ಬುಧವಾರ, ಜೂನ್ 18, 2025
HomeBreakingಅಪ್ಪನೇ ಪೋಟೋಗ್ರಾಫರ್ ಪೋಸ್ ಕೊಡೋಕೆ ಕಷ್ಟವೇ…?! ಹಾಸ್ಯಮಯ ಕ್ಯಾಪ್ಸನ್ ಜೊತೆ ಮೇಘನಾ ಪೋಸ್ಟ್…!!

ಅಪ್ಪನೇ ಪೋಟೋಗ್ರಾಫರ್ ಪೋಸ್ ಕೊಡೋಕೆ ಕಷ್ಟವೇ…?! ಹಾಸ್ಯಮಯ ಕ್ಯಾಪ್ಸನ್ ಜೊತೆ ಮೇಘನಾ ಪೋಸ್ಟ್…!!

- Advertisement -

ಜ್ಯೂನಿಯರ್ ಚಿರು ಜೊತೆ ತಾಯ್ತನ ಖುಷಿಯಲ್ಲಿ ಬದುಕಿನ ಬಹುದೊಡ್ಡ ದುಃಖ‌ ಮರೆಯುತ್ತಿರುವ ನಟಿ ಮೇಘನಾ ರಾಜ್ ತಮ್ಮ ಬಾಲ್ಯದ ನೆನಪುಗಳನ್ನು ತಾಜಾಗೊಳಿಸಿಕೊಂಡು ಸಂಭ್ರಮಿಸಿದ್ದಾರೆ.

Meghana Sarja 4

ಮೇಘನಾರಾಜ್ ತಾಯ್ತನ ಸಂಭ್ರಮದಲ್ಲಿದ್ದು ಸದ್ಯ ತಮ್ಮ ಕೆರಿಯರ್ ನಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್ ಅಗಿರುವ ಮೇಘನಾ ರಾಜ್ ಸದಾ ತಮ್ಮ ಮತ್ತು ಚಿರು ಸರ್ಜಾ ಪೋಟೋ ಗಳನ್ನು ಹಂಚಿಕೊಳ್ಳುತ್ತಾರೆ.

Meghana Raj 1 1

ತಮ್ಮ ಹನಿಮೂನ್,ಧ್ರುವ್ ಸರ್ಜಾ ಮದುವೆ ಹೀಗೆ ಎಲ್ಲ ಸವಿನೆನಪುಗಳನ್ನು ಮೇಘನಾ ರಾಜ್ ರಿಕಾಲ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಈ ಭಾರಿ ಮೇಘನಾ ರಾಜ್ ತಮ್ಮ ಬಾಲ್ಯಕ್ಕೆ‌ಮರಳಿದ್ದಾರೆ. ಅಂದಾಜು ೮-೧೦ ವರ್ಷದವರಿದ್ದಾಗ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯ್ ಜೊತೆ ಕಾರ್ಯಕ್ರಮವೊಂದಕ್ಕೆ ತೆರಳುವಾಗ ತೆಗೆದ ಪೋಟೋವನ್ನು ಹಂಚಿಕೊಂಡಿದ್ದಾರೆ.

Meghanaraj 1

ಅಷ್ಟೇ ಅಲ್ಲ ಅದಕ್ಕೊಂದು ಕ್ಯಾಪ್ಸನ್ ನೀಡಿದ್ದಾರೆ. ನನ್ನ ತಂದೆಯೇ ಪೋಟೋಗ್ರಾಫರ್ ಆಗಿದ್ದಾಗ ನಾನು ಹೀಗೆಲ್ಲ ಪೋಟೋ ಪೋಸ್ ಕೊಟ್ಟಂತೆ ನಟಿಸುತ್ತಿದ್ದೆ ಹಾಗೂ ನಟಿಸಲು ಇಚ್ಛಿಸುತ್ತಿದ್ದೇ ಎಂದಿದ್ದಾರೆ.

ಇಷ್ಟೇ ಅಲ್ಲ ಕೆಲ ದಿನಗಳ ಹಿಂದೆಯಷ್ಟೇ ತಂದೆ ಸುಂದರ ರಾಜ್ ಮಗಳಿಗೆ ಮುತ್ತಿಡುವ ಪೋಟೋ ಹಂಚಿಕೊಂಡಿದ್ದ ಮೇಘನಾ ರಾಜ್, ಜಗತ್ತಿನಲ್ಲಿ ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು ಎಂದು ಬರೆದಿದ್ದಲ್ಲದೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.

ಸದಾಕಾಲ‌ ಕುಟುಂಬದ ಸವಿನೆನಪುಗಳನ್ನು ಹಂಚಿಕೊಳ್ಳುವ ಮೇಘನಾರಾಜ್ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿರೋದಿಕ್ಕೆ ಅಭಿಮಾನಿಗಳು ಭಾವುಕರಾಗಿದ್ದು ಮೇಘನಾಗೆ ಶುಭಹಾರೈಸಿದ್ದಾರೆ.

RELATED ARTICLES

Most Popular