹಿನ್ನೆಲೆಯಲ್ಲಿ ಅದ್ದೂರಿ ಬರ್ತಡೇ ಸೆಲಿಬ್ರೇಶನ್ ಗೆ ಬ್ರೇಕ್ ಹಾಕಿದ್ದಾರೆ. ಆದರೆ ಭಜರಂಗಿ 2 ಚಿತ್ರತಂಡ ಮಾತ್ರ ಶಿವಣ್ಣ ಬರ್ತಡೇಗೆ ಭರ್ಜರಿ ಗಿಫ್ಟ್ ನೀಡಿದ್ದು, ಸ್ಪೆಶಲ್ ಟೀಸರ್ ರಿಲೀಸ್ ಮಾಡಿ ಗೌರವಿಸಿದೆ.

ಸ್ಯಾಂಡಲ್ ವುಡ್ ನ ಚಿರಯುವಕ ಎಂದೇ ಕರೆಯಿಸಿಕೊಳ್ಳೋ ಶಿವರಾಜ್ ಕುಮಾರ್ ಬರ್ತಡೆಯನ್ನು ಪ್ರತಿವರ್ಷವೂ ಅಭಿಮಾನಿಗಳು ಅದ್ದೂರಿಯಾಗಿ ಸೆಲಿಬ್ರೆಟ್ ಮಾಡುತ್ತಾರೆ. ಆದರೆ ಈ ಭಾರಿ ಸೆಲಿಬ್ರೇಶನ್ ಗೆ ಶಿವಣ್ಣ ಕಡಿವಾಣ ಹಾಕಿದ್ದಾರೆ.

ಆದರೆ ಸದ್ಯ ಶಿವಣ್ಣ ನಟಿಸುತ್ತಿರುವ ಭಜರಂಗಿ2 ಸಿನಿಮಾತಂಡ ಶಿವಣ್ಣ ಬರ್ತಡೇಗಾಗಿ ಸ್ಪೆಶಲ್ ಟೀಸರ್ ರಿಲೀಸ್ ಮಾಡಿದೆ. ಟೀಸರ್ ರಿಲೀಸ್ ಆದ ಒಂದೇ ಗಂಟೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

ಎ.ಹರ್ಷ ನಿರ್ದೇಶಿಸುತ್ತಿರುವ ಭಜರಂಗಿ-2 ದಲ್ಲಿ ಭಾವನಾ ಮೆನನ್ ಶಿವಣ್ಣನಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜಯಣ್ಣ ಹಾಗೂ ಭೋಗೇಂದ್ರ ಸಿನಿಮಾ ನಿರ್ಮಿಸುತ್ತಿದ್ದು, ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ.

ರಿಲೀಸ್ ಆಗಿರೋ ಸ್ಪೆಶಲ್ ಟೀಸರ್ ನಲ್ಲಿ ಶಿವಣ್ಣನ ಸ್ಪೆಶಲ್ ಲುಕ್ ಹಾಗೂ ಖಡಕ್ ಖದರ್ ರಿವೀಲ್ ಆಗಿದ್ದು, ಟೀಸರ್ ಟ್ರೆಂಡ್ ಆಗಿದೆ. ಶಿವರಾಜ್ ಕುಮಾರ್ ಅಭಿಮಾನಿಗಳು ಟೀಸರ್ ಶೇರ್ ಮಾಡಿಕೊಂಡು ಸೆಲಿಬ್ರೆಟ್ ಮಾಡ್ತಿದ್ದಾರೆ.