ಸಂಕ್ರಾಂತಿ ಬಳಿಕ ಮತ್ತೆ ಒಂಟಿ ಮನೆ ಆಟ ಶುರು…! ಬಿಗ್ ಬಾಸ್ ಸೀಸನ್ 8 ರ ಅತಿಥಿಗಳ್ಯಾರು ? ಇಲ್ಲಿದೆ ಡಿಟೇಲ್ಸ್…!!

ಕನ್ನಡ ರಿಯಾಲಿಟಿ ಶೋ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಬಿಗ್ ಬಾಸ್ ಕರೋನಾ ಎಫೆಕ್ಟ್ ನಿಂದ ವಿಳಂಬವಾಗಿದ್ದು ಸಂಕ್ರಾಂತಿ ಬಳಿಕ ಮತ್ತೆ ಒಂಟಿ ಮನೆ ಆಟ ಆರಂಭವಾಗೋ ಮುನ್ಸೂಚನೆ ಸಿಕ್ಕಿದೆ.

ಇದುವರೆಗಿನ 7 ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿ ಕೊಟ್ಟ ಸ್ಟಾರ್ ಆಂಕ್ಯರ್ ಸುದೀಪ್ 8 ನೇ ಆವೃತ್ತಿಯನ್ನು ನಡೆಸಿಕೊಡಲಿದ್ದು, ಈಗಾಗಲೇ ಈ ವಿಚಾರವನ್ನು ಚಾನೆಲ್ ನ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಅಕ್ಟೋಬರ ಮಧ್ಯಭಾಗದಲ್ಲಿ ಆರಂಭವಾಗಬೇಕಿದ್ದ ಶೋ ಜನವರಿ ಮಧ್ಯಭಾಗಕ್ಕೆ ಮುಂದೂಡಲ್ಪಟ್ಟಿದೆ. ಈಗಾಗಲೇ ಶೋ ತಯಾರಿ ಆರಂಭವಾಗಿದ್ದು, ಅಭಿನಯ ಚಕ್ರವರ್ತಿ ಸುದೀಪ್, ತಮ್ಮ ಬಹುನೀರಿಕ್ಷಿತ ಫ್ಯಾಂಟಮ್ ಚಿತ್ರದ ನಡುವೇಯೇ ಬಿಗ್ ಬಾಸ್ ಶೂಟಿಂಗ್ ಗಾಗಿ ಸಿದ್ದವಾಗುತ್ತಿದ್ದಾರೆ.

ಈ ಮಧ್ಯೆ ಸೀಸನ್ 8 ರ ಅತಿಥಿಗಳ್ಯಾರು? ದೊಡ್ಮನೆಯಲ್ಲಿ ಬಣ್ಣವಿಲ್ಲದೇ ನಟಿಸಿ ಗೆದ್ದು ಬರೋರ್ಯಾರು ಎಂಬ ಪ್ರಶ್ನೆಗೆ ಸೀಸನ್ ಆರಂಭವೇ ಉತ್ತರ ಹೇಳಬೇಕಿದ್ದರೂ ಎಲ್ಲ ಸೀಸನ್ ನಂತೆ ಈ ಭಾರಿಯೂ ಒಂದೊಂದು ಕ್ಷೇತ್ರದಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡಲಾಗಿದೆ.

ಇತ್ತೀಚಿಗೆ ತನ್ನ ಸುಳ್ಳಿನಿಂದ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ ಡ್ರೋಣ್ ಪ್ರತಾಪ್, ಗಾಯಕ ಸುನೀಲ್, ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್, ಕಮಲಿ ಸೀರಿಯಲ್ ನ ಕಮಲಿ ಪಾತ್ರಧಾರಿ, ಕನ್ನಡಪರ ಹೋರಾಟ ಗಾರ ರೂಪೇಶ್ ರಾಜಣ್ಣ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಜೊತೆಗೆ ಅವಧೂತರೆಂದೇ ಪ್ರಸಿದ್ಧರಾಜ ವಿನಯಗುರೂಜಿ ಕೂಡ ಬಿಗ್ ಬಾಸ್ ಮನೆ ಸೇರಲಿದ್ದಾರೆ.

ಒಟ್ಟಿನಲ್ಲಿ ಮತ್ತೆ ಕನ್ನಡ ಬಿಗ್ ಬಾಸ್ ಮನೆಯಲ್ಲಿ ಕಲರವ ಆರಂಭವಾಗೋ ಕಾಲ ಸನ್ನಿಹಿತ ವಾಗಿದ್ದು, ಕೆಂಗೇರಿ ಬಳಿ ಇರೋ ಬಿಗ್ ಬಾಸ್ ಸೆಟ್ ನ ನವೀಕರಣ ಕಾರ್ಯ ಕೂಡ ಚುರುಕುಗೊಂಡಿದೆ. ಸದ್ಯ ತೆಲುಗು ಬಿಗ್ ಬಾಸ್ ನಲ್ಲಿ ಅತಿಥಿಯಾಗಿ ಪಾಲ್ಗೊಂಡು ಉತ್ಸಾಹ ದುಪ್ಪಟ್ಟುಗೊಳಿಸಿಕೊಂಡಿರೋ ಕಿಚ್ಚ ಸುದೀಪ್ ಕನ್ನಡದಲ್ಲೂ ಒಂಟಿಮನೆ ಆಟಕ್ಕೆ ರೆಫರಿಯಾಗಲು ಸರ್ವಸನ್ನಧ್ದರಾಗಿದ್ದು ಕನ್ನಡಿಗರಿಗೆ ಸಂಕ್ರಾತಿ ಬಳಿಕ ರಸದೌತಣ ಕಾದಿದೆ.

Comments are closed.