ಸೋಮವಾರ, ಏಪ್ರಿಲ್ 28, 2025
HomeBreakingಸಂಕಷ್ಟಗಳ ಜೊತೆಗೆ ಎದುರಾಯ್ತು ನಿರಾಸೆ….! ಚಾಮುಂಡೇಶ್ವರಿ ದರ್ಶನ ಪಡೆಯಲಾಗದೇ ಬೇಸರಗೊಂಡ ನಟ ದರ್ಶನ್…!!

ಸಂಕಷ್ಟಗಳ ಜೊತೆಗೆ ಎದುರಾಯ್ತು ನಿರಾಸೆ….! ಚಾಮುಂಡೇಶ್ವರಿ ದರ್ಶನ ಪಡೆಯಲಾಗದೇ ಬೇಸರಗೊಂಡ ನಟ ದರ್ಶನ್…!!

- Advertisement -

ಅದ್ಯಾಕೋ ಗೊತ್ತಿಲ್ಲ ಒಂದಾದ ಮೇಲೊಂದರಂತೆ ವಿವಾದಗಳು ಚಾಲೆಂಜಿಂಗ್ ಸ್ಟಾರ್ ದರ್ಶನರನ್ನೇ ಆವರಿಸಿಕೊಳ್ಳುತ್ತಿದೆ. 25 ಕೋಟಿ ಸಾಲ ಪ್ರಕರಣದ ಗೊಂದಲಗಳ ಮಧ್ಯೆಯೇ ದರ್ಶನ್ ಹಾಗೂ ಸ್ನೇಹಿತರು ವೇಟರ್ ಮೇಲೆ ಹಲ್ಲೆ ಮಾಡಿದ ಆರೋಪ ಹುಟ್ಟಿಕೊಂಡಿದೆ. ಇವೆಲ್ಲದರ ಮಧ್ಯೆ ದೇವರ ಮೋರೆ ಹೋಗಿದ್ದ ದರ್ಶನ್ ಗೆ ಚಾಮುಂಡೇಶ್ವರಿ ದರ್ಶನಕ್ಕೂ ಅಡ್ಡಿ ಉಂಟಾಗಿದೆ.

ನಟ ದರ್ಶನ ಪ್ರಾಣಿ ಪ್ರಿಯ ಜೊತೆಗೆ ಮೈಸೂರು ಚಾಮುಂಡೇಶ್ವರಿ ಭಕ್ತ. ಆಷಾಢ ಮಾಸದ ಶುಕ್ರವಾರಗಳಲ್ಲಿ ತಪ್ಪದೇ ಚಾಮುಂಡೇಶ್ವರಿ ದರ್ಶನ ಪಡೆಯುತ್ತಾರೆ ನಟ ದರ್ಶನ. ಆದರೆ ಕೊರೋನಾ ಬಳಿಕ ಬಾಗಿಲು ತೆರೆದಿದ್ದರೂ ಮೊದಲ ಆಷಾಢ ಶುಕ್ರವಾರ ಪೂಜೆ ಸಲ್ಲಿಸಲಾಗದೇ ದರ್ಶನ ನಿರಾಸೆ ಅನುಭವಿಸಿದ್ದಾರೆ.

ಕೊರೋನಾ ನಿಯಮಗಳು ಸಡಿಲಿಕೆಯಾದ ಬಳಿಕ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭಕ್ತರ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಾಮಾನ್ಯವಾಗಿ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ಸಾವಿರಾರು ಭಕ್ತರು ಹರಿದು ಬರೋ ಸಂಪ್ರದಾಯ ಇರೋದರಿಂದ ಜನಸಂದಣಿ ನಿಯಂತ್ರಿಸಲು ಆಷಾಢ ಶುಕ್ರವಾರ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ‘

ಹೀಗಾಗಿ ಮೈಸೂರಿನಲ್ಲೇ ಇದ್ದರೂ ನಟ ದರ್ಶನ ಚಾಮುಂಡೇಶ್ವರಿ ಪಡೆಯಲು ಸಾಧ್ಯವಾಗಿಲ್ಲ. ವೇಟರ್ ಮೇಲೆ ಹಲ್ಲೆ ಮಾಡಿದ ಪ್ರಕರಣದ ಬಳಿಕ ನಿನ್ನೆ ಸಂದೇಶ ಪ್ರಿನ್ಸ್ ಹೊಟೇಲ್ ಗೆ ಭೇಟಿ ನೀಡಿದ್ದ ದರ್ಶನ ಬಳಿಕ ಫಾರ್ಮ ಹೌಸ್ ಗೆ ತೆರಳಿದ್ದರು.

ಶುಕ್ರವಾರ ಮುಂಜಾನೆ ದೇವಿ ದರ್ಶನಕ್ಕೆ ಹೊರಟಿದ್ದ ವೇಳೆ ದರ್ಶನಕ್ಕೆ ಅನುಮತಿ ಇಲ್ಲದ ಸಂಗತಿ ತಿಳಿದು ಸ್ನೇಹಿತ ಮನೆಯಲ್ಲಿ ನಡೆಯುತ್ತಿದ್ದ ಆಷಾಢ ಶುಕ್ರವಾರ ಪೂಜೆಗೆ ತೆರಳಿದ್ದಾರೆ ಎನ್ನಲಾಗಿದೆ.

RELATED ARTICLES

Most Popular