ತೆಲುಗು ನಟ ವಿಜಯ್ ರಂಗರಾಜನ್ ಡಾ.ವಿಷ್ಣುವರ್ಧನ್ ವಿರುದ್ಧ ಅಸಹ್ಯಕರ ಕಮೆಂಟ್ ಮಾಡಿದ ಸಂಗತಿ ಇದೀಗ ಸ್ಯಾಂಡಲ್ ವುಡ್ ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯ್ ರಂಗರಾಜನ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್, ಈ ವಿಚಾರದ ಬಗ್ಗೆ ಖಡಕ್ ಆಗಿ ಮಾತನಾಡಿ ವಿಡಿಯೋ ರಿಲೀಸ್ ಮಾಡಿದ್ದಾರೆ.
ವಿಷ್ಣುವರ್ಧನ್ ಅವರು ಬದುಕಿದ್ದಾಗ ಅವರ ಬಗ್ಗೆ ಮಾತನಾಡಿದ್ದರೇ, ಅದೊಂದು ಗಂಡಸ್ಥನ ಇರೋ ಕೆಲಸವಾಗ್ತಿತ್ತು. ಈಗ ಅವರಿಲ್ಲದೇ ಇದ್ದಾಗ ಅವರ ಬಗ್ಗೆ ಹೀಗೆ ಕೆಟ್ಟದಾಗಿ ಟೀಕೆ ಮಾಡಿರೋದು ಕಲಾವಿದನಾಗಿ ನಿಮಗೆ ಶೋಭೆ ತರೋ ವಿಚಾರವಲ್ಲ.

ವಿಷ್ಣುವರ್ಧನ್ ಅವರು ಬದುಕಿಲ್ಲದೇ ಇರಬಹುದು ಆದರೇ ಕೊಟ್ಯಾಂತರ ಅಭಿಮಾನಿಗಳಿದ್ದಾರೆ. ನಮ್ಮಂಥ ಸಾವಿರಾರು ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಇಲ್ಯಾರು ಬಳೆ ತೊಟ್ಟು ಕೂತಿಲ್ಲ. ತಕ್ಷಣವೇ ಕ್ಷಮೆಯಾಚಿಸಬೇಕೆಂದು ಸುದೀಪ್ ಆಗ್ರಹಿಸಿದ್ದಾರೆ.

ಎಲ್ಲ ಸಿನಿಮಾ ಇಂಡಸ್ಟ್ರಿಯೂ ಒಂದೇ. ಎಲ್ಲರ ಗೌರವವೂ ಒಂದೇ ಎಂದು ಬದುಕುತ್ತಿರುವ ಚಿತ್ರರಂಗ ಇದು. ಆದರೆ ನೀವು ಆಡಿದ ಮಾತನ್ನು,ಮಾಡಿದ ಅವಮಾನವನ್ನು ನಿಮ್ಮ ಇಂಡಸ್ಡ್ರಿಯವರೇ ಒಪ್ಪೋದಿಲ್ಲ. ನಮ್ಮ ಹಿರಿಯರ ಬಗ್ಗೆ ಹೀಗೆ ಮಾತಾಡನಾಡಿದ್ದು ಖಂಡಿತ ತಪ್ಪು. ತಕ್ಷಣ ಕ್ಷಮೆಯಾಚಿಸಬೇಕೆಂದು ಸುದೀಪ್ ಆಗ್ರಹಿಸಿದ್ದಾರೆ.

ತೆಲುಗಿನ ಹಿರಿಯ ನಟ ವಿಜಯ್ ರಂಗರಾಜನ್ ಡಾ.ವಿಷ್ಣು ಬಗ್ಗೆ ಮಾತನಾಡುತ್ತ ವಿಷ್ಣು ಗೆ ಹೆಣ್ಮಕ್ಕಳ ವೀಕ್ನೇಸ್ ಇತ್ತು ಎಂದು ಲಘುವಾಗಿ ಮಾತನಾಡಿದ್ದು ಎಲ್ಲೆಡೆ ವಿಷ್ಣು ಅಭಿಮಾನಿಗಳ ಹಾಗೂ ಸ್ಯಾಂಡಲವುಡ್ ನಟ-ನಟಿಯರ ಆಕ್ರೋಶಕ್ಕೆ ಕಾರಣವಾಗಿದೆ.ನಟ ಪುನೀತ್ ರಾಜಕುಮಾರ್ ಸೇರಿದಂತೆ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.