ಸ್ಯಾಂಡಲ್ ವುಡ್ ನಲ್ಲಿ ಒಂದಾದ ಮೇಲೊಂದು ಐತಿಹಾಸಿಕ ಚಿತ್ರಗಳು ಸದ್ದುಮಾಡಲಾರಂಭಿಸಿದೆ. ಕ್ರೇಜಿಸ್ಟಾರ್ ಕನ್ನಡಿಗ ಚಿತ್ರದ ಬಳಿಕ ಇದೀಗ ರಿಯಲ್ ಸ್ಟಾರ್ ಉಪ್ಪಿ ಐತಿಹಾಸಿಕ ಚಿತ್ರದ ರಾಜನಾಗ್ತಾರೆ ಅನ್ನೋ ಸುದ್ದಿ ಗಾಂಧಿ ನಗರದ ಗಲ್ಲಿ ಯಿಂದ ಹೊರ ಬಿದ್ದಿದೆ.

ರಿಯಲ್ ಸ್ಟಾರ್ ಉಪೇಂದ್ರ ರಿಗಾಗಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ಮಿಸಿದ ನಿರ್ದೇಶಕ ನಾಗಣ್ಣ ಈ ಭಾರಿ ಉಪ್ಪಿಗಾಗಿ ಐತಿಹಾಸಿಕ ಕತೆಯೊಂದು ಆಯ್ಕೆಮಾಡಿದ್ದು, ಫ್ರೀಪ್ರೊಡಕ್ಷನ್ ಕಾರ್ಯಗಳು ಈಗಾಗಲೇ ಆರಂಭವಾಗಿದೆಯಂತೆ.

ಸಧ್ಯ ಕಬ್ಜ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರೋ ಉಪ್ಪಿ ಫ್ರೀ ಆಗ್ತಿದ್ದಂತೆ ಈ ಸಿನಿಮಾದ ಅಧಿಕೃತಘೋಷಣೆಯಾಗಲಿದೆ.ಭಾರವಿ ಅವರ ಪುಸ್ತಕ ಆಧರಿಸಿ ೧೫ ಶತಮಾನದ ರಾಜನೊಬ್ಬನ ಕತೆಯನ್ನು ಉಪ್ಪಿ ಮೂಲಕ ತೆರೆಗೆ ತರಲು ನಾಗಣ್ಣ ಸಿದ್ಧತೆ ನಡೆಸಿದ್ದು, ಕಠಾರಿವೀರ ಸುರಸುಂದರಾಂಗಿ ಬಳಿಕ ಉಪೇಂದ್ರ ಮತ್ತೊಮ್ಮೆ ಸಂಪೂರ್ಣ ರಾಜನ ಪಾತ್ರದಾರಿಯಾಗಿ ಪ್ರೇಕ್ಷಕರಿಗೆ ಮನರಂಜನೆ ನೀಡಲಿದ್ದಾರೆ.

ಉಪ್ಪಿಗಾಗಿ ಎ ಸಿನಿಮಾ ನಿರ್ಮಿಸಿದ ನಿರ್ಮಾಪಕರ ಪೈಕಿ ಜಗನ್ನಾಥ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಕನ್ನಡದ ಜೊತೆಗೆ ಸಿನಿಮಾ ತೆಲುಗು,ಹಿಂದಿ,ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ.

ಐತಿಹಾಸಿಕ ಸಿನಿಮಾ ಆಗಿದ್ದರೂ ಇಬ್ಬಿಬ್ಬರೂ ನಟಿ ಮಣಿಯರ ಜೊತೆ ಉಪ್ಪಿ ಡುಯ್ಯೆಟ್ ಹಾಡಲಿದ್ದು, ಉಪ್ಪಿಗೆ ಜೊತೆಯಾಗೋ ನಾಯಕಿಯರು ಯಾರು ಅನ್ನೋದು ಇನ್ನಷ್ಟೆ ಬಹಿರಂಗವಾಗಬೇಕಿದೆ. ಒಟ್ಟಿನಲ್ಲಿ ಕೊರೊನಾ ಬಳಿಕ ಚಂದನವನದಲ್ಲಿ ಐತಿಹಾಸಿಕ ಸಿನಿಮಾಗಳ ಭರಾಟೆ ಜೋರಾದಂತಿದೆ.