ಮಂಗಳವಾರ, ಏಪ್ರಿಲ್ 29, 2025
HomeBreakingಗೋವಾದ ನೌಕೆಯಲ್ಲಿ ಮಗನ ಹುಟ್ಟುಹಬ್ಬ…! ರಾಕಿಂಗ್ ದಂಪತಿ ಹಂಚಿಕೊಂಡ್ರು ಅದ್ದೂರಿ ವಿಡಿಯೋ….!!

ಗೋವಾದ ನೌಕೆಯಲ್ಲಿ ಮಗನ ಹುಟ್ಟುಹಬ್ಬ…! ರಾಕಿಂಗ್ ದಂಪತಿ ಹಂಚಿಕೊಂಡ್ರು ಅದ್ದೂರಿ ವಿಡಿಯೋ….!!

- Advertisement -

ಸಧ್ಯ ಎರಡು ಮುದ್ದಾದ ಮಕ್ಕಳೊಂದಿಗೆ ಸಂಭ್ರಮದಿಂದ ದಿನ ಕಳೆಯುತ್ತಿರೋ  ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಮೊನ್ನೆ-ಮೊನ್ನೆಯಷ್ಟೇ ತಮ್ಮ ಮಗನ ಒಂದು ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಗೋವಾದಲ್ಲಿ ನಡೆದ  ಈ  ಹುಟ್ಟುಹಬ್ಬದ ವಿಡಿಯೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.

ಅಕ್ಟೋಬರ್ 30 ರಂದು ರಾಧಿಕಾ ಹಾಗೂ ಯಶ್ ಪುತ್ರ ಯಥರ್ವ್ ಯಶ್ ಒಂದು ವರ್ಷ ಪೊರೈಸಿದ್ದಾರೆ. ಈ ಖುಷಿಯನ್ನು ವಿಭಿನ್ನವಾಗಿ ಆಚರಿಸಲು ಪ್ಲ್ಯಾನ್ ಮಾಡಿದ ಯಶ್ ದಂಪತಿ ಗೋವಾದಲ್ಲಿ ಪ್ರವಾಸಿ ನೌಕೆಯಲ್ಲಿ  ಮಗನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.

ಬ್ಲೂ ವೈಟ್ ಥೀಮ್ ನಲ್ಲಿ ನಡೆದ  ಈ ಬರ್ತಡೇಯಲ್ಲಿ ಬ್ಲೂ ಹಾಗೂ ವೈಟ್ ಕಾಮಿನೇಶನ್ ಬಾಸ್ ಕೇಕ್ ಸಿದ್ಧಪಡಿಸಲಾಗಿತ್ತು. ಯಶ್ ಲೈಟ್ ಬ್ಲೂ ಹಾಗೂ ಯಥರ್ವ್ ಬ್ಲೂ ಕಾಮಿನೇಶನ್ ಡ್ರೆಸ್ ನಲ್ಲಿ ಮಿಂಚಿದ್ದರೇ, ರಾಧಿಕಾ ಹಾಗೂ ಆಯ್ರಾ ಸೇಮ್ ಥೀಮ್ ನ ಗೌನ್ ನಲ್ಲಿ ಮನಸೆಳೆದಿದ್ದಾರೆ. ವಿಶಾಲ ಸಮುದ್ರದಲ್ಲಿ ತೇಲುವ ನೌಕೆಯಲ್ಲಿ ಪುಟ್ಟ-ಪುಟ್ಟ ಮಕ್ಕಳ ಜೊತೆ ರಾಮಾಚಾರಿ ಜೋಡಿ ಸುಂದರ ವಿಹಾರ ನಡೆಸಿದ್ದು, ಮನಸೆಳೆಯುವ ಆಪ್ತ ವಿಡಿಯೋವನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಯ್ರಾ ಬರ್ತಡೇಯನ್ನು ಕಳೆದ ಡಿಸೆಂಬರ್ ನಲ್ಲಿ ಫನ್ ವರ್ಲ್ಡ್ ನಲ್ಲಿ ಅದ್ದೂರಿಯಾಗಿ ಆಚರಿಸಿದ್ದ ತಾರಾಜೋಡಿ ಸ್ಯಾಂಡಲ್ ವುಡ್ ಗಣ್ಯರನ್ನು ಆಹ್ವಾನಿಸಿತ್ತು. ಆದರೆ ಕೊರೋನಾ ಎಫೆಕ್ಟ್ ನಿಂದ ಯಶ್-ರಾಧಿಕಾ ಪುತ್ರನ   ನಾಮಕರಣವನ್ನು ತಮ್ಮ ಫಾರ್ಮ್ ಹೌಸ್ ನಲ್ಲಿ ಖಾಸಗಿಯಾಗಿ ಕೇವಲ ಎರಡು ಕುಟುಂಬದ ಹಿರಿಯರ ಸಮ್ಮುಖದಲ್ಲಿ ನಡೆಸಿದ್ದರು.

ಇನ್ನುಮನಸೆಳೆಯುವಂತೆ ನಡೆದ  ಈಬರ್ತಡೇ ಪೋಟೋ ಹಾಗೂ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ರಾಧಿಕಾ ಅಷ್ಟೇ ಸುಂದರವಾದ ಕ್ಯಾಪ್ಸನ್ ಕೂಡ ನೀಡಿದ್ದು, ನಿನಗೆ ಇಂದು ನೀನು ತಿಂದ ಕೇಕ್ ನ ಫ್ಲೇವರ್ ನೆನಪಿಲ್ಲದೇ ಇರಬಹುದು. ಈ ದಿನ ಇಷ್ಟು ಸ್ಪೇಶಲ್ ಯಾಕೆ ಅನ್ನೋದು ಗೊತ್ತಿಲ್ಲದೇ ಇರಬಹುದು. ಆದರೆ ತಂದೆ-ತಾಯಿಯಾಗಿ ಈ ಸಂಭ್ರಮವನ್ನು ನಾವು ಜೀವನದುದ್ದಕ್ಕೂ ಮೆಲುಕು ಹಾಕುತ್ತೇವೆ. ಈ ಪುಟ್ಟ ಖುಷಿಗೆ, ನಮ್ಮ ಪೋಷಕರಾದ ಖುಷಿಗೆ ಆಗಲೇ ಒಂದು ವರ್ಷ . ಹ್ಯಾಪಿ ಬರ್ತಡೇ ಎಂದು ಬರೆದಿದ್ದಾರೆ.

RELATED ARTICLES

Most Popular