ಸಂಸ್ಥೆಯ ಸಿಬ್ಬಂದಿಗೆ ಉಚಿತ ಕೊರೋನಾ ವ್ಯಾಕ್ಸಿನೇಶನ್….! ಮೆಚ್ಚುಗೆಗೆ ಪಾತ್ರವಾಯ್ತು ನಿರ್ಮಾಪಕನ ನಿರ್ಧಾರ…!!

ಹೊಂಬಾಳೆ ಫಿಲ್ಮ್ಸ್ ಸಧ್ಯ ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಚಿತ್ರರಂಗದಲ್ಲೂ ಸದ್ದು ಮಾಡ್ತಿರೋ ಪ್ರೊಡ್ಯೂಸರ್ ಸಂಸ್ಥೆ. ಕೆಜಿಎಫ್-2 ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾದಿಂದ ಸದ್ದು ಮಾಡಿದ ಹೊಂಬಾಳೆ ಫಿಲ್ಸಂ ಈಗ ತನ್ನ ಮಾದರಿ ಕಾರ್ಯದಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಕೊರೋನಾ ಸಂಕಷ್ಟದಲ್ಲಿ ತನ್ನ ಸಿಬ್ಬಂದಿಯ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೊಂಬಾಳೆ ಫಿಲ್ಮಂ ತನ್ನ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಉಚಿತವಾಗಿ ಕೊರೋನಾ ಲಸಿಕೆ ಕೊಡಿಸಲು ಮುಂದಾಗಿದೆ.

ಈ ಬಗ್ಗೆ ಹೊಂಬಾಳೆ ಫಿಲ್ಸಂನ  ವಿಜಯ್ ಕಿರಂಗದೂರು  ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಸರ್ಕಾರದ ಮಾರ್ಗದರ್ಶನ ಹಾಗೂ ಸುತ್ತೋಲೆಯಂತೆ ಸಿಬ್ಬಂದಿಗೆ ಕೊರೋನಾ ಲಸಿಕೆ ಕೊಡಿಸುವುದಾಗಿ ಹೇಳಿದ್ದಾರೆ.

ಕೊರೋನಾ ಮುಕ್ತವಾಗಲು ಲಸಿಕೆ ಬಹಳ ಮುಖ್ಯ. ನೀವೆಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ವಿಜಯ್ ಮನವಿ ಮಾಡಿದ್ದಾರೆ. ಇನ್ನು ಸಿಬ್ಬಂದಿಗಳಿಗೆ ಉಚಿತವಾಗಿ ಲಸಿಕೆ ಹಾಕಿಸುವ ವಿಜಯ್ ಕಿರಂಗದೂರು ನಿರ್ಧಾರಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದ್ದು, ಜನರು ಸಿಬ್ಬಂದಿ ಬಗ್ಗೆ ಕಾಳಜಿ ವಹಿಸುವವರು ಅಪರೂಪ ಎಂದು ಕೊಂಡಾಡುತ್ತಿದ್ದಾರೆ.

ಸಧ್ಯ ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲೆಡೆ ಅತ್ಯಂತ ಪ್ರಭಾವಿ ನಿರ್ಮಾಣ ಸಂಸ್ಥೆ ಎನ್ನಿಸಿರುವ ಹೊಂಬಾಳೆ ಫಿಲ್ಸ್ಮಂ ಸದ್ಯ ಯುವರತ್ನ, ಕೆಜಿಎಫ್-2 ,ಪ್ರಭಾಸ್ ನಟನೆಯ ಸಲಾರ್  ನಿರ್ಮಿಸಿದ್ದು, ಹಿಟ್ ಮೂವಿಸ್ ನೀಡುವ ಸಂಭ್ರಮದಲ್ಲಿದೆ.

Comments are closed.