ಮಂಗಳವಾರ, ಏಪ್ರಿಲ್ 29, 2025
HomeBreakingShambhavi venkatesh:ಕೆಜಿಎಫ್ ನಟಿಗೆ ಅಮ್ಮನಾಗಿ ಭಡ್ತಿ….! ಅವಳಿ ಮಕ್ಕಳ ತಾಯಿಯಾದ ಶಾಂಭವಿ ವೆಂಕಟೇಶ್….!!

Shambhavi venkatesh:ಕೆಜಿಎಫ್ ನಟಿಗೆ ಅಮ್ಮನಾಗಿ ಭಡ್ತಿ….! ಅವಳಿ ಮಕ್ಕಳ ತಾಯಿಯಾದ ಶಾಂಭವಿ ವೆಂಕಟೇಶ್….!!

- Advertisement -

ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಶಾಂಭವಿ ವೆಂಕಟೇಶ್ ತಾಯ್ತನದ ಸಂಭ್ರಮದಲ್ಲಿದ್ದಾರೆ. ಶಾಂಭವಿಯವರಿಗೆ ಜೂನ್ 4 ರಂದು ಅವಳಿಜವಳಿ ಮಕ್ಕಳು ಜನಿಸಿದ್ದು, ಈ ಖುಷಿಯನ್ನು ಶಾಂಭವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೆಜಿಎಫ್ ಹಾಗೂ ಪೈಲ್ವಾನ್ ಸಿನಿಮಾದಲ್ಲಿ ನಟಿಸಿದ ಶಾಂಭವಿ ವೆಂಕಟೇಶ್, ಕಿರುತೆರೆಯಲ್ಲೂ ಸಕ್ರಿಯವಾಗಿದ್ದು, ಸಾಕಷ್ಟು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.

ಇತ್ತೀಚಿಗಷ್ಟೇ ಬೇಬಿಬಂಪ್ ಜೊತೆ ಸಖತ್ ಪೋಟೋಶೂಟ್ ಮಾಡಿಸಿದ್ದ ಶಾಂಭವಿ. ಇದೊಂತರ ವಿಚಿತ್ರ ಅನುಭವ. ಮಕ್ಕಳು ನನ್ನೊಳಗೆ ಇದ್ದರೂ ನಾನು ಅವರನ್ನು ನೋಡಬೇಕು, ಮುಟ್ಟಬೇಕು ಎಂಬ ಹಂಬಲ ತಡೆಯಲಾಗುತ್ತಿಲ್ಲ ಎಂದು ಬರೆದುಕೊಂಡಿದ್ದರು.

ಡೆಲಿವರಿಯಾದ 15 ದಿನಗಳ  ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ಖುಷಿಯ ಸಂಗತಿ ಹಂಚಿಕೊಂಡಿರುವ ಶಾಂಭವಿ ವೆಂಕಟೇಶ್, ಡೆಲಿವರಿ ಆಯ್ತಾ? ಎಷ್ಟೊಂದು ಮೆಸೆಜ್ ಗಳು ಬಂದಿವೆ. ಹೌದು ಡೆಲಿವರಿಯಾಗಿದೆ. ನಾನು ಒಂದು ಹೆಣ್ಣು ಹಾಗೂ ಗಂಡು ಮಗುವಿನ ತಾಯಿಯಾಗಿದ್ದೇನೆ. ಅವಳಿ-ಜವಳಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ಶಾಂಭವಿ ಸಾಕಷ್ಟು ಲಿಪ್ ಸಿಂಕ್ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಗಮನ ಸೆಳೆದಿದ್ದಾರೆ.

ಕನ್ನಡದ ಪಾರು,ಗೀತಾಂಜಲಿ,ನಿಗೂಢ ರಾತ್ರಿ ಸೇರಿದಂತೆ ಹಲವು ಸೀರಿಯಲ್ ನಲ್ಲಿ ನಟಿಸಿರುವ ಶಾಂಭವಿ ಅಮ್ಮನಾಗಿ ಭಡ್ತಿ ಪಡೆದಿದ್ದಕ್ಕೆ ಕಿರುತೆರೆ ನಟ-ನಟಿಯರು ಶುಭಕೋರಿದ್ದಾರೆ.

RELATED ARTICLES

Most Popular