ಮಂಗಳವಾರ, ಜೂನ್ 17, 2025
HomeBreakingಸ್ಯಾಂಡಲವುಡ್ ಗೆ ಮರಳಿದ ಸಿಂಪಲ್ ಚೆಲುವೆ....! ಸಂತೂರ್ ಮಮ್ಮಿ ಶ್ವೇತಾ ಸೆಕೆಂಡ್ ಇನ್ನಿಂಗ್ಸ್...!!

ಸ್ಯಾಂಡಲವುಡ್ ಗೆ ಮರಳಿದ ಸಿಂಪಲ್ ಚೆಲುವೆ….! ಸಂತೂರ್ ಮಮ್ಮಿ ಶ್ವೇತಾ ಸೆಕೆಂಡ್ ಇನ್ನಿಂಗ್ಸ್…!!

- Advertisement -

ಶ್ವೇತಾ ಶ್ರೀವಾಸ್ತವ್…..ಸ್ಯಾಂಡಲ್ ವುಡ್ ನಲ್ಲಿ ಸಿಂಪಲಾಗ ಒಂದ ಲವ್ ಸ್ಟೋರಿ ಮೂಲಕ ನೆಲೆಕಂಡುಕೊಂಡ ಸಹಜ ಸುಂದರಿ.

Alvas1

ಟಿ.ಎನ್.ಸೀತಾರಾಮಾ ಮನ್ವಂತರ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಶ್ವೇತಾ ಶ್ರೀವಾಸ್ತವ್ ಗೆ ಹಿರಿತೆರೆಯಲ್ಲಿ ಹೆಸರು ತಂದುಕೊಟ್ಟಿದ್ದು ಸಿಂಪಲ್ಲಾಗ ಒಂದ ಲವ್ ಸ್ಟೋರಿ ಸಿನಿಮಾ.

Shwetha 8

ಬೇಡಿಕೆಯಲ್ಲಿದ್ದಾಗಲೇ ಮದುವೆ,ಮಗು ಎಂದು ತೆರೆಮರೆಗೆ ಸರಿದ ಶ್ವೇತಾ ಶ್ರೀವಾಸ್ತವ್ ತಮ್ಮ ಕ್ಯೂಟ್ ಪುತ್ರಿಯ ಜೊತೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇದ್ದರು.

Shwetha 1

ಪುಟ್ಟ ಮಗುವಿನ ತುಂಟಾಟದಿಂದ ಆರಂಭಿಸಿ ಆಕೆಯ ಎಲ್ಲ ಆಕ್ಟಿವಿಟಿಸ್ ಗಳನ್ನು ಪೋಟೋ, ವಿಡಿಯೋ ದ ಮೂಲಕ ಅಭಿಮಾನಿಗಳಿಗೆ ನೀಡ್ತಿದ್ದ ಶ್ವೇತಾ ಮಗಳ ಜೊತೆ ಹಲವಾರು ಪೋಟೋಶೂಟ್ ಗಳಲ್ಲೂ ಮಿಂಚಿದ್ದರು.

Shwetha 2 1

ನವರಾತ್ರಿ ವೇಳೆ ಮಗಳೊಂದಿಗೆ ಶಾರದೆ ಗೆಟಪ್ ನಲ್ಲಿ ಪೋಟೋ ತೆಗೆಸಿಕೊಂಡು ಎಲ್ಲರ ಗಮನ ಸೆಳೆದಿದ್ದ ಶ್ವೇತಾ ದೀಪಾವಳಿ ವೇಳೆಗೆ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ.

75644386

ಹೌದು ಶ್ವೇತಾ ಸಿನಿಕೆರಿಯರ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರಂತೆ. ಈ ವಿಚಾರವನ್ನು ಮಾಧ್ಯಮದ ಜೊತೆ ಹಂಚಿಕೊಂಡಿರುವ ಶ್ವೇತಾ ಒಟ್ಟೊಟ್ಟಿಗೆ ನಾಲ್ಕು ಸಿನಿಮಾಗಳ ಜೊತೆ ತೆರೆಗೆ ಬರ್ತೀರೋದಾಗಿ ಹೇಳಿದ್ದಾರೆ.

Mlk

ಮೂರು ಸಿನಿಮಾಗಳಲ್ಲಿ ನಟಿಸೋದು ಆಫೀಶಿಯಲ್ಲಿ ಕನ್ಪರ್ಮ್ ಆಗಿದ್ದು ಇನ್ನೊಂದು ಸಿನಿಮಾ ಕನ್ಪರ್ಮ್ ಆಗಬೇಕಿದೆಯಂತೆ.ಆರಂಭದಲ್ಲೂ ಸಿನಿಮಾ ಆಯ್ಕೆ ಮಾಡಿಕೊಳ್ಳೋದ್ರಲ್ಲಿ ತುಂಬ ಚ್ಯೂಸಿಯಾಗಿರೋ ಶ್ವೇತಾ, ಈಗಲೂ ತುಂಬಾ ಚ್ಯೂಸಿಯಾಗಿ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರಂತೆ.

Shwetha Srivatsavhd Wallpapers Desktop Background Android Iphone 1080p 4k R8usl 811x1014 1

ನಾಲ್ಕು ಸಿನಿಮಾಗಳು ಢಿಪರೆಂಟಾಗಿದ್ದು ಒಂದು ಹಳೆ ಕನ್ನಡ ಸಿನಿಮಾಗಳ ಕತೆ, ಇನ್ನೊಂದು ಅಪ್ಪಟ ಕಮರ್ಷಿಯಲ್ ಸಿನಿಮಾಕ್ಕೆ ಶ್ವೇತಾ ಸೈ ಎಂದಿದ್ದಾರಂತೆ.ಮಗಳಿಗಾಗಿ ಸಿನಿಮಾ ಬಿಟ್ಟಿದ್ದ ಶ್ವೇತಾ ಈಗ ಮತ್ತೆ ಮಗಳಜೊತೆಗೆ ಕೆರಿಯರ್ ಆರಂಭಿಸಲು ನಿರ್ಧರಿಸಿದ್ದಾರಂತೆ. ಅಂತೂ ೨೦೨೧ ರ ವೇಳೆಗೆ ಸಿಂಪಲಾಗ ಒಂದ ಲವ್ ಸ್ಟೋರಿ ಬೆಡಗಿ ಹೊಸ ಅವತಾರದಲ್ಲಿ ಬರೋದು ಫಿಕ್ಸ್ ಆಗಿದ್ದು, ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.

RELATED ARTICLES

Most Popular