ಕೊರೋನಾ ಸಂದಿಗ್ಧದಲ್ಲಿ ವೈದ್ಯೋ ನಾರಾಯಣೋ ಹರಿ: ಎನ್ನುತ್ತಿದೆ ಪ್ರೇಮಂ ಪೂಜ್ಯಂ ಚಿತ್ರತಂಡ…!!

ಸ್ಯಾಂಡಲ್ ವುಡ್ ಲವ್ಲಿಸ್ಟಾರ್ ಪ್ರೇಮ್ ತಮ್ಮ 25 ನೇ ಚಿತ್ರದ ಸಂಭ್ರಮದಲ್ಲಿದ್ದಾರೆ. ಆದರೆ ಚಿತ್ರದ ರಿಲೀಸ್, ಶೂಟಿಂಗ್ ಗೆ ಕೊರೋನಾ ಅಡ್ಡಿಯಾಗಿದೆ. ಆದರೂ ಚಿತ್ರತಂಡ ಕೊರೋನಾ ಸಂದಿಗ್ಧದಲ್ಲಿ ವೈದ್ಯರನ್ನು ಗೌರವಿಸಲು ಮುಂದಾಗಿರುವ ಚಿತ್ರತಂಡ ವೈದ್ಯರಿಂದ ವೈದ್ಯರಿಗೋಸ್ಕರ ಕಾನ್ಸೆಪ್ಟ್ ನಲ್ಲಿ  ಹಾಡೊಂದನ್ನು ಬಿಡುಗಡೆ ಮಾಡಿದೆ.

ಪ್ರೇಮ್ ನ 25 ಸಿನಿಮಾ ಪ್ರೇಮಂ ಪೂಜ್ಯಂ. ಈ ಚಿತ್ರಕ್ಕೆ ಚಿತ್ರತಂಡ ಧರ್ಮಸ್ಥಳ ಧರ್ಮಾಧಿಕಾರಿಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಪೋಸ್ಟರ್ ರಿಲೀಸ್ ಮಾಡಿ ಚಿತ್ರೀಕರಣ ನಡೆಸಿದ್ದ ಚಿತ್ರತಂಡ ಮೊದಲ ಹಾಡನ್ನು ರಿಲೀಸ್ ಮಾಡಿದೆ.

ಸಿನಿಮಾದ ಟೀಸರ್ ಹಾಗೂ ಹಾಡುಗಳು ವಿಭಿನ್ನವಾಗಿದ್ದು, ಮನಸೆಳೆಯುತ್ತಿದೆ. ಸಧ್ಯ ಕೊರೋನಾ ಸಂದಿಗ್ಧದಲ್ಲಿ ಜೀವದ ಹಂಗು ತೊರೆದು ಜನರ  ಹಾಗೂ ಕೊರೋನಾ ರೋಗಿಗಳ ಸೇವೆ ,ಮಾಡ್ತಿರೋ ವೈದ್ಯರಿಗಾಗಿ ಚಿತ್ರತಂಡ ಹಾಡು ಬಿಡುಗಡೆ ಮಾಡಿದೆ.

ನಿರ್ದೇಶಕ ಡಾ.ರಾಘವೇಂದ್ರ್ ಸಾಹಿತ್ಯ ಬರೆದು ಸಂಗೀತ ನೀಡಿರುವ  ಈ ಹಾಡನ್ನು ವೈದ್ಯರಿಂದ ವೈದ್ಯರಿಗಾಗಿ ಡೆಡಿಕೇಟ್ ಮಾಡೋದಾಗಿ ಚಿತ್ರತಂಡ ಹೇಳಿಕೊಂಡಿದೆ.

ಈ ಹಾಡನ್ನು ಧರ್ಮಾಧಿಕಾರಿ ಡಾ.ವಿರೇಂದ್ರ್ ಹೆಗ್ಗಡೆಯವರಿಂದ ಬಿಡುಗಡೆ ಮಾಡಿಸಲಾಗಿದೆ. ವೈದ್ಯೋ ನಾರಾಯಣೋ ಹರಿಃ ಎಂಬ ಸಾಲುಗಳ ಹಾಡಿನ ಮಹತ್ವ ಸಾರುತ್ತಿವೆ.

ಈ ಹಾಡಿನ ಬಗ್ಗೆ ಹಾಗೂ ಕೊರೋನಾ ವಾರಿಯರ್ಸ್ ಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡಿರುವ ನಟ ಪ್ರೇಮ್ ತಮ್ಮ 25 ನೇ ಸಿನಿಮಾವನ್ನು ಪ್ರೋತ್ಸಾಹಿಸುವಂತೆ ಕೋರಿದ್ದಾರೆ.

Comments are closed.