ಮಂಗಳವಾರ, ಏಪ್ರಿಲ್ 29, 2025
HomeBreakingಹೀಗ್ಯಾಕಾದ್ರು ಶ್ರೀಗರ ಕಿಟ್ಟಿ…! ಪೋಟೋ ನೋಡಿದ ಅಭಿಮಾನಿಗಳಿಗೆ ಶಾಕ್….!!

ಹೀಗ್ಯಾಕಾದ್ರು ಶ್ರೀಗರ ಕಿಟ್ಟಿ…! ಪೋಟೋ ನೋಡಿದ ಅಭಿಮಾನಿಗಳಿಗೆ ಶಾಕ್….!!

- Advertisement -


ಹುಡುಗರು ಸಿನಿಮಾದಲ್ಲಿ ಸದಭಿರುಚಿಯ ಪಾತ್ರದಲ್ಲಿ ಕಾಣಿಸಿಕೊಂಡ ಶ್ರೀನಗರ ಕಿಟ್ಟಿ ಹೊಸ ಅವತಾರ ನೋಡಿ ಅಭಿಮಾನಿಗಳು ಕಂಗಾಲಾಗಿದ್ದಾರೆ. ಸೌಮ್ಯ ಸ್ವಭಾವದ ಶ್ರೀನಗರ ಕಿಟ್ಟಿ ಇದ್ಯಾಕೆ ಹಿಂಗಾದ್ರು ಅಂತ ಅಚ್ಚರಿ ಪಡ್ತಿದ್ದಾರೆ. ಇಷ್ಟಕ್ಕೂ ಅಭಿಮಾನಿಗಳಿಗೆ ಶಾಕ್ ಆಗ್ತಿರೋದಿಕ್ಕೆ ಕಾರಣ ರಿವೀಲ್ ಆಗಿರೋ ಕಿಟ್ಟಿ ಸಿನಿಮಾದ ಹೊಸ ಲುಕ್ ಪೋಸ್ಟರ್.

ರಕ್ತಸಿಕ್ತವಾದ ಕಾಸ್ಟ್ಯೂಮ್ ಹಾಗೂ ರೌದ್ರಾವತಾರದ ಮುಖಭಾವದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ.  ನಟೋರಿಯಸ್ ಲುಕ್ ಹಾಗೂ ಕೊಡಲಿಯ ಜೊತೆ ನಿಂತ ಶ್ರೀನಗರ ಕಿಟ್ಟಿಯ ಹೊಸ ಪೋಸ್ ನೋಡಿದರೇ ಭಯ ಹುಟ್ಟಿಸುವಂತಿದೆ. ಗೌಳಿ ಎಂಬ ಹೊಸ ಚಿತ್ರಕ್ಕಾಗಿ ಶ್ರೀನಗರ ಕಿಟ್ಟಿ ಇಂತಹದೊಂದು ಕ್ರೂಯಲ್ ಲುಕ್ ತೋರಿದ್ದಾರಂತೆ.

ಸಿಲಿಕಾನ ಸಿಟಿ ಸಿನಿಮಾದ ಬಳಿಕ ಬಹುತೇಕ ಸ್ಯಾಂಡಲ್ ವುಡ್ ನಿಂದ ಮಾಯವಾಗಿದ್ದ ಶ್ರೀನಗರ ಕಿಟ್ಟಿ ಸಧ್ಯ ಅವತಾರ ಪುರುಷ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದರ ಬೆನ್ನಲ್ಲೇ,  ಗೌಳಿ ಎಂಬ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸ್ತಿರೋ ಸುದ್ದಿ ಜೊತೆ  ಹಾರರ್ ಪೋಸ್ಟರ್ ಜೊತೆ ಹಾಜರಾಗಿದ್ದಾರೆ.

ಸೂರಾ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಈ ಸಿನಿಮಾ ಸದ್ಯ ಫ್ರಿಪ್ರೊಡಕ್ಷನ್ ಹಂತದಲ್ಲಿದ್ದು, ಇನ್ನೊಂದು ತಿಂಗಳಿನಲ್ಲಿ ಶೂಟಿಂಗ್ ಆರಂಭಿಸಲಿದೆ. ಶಷಾಂಕ್ ಶೇಷಗಿರಿ ಸಂಗೀತ ಇರುವ  ಈ ಸಿನಿಮಾದಲ್ಲಿ ಪ್ರಜ್ವಲ್ ಗೌಡ ಛಾಯಾಗ್ರಹಣವಿದ್ದು ಉಳಿದ ನಟ-ನಟಿಯರ ಆಯ್ಕೆ ನಡೆದಿದೆ.

ಪೋಸ್ಟರ್ ನೋಡಿದ್ರೆ  ಇದುವರೆಗೂ ನಟಿಸದ ಪಾತ್ರವೊಂದಕ್ಕೆ  ಕಿಟ್ಟಿ ಬಣ್ಣ ಹಚ್ಚುತ್ತಿದ್ದಾರೆ ಎಂಬುದು ಖಚಿತವಾಗುತ್ತಿದೆ. ಆದರೆ ಇದು ಹಾರರ್ ಚಿತ್ರವೋ ಅಥವಾ ರೌಡಿಸಂ ಕಥೆಯೋ ಎಂಬ ಗುಟ್ಟನ್ನು ಇನ್ನು ಸಿನಿಮಾ ತಂಡ ಬಿಟ್ಟುಕೊಟ್ಟಿಲ್ಲ. ಸಧ್ಯ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಕಿಟ್ಟಿ ಹೊಸ ಪೋಸ್ಟರ್ ಗೆ ಅಭಿಮಾನಿಗಳಂತೂ ಸಖತ್ ಖುಷಿಯಾಗಿದ್ದಾರೆ.

RELATED ARTICLES

Most Popular