ಮಂಗಳವಾರ, ಏಪ್ರಿಲ್ 29, 2025
HomeBreakingDarshan: ಡಿ-ಬಾಸ್ ಹೆಸರಿನಲ್ಲಿ ಸ್ಥಾಪನೆಯಾಯ್ತು ಶಿವಲಿಂಗ….! ವೈರಲ್ ಆಯ್ತು ವಿಡಿಯೋ…!!

Darshan: ಡಿ-ಬಾಸ್ ಹೆಸರಿನಲ್ಲಿ ಸ್ಥಾಪನೆಯಾಯ್ತು ಶಿವಲಿಂಗ….! ವೈರಲ್ ಆಯ್ತು ವಿಡಿಯೋ…!!

- Advertisement -

ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಪ್ರತಿ ಊರಲ್ಲೂ ದರ್ಶನ್ ಅಭಿಮಾನಿಬಳಗ ಕಟ್ಟಿರೋ ಫ್ಯಾನ್ಸ್ ಡಿಬಾಸ್ ಗಾಗಿ ಸದಾ ತುಡಿಯುತ್ತಿರುತ್ತಾರೆ. ಇದೀಗ ದರ್ಶನ್ ಅಭಿಮಾನಿ ಕುಟುಂಬವೊಂದು ಇನ್ನೊಂದು ಹೆಜ್ಜೆ ಮುಂದೇ ಹೋಗಿದ್ದು ದರ್ಶನ್ ಹೆಸರಿನಲ್ಲಿ ಶಿವಲಿಂಗ ಸ್ಥಾಪಿಸಿ ಗಮನ ಸೆಳೆದಿದೆ.

ಡಿಬಾಸ್ ಫ್ಯಾನ್ಸ್ ಗ್ರೂಪ್ ಗುಬ್ಬಿ ಟ್ವೀಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ದರ್ಶನ ಹೆಸರಿನಲ್ಲಿ ಶಿವಲಿಂಗ ಸ್ಥಾಪಿಸಿ ಪೂಜಿಸುತ್ತಿರುವ ದೃಶ್ಯವಿದೆ.

ಈ ವಿಡಿಯೋ ಸಖತ್ ವೈರಲ್ ಆಗಿದೆ. ಕೋಲಾರದ ಕೋಟಿಲಿಂಗೇಶ್ವರ್ ದೇವಾಲಯದಲ್ಲಿ ದರ್ಶನ್ ಹೆಸರಿನಲ್ಲಿ ಶಿವಲಿಂಗ ಸ್ಥಾಪಿಸಲಾಗಿದ್ದು, ಅಭಿಮಾನಿ ಕುಟುಂಬ ಪೂಜೆ ಸಲ್ಲಿಸಿದೆ.

ಈಗಾಗಲೇ ಅದೇಷ್ಟೋ ಡಿ ಬಾಸ್ ಅಭಿಮಾನಿಗಳು ದರ್ಶನ್ ಪೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದು, ಇನ್ನು ಹಲವರು ಡಿ ಬಾಸ್ ಹೆಸರಿನಲ್ಲಿ ದಾನ ಧರ್ಮ ಮಾಡುತ್ತಾರೆ.

‘ಕೆಲದಿನಗಳ ಹಿಂದೆ ಪ್ರಾಣಿಗಳನ್ನು ದತ್ತು ಪಡೆಯಿರಿ ಎಂದು ಡಿಬಾಸ್ ಕರೆಕೊಟ್ಟಿದ್ದಕ್ಕೆ ಲಕ್ಷಾಂತರ ಜನರು ಕರ್ನಾಟಕದ ವಿವಿಧ ಮೃಗಾಲಯದಿಂದ ಪ್ರಾಣಿ ದತ್ತು ಪಡೆದು ದರ್ಶನ ಕರೆಗೆ ಸ್ಪಂದಿಸಿದ್ದರು.

RELATED ARTICLES

Most Popular