ಸೋಮವಾರ, ಏಪ್ರಿಲ್ 28, 2025
HomeBreakingನೀವು ಮನೆಯಿಂದ ಹೊರಗೆ ಇಡುವ ಹೆಜ್ಜೆ ಸಾವಿನ ಮನೆಯತ್ತ ಇಟ್ಟಂತೆ….! ಕೊರೋನಾ ಭೀಕರತೆ ವಿವರಿಸಿದ ಗೂಗ್ಲಿ...

ನೀವು ಮನೆಯಿಂದ ಹೊರಗೆ ಇಡುವ ಹೆಜ್ಜೆ ಸಾವಿನ ಮನೆಯತ್ತ ಇಟ್ಟಂತೆ….! ಕೊರೋನಾ ಭೀಕರತೆ ವಿವರಿಸಿದ ಗೂಗ್ಲಿ ಚೆಲುವೆ…!!

- Advertisement -

ಕೊರೋನಾ ಮಹಾಮಾರಿ ಭಾರತದಲ್ಲಿ ಎಲ್ಲೇ ಮೀರಿದೆ. ಪ್ರತಿನಿತ್ಯ ಸಾವಿರಾರು ಜನರು ಸೋಂಕಿಗೆ ತುತ್ತಾಗುತ್ತಿದ್ದು, ಆಕ್ಸಿಜನ್ ಸೇರಿದಂತೆ ಜೀವನಾಶ್ಯಕ ವಸ್ತುಗಳ ಕೊರತೆ ಜನರ ಬದುಕಿಗೆ ಮಾರಕವಾಗುತ್ತಿದೆ.  ಸ್ಯಾಂಡಲ್ ವುಡ್, ಬಾಲಿವುಡ್ ನಟ-ನಟಿಯರು ಕೊರೋನಾ ಸೋಂಕಿನಿಂದ ನರಳುತ್ತಿದ್ದಾರೆ. ಈ ಮಧ್ಯೆ ಬಹುಭಾಷಾ ನಟಿ ಕೃತಿ ಕರಬಂದ ಕೊರೋನಾ ಮಾರಕತೆಯನ್ನು ವಿವರಿಸಿದ್ದು, ದಯವಿಟ್ಟು ಎಚ್ಚರಿಕೆ ವಹಿಸಿ ಎಂದಿದ್ದಾರೆ.

ನನ್ನ ಮನೆಯಲ್ಲಿ ಹಲವರು ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಕಳೆದ 48 ಗಂಟೆಗಳು ನನ್ನ ಕುಟುಂಬಕ್ಕೆ ಅತ್ಯಂತ ಸಂಕಷ್ಟಕರವಾಗಿತ್ತು. ತುಂಬ ತಾಳ್ಮೆ ಹಾಗೂ ಕಷ್ಟದಿಂದ ಈ ಪರಿಸ್ಥಿತಿ ಎದುರಿಸಿದ್ದೇವೆ.

ಹೀಗಾಗಿ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ದಯವಿಟ್ಟು ಎಲ್ಲರೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ್ದಾರೆ.

https://kannada.newsnext.live/national/india-complete-lockdown-supreme-court-direction-central-governament/amp/

ಕೊರೋನಾ ಮನೆಗೆ ಬರುವವರೆಗೂ ಅದರ ಭಯಾನಕತೆ ಅರಿವಾಗುವುದಿಲ್ಲ. ಆದರೆ ಮನೆಗೆ ಬಂದ ಮೇಲೆ ಅದರ ತೀವ್ರತೆ ಅರಿವಾಗುತ್ತದೆ. ಹೀಗಾಗಿ ನೀವು ಮನೆಯಿಂದ ಹೊರಗೆ ಇಡುವ ಪ್ರತಿಯೊಂದು ಹೆಜ್ಜೆಯೂ ಸಾವಿನ ಮನೆಯತ್ತ ಕರೆದೊಯ್ಯುತ್ತದೆ ಎಂದು ಕೃತಿ ಎಚ್ಚರಿಸಿದ್ದಾರೆ.

ಕೊರೋನಾ ಸಂಕಷ್ಟದಲ್ಲಿ  ತಾನು ಹಾಗೂ ತನ್ನ ಕುಟುಂಬ ಅನುಭವಿಸಿದ ನೋವನ್ನು ಹಂಚಿಕೊಂಡಿರುವ ಕೃತಿಕರಬಂದ ಸುರಕ್ಷಿತವಾಗಿರಿ ಎಂದು ಜನರಿಗೆ ಹಾಗೂ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಕನ್ನಡದ ಗೂಗ್ಲಿ, ಗಲಾಟೆ,ಸೂಪರ್ ರಂಗ,ಬೆಳ್ಳಿ,ದಳಪತಿ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿರುವ ಕೃತಿಕರಬಂದ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಮುಂಬೈನಲ್ಲೇ ವಾಸವಾಗಿದ್ದಾರೆ. ಮುಂಬೈನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಸರ್ಕಾರ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದ್ದು, ಲಾಕ್ ಡೌನ್ ಮಧ್ಯದಲ್ಲೂ ಕಾಡಿದ ಕರೋನಾ ಭಯಾನಕ ಅನುಭವವನ್ನು ಕೃತಿ ಬಿಚ್ಚಿಟ್ಟಿದ್ದಾರೆ.

RELATED ARTICLES

Most Popular