ಬಿಡುಗಡೆಗೂ ಮುನ್ನವೇ ಸುದ್ದಿಯಾಗ್ತಿದೆ ಕೆಜಿಎಫ್-2…! ಚಿತ್ರೀಕರಣ ಹೊತ್ತಲ್ಲೇ ಹೊರಬೀಳ್ತಿದೆ ಇಂಟ್ರಸ್ಟಿಂಗ್ ಸಂಗತಿ.‌‌..!!

ಕೆಜಿಎಫ್-೨. ಕನ್ನಡ ಚಿತ್ರರಂಗವೂ ಸೇರಿದಂತೆ ದೇಶದ ಸಿನಿ ಪ್ರೇಕ್ಷಕರು ಕಾತುರವಾಗಿ ಕಾಯ್ತಿರೋ ಸಿನಿಮಾ‌. ಸಧ್ಯ ಸಿನಿಮಾ ರಿಲೀಸ್ ಡೇಟ್ ಹೊರಬೀಳದಿದ್ದರೂ ಹಲವಾರು ಇಂಟ್ರಸ್ಟಿಂಗ್ ಸಂಗತಿಗಳು ಸದ್ದು‌ಮಾಡ್ತಿವೆ.

ಮೂಲಗಳ ಪ್ರಕಾರ ಶೂಟಿಂಗ ಅಂತಿಮ ಹಂತ ತಲುಪಿದ್ದು, ಅಧೀರಾ ಮತ್ತು ರಾಕಿಬಾಯ್ ಪೈಟಿಂಗ್ ಸೀನ್ ಶೂಟಿಂಗ್ ನಡೆದಿದ್ದು ಅನಾರೋಗ್ಯದ ನಡುವೆಯೂ ಸಂಜಯ್ ದತ್ ಡ್ಯೂಪ್ ಇಲ್ಲದೆ ಶೂಟಿಂಗ್ ನಡೆಸಲು ಮುಂದಾಗಿದ್ದಾರಂತೆ.

ಅಷ್ಟೇ ಅಲ್ಲ ಸಖತ್ತಾಗಿ ಫೈಟಿಂಗ್ ಸೀನ್ ಚಿತ್ರೀಕರಣ ನಡೆದಿದ್ದು, ಅನಾರೋಗ್ಯವನ್ನು ಮರೆತು ಸಂಜಯ್ ದತ್ ಕಲಾಪ್ರದರ್ಶನ ನೀಡ್ತಿದ್ದಾರಂತೆ.ಇನ್ನೊಂದೆಡೆ ಕೆಜಿಎಫ್ ನಲ್ಲಿ ಐದು ಹಾಡುಗಳ ಮೂಲಕ ಮೋಡಿ ಮಾಡಿದ್ದ ಚಿತ್ರತಂಡ, ಈ ಭಾರಿ ಸಿನಿಮಾಗೆ ಮೂರು ಹಾಡುಗಳನ್ನು ಬಳಸಿಕೊಂಡಿದೆಯಂತೆ.

ಎಂದಿನಂತೇ ರವಿ ಬಸ್ರೂರು ಸುಂದರ ಸಂಗೀತವಿದ್ದು, ಎರಡು ಹಾಡುಗಳ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಡಿಸೆಂಬರ್ ೧೬ ರಿಂದ ಮೂರನೇ ಹಾಡಿನ ಶೂಟಿಂಗ್ ಹೈದ್ರಾಬಾದ್ ನಲ್ಲಿ ನಡೆಯಲಿದೆಯಂತೆ.

ಒಂದು ಹಾಡಿಗೆ ಡ್ಯಾನ್ಸ್ ಮಾಷ್ಟರ ಹರ್ಷ ಕೋರಿಯೋಗ್ರಫಿ ಮಾಡಿದ್ದರೇ, ಇನ್ನೊಂದು ಹಾಡಿಗೆ ಮೋಹನ ನೃತ್ಯ ಸಂಯೋಜನೆ ಇದೆ. ಕೆಜಿಎಫ್ ನಲ್ಲಿ ಮೊದಲ ಹಾಡು ಮದರ್ ಸೆಂಟಿಮೆಂಟ್ ನಿಂದ ಹೈಲೈಟ್ ಆಗಿದ್ದು ಈ ಚಿತ್ರದಲ್ಲೂ ಅದರ ಛಾಯೆ ಇರಲಿದೆಯಂತೆ.

ವಿಲನ್ ಸಂಜಯ್ ದತ್ ಗಾಗಿ ಪ್ರಶಾಂತ್ ನೀಲ್ ಹಾಡೊಂದನ್ನು ಚಿತ್ರೀಕರಿಸಲು ನಿರ್ಧರಿಸಿದ್ದರಂತೆ. ಆದರೇ ದತ್ ಅನಾರೋಗ್ಯದ ಹಿನ್ನೆಲೆಯಲ್ಲಿ ಶೂಟಿಂಗ್ ವಿಳಂಬವಾಗಿರೋದರಿಂದ ಹಾಡನ್ನು ಸಧ್ಯ ಕೈಬಿಡಲು ನೀಲ್ ನಿರ್ಧರಿಸಿದ್ದಾರಂತೆ.ಒಟ್ಟಿನಲ್ಲಿ ರಿಲೀಸ್ ಗೂ‌ಮುನ್ನವೇ ಕೆಜಿಎಫ್-೨ ಸಖತ್ ಸದ್ದು ಮಾಡ್ತಿದ್ದು, ರಿಲೀಸ್ ಆದ ಬಳಿಕ ಥಿಯೇಟರ್‌ ‌ನಲ್ಲಿ ದಾಖಲೆ‌ ಮಾಡೋ ಭರವಸೆ ಮೂಡಿಸಿದೆ.

Comments are closed.