ಬೆಳಕಿನ ಹಬ್ಬಕ್ಕೆ ದೇಸಿ ಟಚ್…! ಮಾರುಕಟ್ಟೆಗೆ ಬಂತು ಬಿದಿರಿನ ಕ್ಯಾಂಡಲ್…!

ತ್ರಿಪುರಾ: ಪರಿಸರ ಸ್ನೇಹಿ ಗಣೇಶ ಚತುರ್ಥಿ ಹಾಗೂ ನವರಾತ್ರಿ ಬಳಿಕ ಇದೀಗ ಪರಿಸರ ಸ್ನೇಹಿ ದೀಪಾವಳಿ  ಪರಿಕಲ್ಪನೆಗೆ ಜನರು ಆಕರ್ಷಿತರಾಗಿದ್ದು, ಪರಿಸರ ಸ್ನೇಹಿ ಹಣತೆಗಳಿಗೆ ಬೇಡಿಕೆ ಹೆಚ್ಚಿದೆ. ಈ ಸಾಲಿಗೆ ಇದೀಗ ಪರಿಸರ ಸಹಜವಾಗಿ ಸಿಗುವ ಬಿದಿರಿನಿಂದ ಸಿದ್ಧಪಡಿಸಲಾದ ಹಣತೆಗಳು ಸೇರ್ಪಡೆಗೊಂಡಿದ್ದು ಮನಸೆಳೆಯುತ್ತಿವೆ.

ಪ್ರಧಾನಿ ಮೋದಿ ಆತ್ಮನಿರ್ಭರಯೋಜನೆಯಿಂದ ಪ್ರೇರೇಪಿತರಾಗಿ ಒಡಿಸ್ಸಾದ ತೈಬಂದಲನ್ ಮಹಿಳೆಯರು ಬಿದಿರನ್ನು ಬಳಸಿಕೊಂಡು ಕ್ಯಾಂಡಲ್ ತಯಾರಿಸಿದ್ದು ಇದನ್ನು ದೀಪಾವಳಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಸಿಪಿಜಾಲಾ ಮ್ಯಾಜಿಸ್ಟ್ರೇಟ್ ವಿಶ್ವಶ್ರೀ ಬಿ ಹಾಗೂ ಸ್ವಸಹಾಯ ಸಂಘದ ಸಮ್ಮುಖದಲ್ಲಿ ಸರಳವಾಗಿ ತಮ್ಮ ಚೇಂಬರ್ ನಲ್ಲೇ  ತ್ರಿಪುರಾ ಸಿಎಂ ಬಿಪ್ಲವ್ ದೇವ್ ಬಿದಿರಿನ ಕ್ಯಾಂಡಲ್ ಲಾಂಚ್ ಮಾಡಿದ್ದಾರೆ.  

ಇದರೊಂದಿಗೆ ಮಹಿಳೆಯರು ಸಿದ್ಧಪಡಿಸಿದ ಅನಾನಸ್,ಬೆಲ್ಲ,ಸಕ್ಕರೆಯ ಜಾಮ್ ನ್ನು ಸಿಎಂ ಲಾಂಚ್ ಮಾಡಿದ್ದಾರೆ. ಮೋದಿಯವರ ತ್ಮನಿರ್ಭರ ಭಾರತದ ಕಲ್ಪನೆಯಿಂದ ಸ್ವಯಂಪ್ರೇರಿತರಾಗಿ ಹೀಗೆ ಬಿದಿರಿನ ಹಣತೆಯನ್ನು ತಯಾರಿಸಿದ್ದಾರೆ. ಇದನ್ನು ಖರೀದಿಸಿ ಮಹಿಳೆಯರ ಪ್ರಯತ್ನವನ್ನು ಪ್ರೋತ್ಸಾಹಿಸಿ ಎಂದು ಸಿಎಂ ಮನವಿ ಮಾಡಿದ್ದಾರೆ.

ಕಾಡಿನಲ್ಲಿ ಹೇರಳವಾಗಿ ಸಿಗುವ ಬಿದಿರಿನ ಬೊಂಬು ಹಾಗೂ ಮೇಣದಬತ್ತಿಯ ಕಚ್ಚಾವಸ್ತು ಬಳಸಿ ಮೇಣದ ಬತ್ತಿಯನ್ನು ಸಿದ್ಧಪಡಿಸಲಾಗಿದ್ದು, ಆಕರ್ಷಕವಾಗಿ ಸಜ್ಜುಗೊಳಿಸಲಾಗಿದೆ.

ಸ್ಥಳೀಯ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಮೋದಿಯವರ ಯೋಜನೆಯ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬಂದ  ಈ ಬಿದಿರಿನ ಉತ್ಪನ್ನಗಳು ಹೊಸ ಆಕರ್ಷಣೆಯಾಗಿದ್ದು, ಜನರ ಉತ್ತಮ ರೆಸ್ಪಾನ್ಸ್ ಸಿಗೋ ಭರವಸೆ ಮೂಡಿದೆ.

Comments are closed.