ಟೀ ಕುಡಿಯಲು ಮನೆಗೆ ಕರೆದ : ಪತ್ನಿಯ ಸ್ನೇಹಿತೆಯನ್ನೇ ಅತ್ಯಾಚಾರವೆಸಗಿದ

ಮೀರತ್‌ : ವಾಕಿಂಗ್‌ ಮಾಡುತ್ತಿದ್ದ ತನ್ನ ಪತ್ನಿಯ ಸ್ನೇಹಿತೆಯನ್ನು ಟೀ ಕುಡಿಯಲು ಮನೆಗೆ ಕರೆದ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ ಮೇಲ್‌ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ ನಲ್ಲಿ ನಡೆದಿದೆ.

ಆಕೆ ತನ್ನ ಪಾಡಿಗೆ ತಾನು ವಾಕಿಂಗ್‌ ಮಾಡುತ್ತಿದ್ದಳು. ಈ ವೇಳೆಯಲ್ಲಿ ತನ್ನ ಸ್ನೇಹಿತೆಯ ಮನೆಯ ಮುಂಭಾಗದಲ್ಲಿ ಆಕೆಯ ಗಂಡ ನಿಂತಿದ್ದ. ಆಕೆಯನ್ನು ನೋಡಿ ಮಾತನಾಡಿಸಿ, ಮನೆಗೆ ಬಂದು ಟೀ ಕುಡಿದು ಹೋಗಿ ಅಂತಾ ಹೇಳಿದ್ದಾನೆ. ಆದ್ರೆ ಮನೆಯಲ್ಲಿ ಆಕೆಯ ಸ್ನೇಹಿತೆ ಇರಲಿಲ್ಲ. ಮನೆಗೆ ಹೋದ ಆಕೆಯ ಮೇಲೆ ಸ್ನೇಹಿತೆಯ ಪತಿ ಅತ್ಯಾಚಾರವೆಸಗಿದ್ದಾನೆ ಎಂತಾ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಆರೋಪಿ ಮಾದಕ ದ್ರವ್ಯ ಸೇವಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ತನ್ನ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ ಪದೇ ಪದೇ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಮಾವಾನಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಮೀರತ್ ಎಸ್‌ಎಸ್‌ಪಿ ಪ್ರಭಾಕರ್ ಚೌಧರಿ ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.