ಸೋಮವಾರ, ಏಪ್ರಿಲ್ 28, 2025
HomeBreakingಬಾಲಿವುಡ್ ಗೆ ಸ್ಯಾಂಡಲ್ ವುಡ್ ಮ್ಯೂಸಿಕ್ ಡೈರೈಕ್ಟರ್…! ಬಿಟೌನ್ ಜರ್ನಿ ಆರಂಭಿಸಿದ ಚರಣ್ ರಾಜ್….!!

ಬಾಲಿವುಡ್ ಗೆ ಸ್ಯಾಂಡಲ್ ವುಡ್ ಮ್ಯೂಸಿಕ್ ಡೈರೈಕ್ಟರ್…! ಬಿಟೌನ್ ಜರ್ನಿ ಆರಂಭಿಸಿದ ಚರಣ್ ರಾಜ್….!!

- Advertisement -

ಹಿರೋಯಿನ್ ಗಳ ಬಳಿಕ ಈಗ ಸ್ಯಾಂಡಲ್ ವುಡ್ ನ ಮ್ಯೂಸಿಕ್ ಡೈರೈಕ್ಟರ್ ಬಿಟೌನ್ ಗೆ ಎಂಟ್ರಿ ಕೊಟ್ಟಿದ್ದು, ಬಾಲಿವುಡ್ ಚಿತ್ರಕ್ಕೆ ಕನ್ನಡದ ಸಂಗೀತ ನಿರ್ದೇಶಕರು ತಾಳ, ಸ್ವರ ಜೋಡಿಸಲಿದ್ದಾರೆ.

ಟಗರುನಂತಹ ಹಿಟ್ ಮೂವಿಗೆ ಸಂಗೀತ ನೀಡಿದ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಚರಣ್ ರಾಜ್, ಬಾಲಿವುಡ್ ನಲ್ಲಿ ಪ್ರತಿಭಾ ಪ್ರದರ್ಶನಕ್ಕೆ ಸಿದ್ಧ ವಾಗಿದ್ದು ಖುದ್ದು ಈ ಅವರೇ ಈ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ.

2014 ರಲ್ಲಿ ಕನ್ನಡದಲ್ಲಿ ಕೆರಿಯರ್ ಆರಂಭಿಸಿದ ಚರಣ ರಾಜ್ 6 ವರ್ಷದಲ್ಲೇ ತಮ್ಮ ಪ್ರತಿಭೆಯಿಂದ ಬಾಲಿವುಡ್ ಸಿನಿಮಾಗೆ ಸಂಗೀತ ಸಂಯೋಜಿಸುವ ಅವಕಾಶ ಪಡೆದಿದ್ದಾರೆ.

ಮಲೆಯಾಳಂ ತಾಳಂ ಹಾಗೂ ಕನ್ನಡದ ಟಗರು ಸಿನಿಮಾಕ್ಕೆ ನೀಡಿದ ಸಂಗೀತ ಚರಣ್ ರಾಜ್ ಗೆ ಬ್ರೇಕ್ ನೀಡಿದ್ದು ಸದ್ಯ ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರಕ್ಕೂ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು ಹಾಡುಗಳು ಸಖತ್ ಸದ್ದು ಮಾಡ್ತಿವೆ.

ಬಾಲಿವುಡ್ ನ ಸಿನಿಮಾಕ್ಕೆ ಚರಣರಾಜ್ ಸಂಗೀತ ನಿರ್ದೇಶನ ಮಾಡೋದು ಖಚಿತವಾಗಿದ್ದು ಆದರೆ ಯಾವ ಚಿತ್ರಕ್ಕೆ ಎಂಬ ಬಗ್ಗೆ ಚರಣರಾಜ್ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಕನ್ನಡದಲ್ಲೂ ಕೈತುಂಬ ಅವಕಾಶ ಹೊಂದಿರೋ ಚರಣರಾಜ್ ಅಭಿಷೇಕ್ ಅಂಬರೀಶ್ ರ ಬ್ಯಾಡ್ ಮ್ಯಾನರ್ಸ್ ಹಾಗೂ ಡಾಲಿ ಧನಂಜಯರ ಹೆಡ್ ಬುಷ್ ಚಿತ್ರಕ್ಕೂ ಮ್ಯೂಸಿಕ್ ನೀಡಲಿದ್ದಾರೆ.

RELATED ARTICLES

Most Popular