ಕಾಲೇಜು ಆರಂಭಿಸಿ ಕೈಸುಟ್ಟುಕೊಂಡ ಸರ್ಕಾರ…! 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು..!!

ಬೆಂಗಳೂರು: ರಾಜ್ಯದಲ್ಲಿ ಕಾಲೇಜುಗಳು ಆರಂಭವಾಗ ಬೆನ್ನಲ್ಲೇ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಕಾಲೇಜುಗಳು ಕಾರ್ಯಾರಂಭ ಮಾಡಿದ ಎರಡೇ ದಿನದಲ್ಲಿ ಬರೋಬ್ಬರಿ ೭೨ ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದಲ್ಲದೇ ಕಾಲೇಜ್ ಒಂದರಲ್ಲಿ ಸೋಂಕು ಪೀಡಿತ ಪ್ರಾಧ್ಯಾಪಕಿಯೊಬ್ಬರು ಪಾಠ ಮಾಡಿ ಅವಾಂತರ ಸೃಷ್ಟಿಸಿದ್ದಾರೆ.

ಕೇಂದ್ರ ಸರ್ಕಾರದ ಅನ್ ಲಾಕ್ ೦.೫ ಕಾರ್ಯಸೂಚಿಯಂತೆ ರಾಜ್ಯ ಸರ್ಕಾರ  ನವೆಂಬರ್ ೧೭ ರಿಂದ ಮುಂಜಾಗ್ರತಾ ಕ್ರಮಗಳೊಂದಿಗೆ  ಪ್ರಾಯೋಗಿಕವಾಗಿ ರಾಜ್ಯದ ಕಾಲೇಜುಗಳ ಬಾಗಿಲು ತೆರೆದಿತ್ತು.ಇಂಜಿನಿಯರಿಂಗ್, ಪದವಿ,ಡಿಪ್ಲೋಮಾ ಕಾಲೇಜುಗಳನ್ನು ಆರಂಭಿಸಲಾಗಿತ್ತು. ಆದರೇ ವಿದ್ಯಾರ್ಥಿಗಳ ಕಾಲೇಜು ಹಾಜರಾತಿ ಕಡ್ಡಾಯ ಎನ್ನದ ಶಿಕ್ಷಣ ಇಲಾಖೆ ಮುನ್ನೆಚ್ಚರಿ ಜೊತೆ  ಪಾಲಕರ ಒಪ್ಪಿಗೆಯೂ ಮುಖ್ಯ ಎಂದಿತ್ತು.

ಆದರೇ ಯಾವುದರ ಭಯವಿತ್ತೋ ಅದೇ ಆಗಿದ್ದು, ಕಾಲೇಜುಗಳ ಬಾಗಿಲು ತೆರೆಯುತ್ತಿದ್ದಂತೆ ಕೆಲವೆಡೆ  ಮುನ್ನೆಚ್ಚರಿಕೆ ಕ್ರಮ ಹಾಗೂ ಸೋಷಿಯಲ್ ಡಿಸ್ಟನ್ಸ್ ಗಳನ್ನು ಕೈ ಬಿಟ್ಟ ಕಾರಣ ಕರ್ನಾಟಕದಾದ್ಯಂತ ಒಟ್ಟು 76 ವಿದ್ಯಾರ್ಥಿಗಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

ಇನ್ನು‌ ಹಲವು ವಿದ್ಯಾರ್ಥಿಗಳ ಕೊರೋನಾ ಟೆಸ್ಟ್ ರಿಸಲ್ಟ್ ಬರಬೇಕಿದೆ.  ಇನ್ನು ಹಲವೆಡೆ ಬಹು ತಿಂಗಳ ಬಳಿಕ ಕಾಲೇಜು ಓಫನ್ ಆಗಿರೋದರಿಂದ ಜೋಶ್ ನಲ್ಲಿರೋ ವಿದ್ಯಾರ್ಥಿಗಳು ಕೊರೋನಾ ಮುನ್ನೆಚ್ಚರಿಕೆ ಗಳನ್ನು ಗಾಳಿಗೆ ತೂರಿ ಮನಬಂದಂತೆ ಎಲ್ಲೆಡೆ ಮುಕ್ತವಾಗಿ ಓಡಾಡುತ್ತಿರೋದು ಕೂಡ ಕೊರೋನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.

ಉಡುಪಿ,ಮಂಗಳೂರು,ಬೆಂಗಳೂರು, ಹುಬ್ಬಳ್ಳಿ,ಧಾರವಾಡ ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು  ಆನ್ಲೈನ್ ಶಿಕ್ಷಣಕ್ಕೆ ಮನಸ್ಸು ಮಾಡಿದ್ಧು, ಕಾಲೇಜಿನತ್ತ ಮುಖಮಾಡಿಲ್ಲ.

ಇನ್ನು ಕೊರೋನಾ ಸೋಂಕಿನ ಆತಂಕದ ನಡುವೆಯೋ ಕಾಲೇಜ್ ಆರಂಭಿಸಿದ ಶಿಕ್ಷಣ ಸಂಸ್ಥೆ ಕ್ರಮಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೊರೋನ ಸಂಪೂರ್ಣ ನಿರ್ಮೂಲನೆಯಾಗುವ ವರೆಗೂ ಕಾಲೇಜು ಬಂದ್ ಮಾಡುವಂತೆ ಒತ್ತಾಯಿಸಿದ್ದಾರೆ.

Comments are closed.