ಕನ್ನಡದ ಮೂಲಕ ನಟನೆ ಆರಂಭಿಸಿ ತೆಲುಗು ಹಾಗೂ ತಮಿಳಿನಲ್ಲಿ ನೆಲೆಕಂಡುಕೊಂಡ ನಟಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ.

ಕೊಡಗಿನ ಕುವರಿ ಕರ್ನಾಟಕದ ಕ್ರಶ್ ಅಂತಾನೇ ಫೇಮಸ್. ಕೆಲ ವರ್ಷಗಳಿಂದ ಕನ್ನಡದಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದರೂ ಸಧ್ಯ ಬಿಡುಗಡೆಗೆ ಸಿದ್ಧವಾಗಿರೋ ಪೊಗರು ಸಿನಿಮಾದಲ್ಲಿ ಧ್ರುವ್ ಸರ್ಜಾಗೆ ಜೋಡಿಯಾಗಿದ್ದಾರೆ.

ಪುಷ್ಪಾ ಸೇರಿದಂತೆ ತೆಲುಗು-ತಮಿಳಿನ ಖ್ಯಾತ ನಾಮಾಂಕಿತರ ಜೊತೆ ತೆರೆ ಹಂಚಿಕೊಳ್ಳೋತ್ತಿರೋ ರಶ್ಮಿಕಾ ಕರ್ನಾಟಕದ ಕ್ರಶ್ ಅಂತಾನೇ ಫೇಮಸ್.

ಆದರೇ ಸಧ್ಯ ರಶ್ಮಿಕಾ ಮಂದಣ್ಣ ಕೇವಲ ಕರ್ನಾಟಕದ ಕ್ರಶ್ ಮಾತ್ರವಲ್ಲ ನ್ಯಾಶನಲ್ ಕ್ರಶ್ ಅಂತೆ. ಈ ಮಾತನ್ನು ನಾವು ಹೇಳ್ತಿಲ್ಲ ಬದಲಾಗಿ ಇದು ಕೊಡಗಿನ ಕುವರಿ ರಶ್ಮಿಕಾ ಗೆ ಗೂಗಲ್ ನೀಡಿರೋ ಐಡೆಂಟಿಟಿ.

ಹೌದು ಗೂಗಲ್ ನಲ್ಲಿ ನ್ಯಾಶನಲ್ ಕ್ರಶ್ ಅಂತ ಟೈಪ್ ಮಾಡಿದ್ರೇ ತಕ್ಷಣ ಗುಳಿಕೆನ್ನೆಯ ರಶ್ಮಿಕಾ ಪೋಟೋ ಬರ್ತಿದೆ. ಹೀಗಾಗಿ ಕೇವಲ ಕರ್ನಾಟಕ ಮಾತ್ರವಲ್ಲ ದೇಶದಲ್ಲೂ ರಶ್ಮಿಕಾ ಅಭಿಮಾನಿ ವರ್ಗ ಬೆಳೆದಿದ್ದು ರಶ್ಮಿಕಾ ದಕ್ಷಿಣ ಭಾರತದ ಚಿತ್ರರಂಗದಾಟಿ ಭಾರತದಲ್ಲೇ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಈ ಹಿಂದೆ ಕಣ್ಸಣ್ಣೆ ಬೆಡಗು ಪ್ರಿಯಾ ವಾರಿಯರ್, ದಿಶಾ ಪಟಾನಿ ಈ ನ್ಯಾಷನಲ್ ಕ್ರಶ್ ಲಿಸ್ಟ್ ನಲ್ಲಿದ್ದರು. ಆದರೆ ಈಗ ಈ ಲಿಸ್ಟ್ ನಲ್ಲಿ ಕನ್ನಡತಿ ರಶ್ಮಿಕಾ ಸ್ಥಾನ ಪಡೆದುಕೊಂಡಿದ್ದಾರೆ.